ಮಹಾಂತೇಶ ಬಸಪ್ಪ ಬಾಳಿಗಟ್ಟಿ ಅವರ ಕವಿತೆ-‘ದೂರ ಇರೂನ ನಡಿ’

ಬಾಳ ದೂರ ಇರೂನ ನಡಿ
ಬಾಳ ದೂರ ಇರೂನ ನಡಿ |2|
ಆನಂದತುಂದಿಲದ ಹೂರಥನೇರಿ
ಪ್ರೀತಿ ಪ್ರೀತದ ಹಕ್ಕಿಗಳಾಂಗ ಜೊತಿಗ ಹಾರಿ
ಯಾರು ಇಲ್ಲದ ಕಡೆ ಹಾರಿಹೋಗೂನ. |1|

ಬಾಳ ದೂರ ಇರೂನ ನಡಿ
ಸುಮಗಳ ಹೂತೋಟದಾಗ
ಕಾಮನೆಗಳ ಘಳಿಗಿಲಿ ಮೈಮರೆತ
ನೋವು, ಜಂಜಾಟದ ಲೋಕ ಮರಿಯೂನ. |2|

ಬಾಳ ದೂರ ಇರೂನ ನಡಿ
ಹಾಡೂನಂತ ಇಬ್ಬರೂನು ದನಿಗೂಡಿ
ಬೇಡೂನಂತ ಇಬ್ಬರೂ ಸೇರಿ ದೇವರನ
ನಾವೆಂದಿಗೂ ಹಿಂಗ ಇರೂನಂತ |3|

ಬಾಳ ದೂರ ಇರೂನ ನಡಿ
ಗಡಿ ಬಿಡಿಗಳ, ಪ್ರೇಮವಿಲ್ಲದ ಲೋಕ ಬಿಟ್ಟ
ಕಿಲ ಕಿಲಗಳ ನಗು ನಗನಗತಾ
ಪಿಸುಮಾತ ಮಾತಾಡ್ತ ಹಂಗ ಬದಕಿ ಬಿಡೂನಂತ |4|


    2 thoughts on “ಮಹಾಂತೇಶ ಬಸಪ್ಪ ಬಾಳಿಗಟ್ಟಿ ಅವರ ಕವಿತೆ-‘ದೂರ ಇರೂನ ನಡಿ’

    Leave a Reply

    Back To Top