ಕಾವ್ಯ ಸಂಗಾತಿ
ವಿಶ್ವನಾಥ ಕುಲಾಲ್ ಮಿತ್ತೂರು
‘ಪ್ರಕೃತಿಯು ವರ!’
ಮರ ಕುಡಿದು ಬೊಡ್ಡೆಯೊಣಗಿದ ಮೇಲೆಯೂ
ಮರಿ ಗಿಡವು ತಲೆಯೆತ್ತಿ ನಗುತಿಹುದು ಚೆಂದ!
ವರವಾಗಿ ದೊರಕುವುದು ಪ್ರಕೃತಿ ಸದಾ ನಮಗೆ
ಕರ ಮುಗಿದು ನಮಿಸೋಣ ಧನ್ಯತೆಯಿಂದ !
ನಮ್ಮ ಸ್ವಾರ್ಥಕ್ಕೆ ಪ್ರಕೃತಿಯನು ಕುಲಗೆಡಿಸಿ
ಒಮ್ಮೆ ಮೆರೆಯಬಹುದು ನಾವು ಬೀಗಿ.
ಸುಮ್ಮನಿದ್ದ ಹಾವನ್ನು ಕೆಣಕಿದಂತೆಯೆ ಅದು
ತಮ್ಮ ಬುಡಕ್ಕೆ ಬಂದಾಗ ಫಲವೇನು ಮತ್ತೆ ಕೂಗಿ?
ನಾವು ನೀವುಗಳೆಲ್ಲ ಪ್ರಕೃತಿಯದೆ ಭಾಗಗಳು
ನೋವುಗಳ ಮಾಡುವುದು ಎಂದಿಗೂ ಸಲ್ಲ.
ಭಾವ ಭಿತ್ತಿಯೊಳಗೆ ಅಚ್ಚೊತ್ತಿ ನಿಲ್ಲಬೇಕು ಮಾತು
‘ದೇವನ ಕೊಡುಗೆಯನು ಹಾಳುಗೆಡಹುವುದಿಲ್ಲ’
ವಿಶ್ವನಾಥ ಕುಲಾಲ್ ಮಿತ್ತೂರು
ಸುಂದರ ಕವಿತೆ,,,,
ಒತ್ತಕ್ಕರಗಳನು ಕಡಿಮೆ ಬಳಸಬಹುದಲ್ಲ,!
ಪರಿಸರ,ನಿಲಬೇಕು, ಬುಡಕೆ, ಸ್ಟಾರ್ಥಕೆ, ತಲೆಯೆತ್ತಿ ಬದಲಿ ಮೊಗವೆತ್ತಿ ಹೇಗೆ
ಮೋಕೆಯಿಂದ,,, ಹಾಗೇ ಸುಮ್ಮನೆ….. ಅಭಿನಂದನೆ,,,, ಶುಭಾಶಯ
ಶ್ರೀಪತಿ ಪದ್ಯಾಣ
ಧನ್ಯವಾದಗಳು ಸರ್
ಸಲಹೆಗೆ ಧನ್ಯ ನಮನಗಳು.