ಅಕ್ಷತಾ ಜಗದೀಶ್ ಅವರ ಕವಿತೆ ‘ಕಾಲ ಚಕ್ರ’

l

ನೆನಪುಗಳ ನಡಿಗೆ
ಅಡೆತಡೆಯಾದಿತೆ ಅರಿಗಳಿಗೆ
ಬಾಳ ಪಯಣದ ಹಾದಿಯ
ಆ ಎರಡು ದಡಗಳಿಗೆ
ಅರಿವಿಲ್ಲದೆ ಅಲೆಗಳಾಗಿ
ಅಪ್ಪಳಿಸಿತ ಸದ್ದಿಲ್ಲದೆ ಅರಿಗಳಿಗೇ….

ಮಣಬಾರದ ನೆನಪುಗಳೇ
ಜಾರಿದಂತಿದೆ…
ಚಿಗುರುರೆಲೆಯ ಮೇಲೆ ಬಿದ್ದ
ಇಬ್ಬನಿಯ ಹನಿಗಳಂತೆ
ಮತ್ತೆ ಚಿಗುರೊಡೆಯುವುದೇ
ಮುಂಗಾರಿನ ಹನಿಯೊಡನೆ ಬೆಳೆದ
ಸಸಿಯಂತೆ……

ಬಾಳತಿರುವಿನ ಅದೆಷ್ಟೋ
ಝರಿ ಅದುವೇ
ಹರಿದು ಸಾಗುತಲಿದೆ
ಪನ್ನೀರಿನ ನದಿಯ ಜಲದಂತೆ
ಅಗಾದ ಕಡಲಿನ
ಅಂತರಾಳವ ಸೇರಲು
ದಡ ಸವೆದು ಹೋದಂತೆ….

ಪೊರೆ ಬಂದ ನೇತ್ರವದು
ಪರದೆಯ ಸರಿಸಿದೆ ನೋಟ
ಇಣುಕಿ ನೋಡುತಲಿದೆ
ನೆನಪಿನಂಗಳದ ಬೆಳದಿಂಗಳು..
ಚಿಂತೆ ಚಿತೆ ಸೇರುವ
ಆ ಕಾಲನ ಚಕ್ರದಲ್ಲಿ
ನೆನೆಪುಗಳೇಕೋ ಜಾರಿದೆ
ಚಿರನಿದ್ರೆೆಯಲ್ಲಿ………


One thought on “ಅಕ್ಷತಾ ಜಗದೀಶ್ ಅವರ ಕವಿತೆ ‘ಕಾಲ ಚಕ್ರ’

Leave a Reply

Back To Top