ಭಾವಯಾನಿ ಅವರ ಕವಿತೆ-ಒಲವ ಹಣತೆ

ಪ್ರತೀ ಬಾರಿಯೂ ಒಲವಿಗೆ ಸಾಕ್ಷಿ ಹೇಳಬೇಕೆಂದರೆ
ಹೇಗೆ ಸಾಧ್ಯ ಗೆಳತಿ?
ನಾನಂತು ಒಲವನ್ನು ತೂಕ ಮಾಡಲಾಗದ ಬಡಪಾಯಿ!!

ಅಲ್ಲೆಲ್ಲೋ ನೀನು ನನಗಾಗಿ ಪರಿತಪಿಸುವಾಗ
ನನ್ನೆದೆ ಕೂಡ ನಿನಗಾಗಿ ಹಂಬಲಿಸುತ್ತದೆ
ಆದರೇನು?
ನಾ ಮಣ್ಣ ಋಣ ತೀರಿಸಲು ಹುಟ್ಟಿದವ..
ಅಗಲಿಕೆ ಅನಿವಾರ್ಯ ಕಣೇ!

ಶತ್ರುಗಳ ಗುಂಡು ಎದೆ ಹೊಕ್ಕಿತೇನೋ ಎಂಬ ಚಿಂತೆ ನನಗಿಲ್ಲ..
ನೀನಲ್ಲಿ ನೋವಿಗೆಲ್ಲಿ ಮರುಗಿ ಸೊರಗುವಿಯೋ ಎಂಬ ಭಯ ನನಗೆ!!

ಹಚ್ಚಿಡುವ ಹಣತೆ ಬೆಳಕಿನಲ್ಲಿ
ನಿನ್ನ ಮೊಗದ ಅಂದ ಸವಿಯಲು
ಬಂದೇ ಬರುವೆ ನಿನಗಾಗಿ..
ಪ್ರೀತಿ ಹಣತೆ ಹಚ್ಚುವ ಕಾಯಕ ಮಾತ್ರ
ನಿಲ್ಲಿಸದಿರು ಸಖಿ!!


One thought on “ಭಾವಯಾನಿ ಅವರ ಕವಿತೆ-ಒಲವ ಹಣತೆ

Leave a Reply

Back To Top