ವ್ಯಾಸ ಜೋಶಿ ಅವರ ಕವಿತೆ-ಶ್ರದ್ಧಾಂಜಲಿ_(ಮಾತೆಗೆ ಅಶ್ರುತರ್ಪಣ)

ಕಾವ್ಯ ಸಂಗಾತಿ

ವ್ಯಾಸ ಜೋಶಿ ಅವರ ಕವಿತೆ-ಶ್ರದ್ಧಾಂಜಲಿ_(ಮಾತೆಗೆ ಅಶ್ರುತರ್ಪಣ)

ಎಷ್ಟೊಂದು ಕೂಗಿದರೂ
ಓ ಏನಲಾರೆ ನೀನು.
ಬಾ ಎಂದು ಕರೆದರೂ
ಬರಲಾರೆ ನೀನು.

ಸ್ನಾನ ಮಾಡಿಸಬಂದೆ
ಕಾಣಲಾರೆ ನೀನು.
ಅಡುಗೆ ಮಾಡಿ ನೀಡಿದರೂ
ಉಣಲಾರೆ ನೀನು.

ನಿನ್ನ ಬಗ್ಗೆ ಬರೆದರೂ
ಓದಲಾರೆ ನೀನು.
ಕವಿತೆ ಬರೆದು ಹಾಡಲು
ಕೇಳಲಾರೆ ನೀನು.

ಋತ ನಿಯಮ ಆಚರಿಸಿದ
ಋಣಮುಕ್ತಳು ನೀನು.
ನಿನಗೆ ಬರೀ ತಿಲ ತರ್ಪಣ
ಭರಿಸಲಾರೆ ನಿನ್ನ ಋಣ.

ಹೇಳಿ ಹೋಗಿರುವೆ ನೀನು.
ಕ್ಷಮಿಸು, ಕಾಡುತಿರುವ ನನ್ನನ್ನ.
ಕಣ್ಣು ತೇವಾದವು ನೋಡು
ರಮಿಸು ಬಾ ನನ್ನನ್ನ.

ಮತ್ತೊಮ್ಮೆ ಹುಟ್ಟದಿರು ನೀನು
ದಕ್ಕಿದೆ ನಿನಗೆ ನಿಶ್ಚಿತ ನಾಕ
ನಿನ್ನ ನೆನಪು, ಆಶೀರ್ವಾದ
ಬೇಕೆನಗೆ ನಾನಿರುವ ತನಕ.

——————————

ವ್ಯಾಸ ಜೋಶಿ.

Leave a Reply

Back To Top