ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು ಅವರ ಕವಿತೆ-
ಇರಬೇಕು ಇರುವಂತೆ
ಕಣ್ಣಿರಬೇಕು ನೋಡಲು
ಸೌಂದರ್ಯವ ಸವಿಯಲು
ಕನಸಿರಬೇಕು ಬೆಳೆಯಲು
ಬಲಿತು ಹೆಮ್ಮರವಾಗಲು
ಕಿವಿ ಇರಬೇಕು ಕೇಳಲು
ಮಧುರತೆಯ ಆಲಿಸಲು
ನಾಲಿಗೆಯು ಬೇಕು ಮಾತಾಡಲು
ಹಿತ ನುಡಿಗಳ ಹೇಳಲು
ಹೃದಯವಿರಬೇಕು ಬಡಿಯಲು
ಜೀವರಸವ ಬಡಿಸಲು
ಕೈ ಇರಬೇಕು ಕೊಡಲು
ಕಾರ್ಯಗತವಾಗಲು
ಕಾಲುಗಳು ಬೇಕು ನಡೆಯಲು
ಮುಂದುವರಿಯುತ್ತಾ ಇರಲು
ಮನಸಿರಬೇಕು ಮಿಡಿಯಲು
ಬೆರೆತು ಒಂದಾಗಿ ಬಾಳಲು
ಬುದ್ಧಿ ಬೇಕು ಬದುಕಲು
ಬಂಧನಗಳ ಬಿಡಿಸಲು
ಬಾಂಧವ್ಯ ಬೇಕು ಬೆಸೆಯಲು
ಸಂಬಂಧಗಳು ದೃಢವಾಗಲು
ಗೆಳೆತನವು ಬೇಕು ಗೆಲ್ಲಲು
ಜೊತೆಯಾಗಿ ನಿಲ್ಲಲು
ಸಂಸಾರ ಬೇಕು ಸಾಗಲು
ಬಾಳಿ ಬದುಕ ದಡ ಸೇರಲು
ಭಾವನೆಗಳಿರಬೇಕು ಸಂವಹಿಸಲು
ಸಾವಧಾನದಿ ಅರಿಯಲು
ಜೀವನವ ಅನುಭವಿಸಲು
————————-
ಶಾಲಿನಿ ಕೆಮ್ಮಣ್ಣು