ಹೆಚ್.ಎಸ್.ಪ್ರತಿಮಾ ಹಾಸನ್ ಅವರ ಕವಿತೆ-‘ಹಸಿರುಟ್ಟ ಭೂ ತಾಯಿ’

ಹೋಗಬೇಡ ಹಸಿರು ನೀ ಭೂಲೋಕವ ಬಿಟ್ಟು
ಸಾಗುವಳಿ ಮಾಡುವರು ಬಡರೈತರು ನೋಡು
ನೀಗಿಸುತ ದಾಹವ ಜೀವಿಗಳ ಮನತಣಿಸಿ
ಬಾಗುವರು ತಾಯೆಂದು ಭೂ ತಾಯಿಗೆ ನಮಿಸಿ….

ಧರೆಗಿಳಿಯುತಿರಬೇಕು ಮಳೆರಾಯ ಗುಡಿಕಟ್ಟಿ
ತರತರದ ಅನುಭವವು ಭುವಿ ಜನಕೆ ನೋಡು
ಸುರಿಯುತಿರೆ ಜಲಧಾರೆ ಮೈ ಮನವು ಅರಳುವುದು
ಹರುಷವಲ್ಲವೆ ಜಗಕೆ ಭೂ ತಾಯಿ ಕೇಳು ….

ಪುಟ್ಟಮಕ್ಕಳನು ಸಾಕುವೆ ನಿನ್ನೊಡಲಲ್ಲಿ ಭೂ ತಾಯಿ
ಬಿಟ್ಟೋಡುವರು ಕೊನೆಗಾಲ ಬಂದಾಗ
ಋಣಿ ಎಂದು ನಿನಗಾಗಿ ಭೂ ತಾಯಿ ನೀ ನೋಡ
ನಿಟ್ಟುಸಿರು ಬಿಡದಲೆ ಬಾಳುವೆವು ನಿನ್ನೊಡಲಲ್ಲಿ….

ಅಂತಸ್ತು ತುಂಬಿರುವ ನೂರಾರು ನಗರಗಳು
ಅಂತರಿಕ್ಷವ ಚುಂಬಿಸುತಲಿರುವುದು ನೋಡು
ಅಂತರವು ಇಲ್ಲದಿರೆ ಸೂಚನೆಯ ನೀಡುವುದು
ಅಂತಿಮ ಕ್ಷಣವದುವೆ ಪರಿಸರ ನಾಶಗೊಳಿಸೆ….

ಮಾಗುತಿರುವ ಹಣ್ಣಂತೆ ರುಚಿಯಾಗಿರಲು
ಸಾಗುತಿರಬೇಕು ಜೀವನದಿ ಸಂತಸದಲಿ
ಬಾಗುತಿರಬೇಕು ಹಿರಿಯರಿಗೆ ಗೌರವವಾಗಿ
ಕಾಯುತಿರಲು ಒಳ್ಳೆಯ ಸಮಯಕ್ಕಾಗಿ…….


Leave a Reply

Back To Top