ಕಾವ್ಯ ಸಂಗಾತಿ
ಕಾವ್ಯ ಸುಧೆ. ( ರೇಖಾ )
ಸಾಂಕೇತಿಕ
ನಾ ಹೆಣ್ಣು ನೀ ಗಂಡು
ನಂಬಿಕೆಯೇ ತಳಹದಿ
ತೂಗುತ್ತಿರುವೆವದನೇ
ಸಂಸಾರದ ತಕ್ಕಡಿ
ತಪ್ಪಿಲ್ಲ ಆಯ ಬೆಪ್ಪಿಲ್ಲ ತಕ್ಕಡಿ
ಬದಲಾವಣೆಯ ಜಗತ್ತಿನಲ್ಲಿ
ಕಾಯ್ದುಕೊಂಡಿದ್ದದೆ ನಂಬಿಕೆಯ
ಸ್ಥಿರತೆ ಹಲವು ಆಲೋಚನೆ
ವಿವಿಧ ಯೋಜನೆ ಯೋಚನೆ….
ಜೀವಂತವಾಗಿದೆ
ಭವಿಷ್ಯದ ದಿನದ ಕಲ್ಪನೆ
ಜೀವ ತುಂಬುವ ಉಸಿರಿನೊಂದಿಗೆ
ಉಸಿರಾಡುತ್ತೇವೆ ಭರವಸೆ ಮತ್ತು ಹತಾಶೆ
ಸಾವಿನ ಮುಖಮಂಟಪದಲ್ಲಿ
ಭೇಟಿಯಾಗುತ್ತವೆ!
ನಾನು ನೀನೆಂಬ ಒಂದೇ ನಾಣ್ಯದ
ಎರಡು ಮುಖಗಳ…ಪುನರಾವರ್ತನೆ
ಸ್ಥಿರತೆ’ ಎಂಬುದಿಲ್ಲಿ ಸಾಂಕೇತಿಕ
ಅಸ್ತಿತ್ವವಾದದ ಸತ್ಯವಾಗಿದೆ !
————————————
ಕಾವ್ಯ ಸುಧೆ. ( ರೇಖಾ ).