ಸಾವಿಲ್ಲದ ಶರಣರು ಮಾಲಿಕೆ-‘ಕನ್ನಡ ಸಾಹಿತ್ಯದ ವಿಶಿಷ್ಟ ವಿದ್ವಾಂಸ, ಕವಿ, ಪ್ರೊ. ಎಲ್ ಬಸವರಾಜು’ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಕನ್ನಡ ಸಾಹಿತ್ಯ ಲೋಕದ ವಿಶಿಷ್ಟ ವಿದ್ವಾಂಸ, ಕವಿ,  ದಿಟ್ಟ ವಿಚಾರಶೀಲರೆಂದು ಪ್ರಖ್ಯಾತರಾದವರು. ಪ್ರೊ ಎಲ್ ಬಸವರಾಜು ಅವರು ಅವರ ನಿರಂತರ ಅಧ್ಯಯನ ಸಂಶೋಧನೆ ಕನ್ನಡ ಸಾಹಿತ್ಯ ಮತ್ತು ವಚನ ಸಾಹಿತ್ಯವನ್ನು ಇನ್ನಷ್ಟು ಶ್ರೀಮಂತಗೊಳಿಸುವಲ್ಲಿ ಸಹಾಯಕಾರಿಯಾಯಿತು.  

     ಬಸವರಾಜು ಕರ್ನಾಟಕದ ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಇಡಗನೂರು ಎಂಬ ಹಳ್ಳಿಯಲ್ಲಿ 1919ರ ಅಕ್ಟೋಬರ್ 7ರಂದು ಜನಿಸಿದರು. ತಂದೆ ಲಿಂಗಪ್ಪನವರು ಮತ್ತು  ತಾಯಿ ಈರಮ್ಮನವರು.  ಅವರದು ತುಂಬಾ ಬಡ ಕುಟುಂಬ.  ಬಸವರಾಜು ಅವರು  ಪ್ರೌಢಶಾಲಾ ಶಿಕ್ಷಣವನ್ನು ಸಿದ್ಧಗಂಗೆಯಲ್ಲಿ ಪೂರೈಸಿದರು.  ಅಂದು ತಮ್ಮ ವಿದ್ಯಾಭ್ಯಾಸಕ್ಕೆ ನೆರವಾದ ಆ ಮಠದ ಬಗ್ಗೆ ಅವರಲ್ಲಿ ತುಂಬು ಕೃತಜ್ಞತೆ ಇತ್ತು. ಮೈಸೂರಿನಲ್ಲಿ ಬಿ.ಎ,  ಎಂ.ಎ ಗಳನ್ನು ಪೂರೈಸಿದರು.  ಅವರ ಓದಿನ ದಿನಗಳಲ್ಲಿ ಬಿ.ಎಂ. ಶ್ರೀಕಂಠಯ್ಯ.  ಕುವೆಂಪು  ಮತ್ತು ಡಿ.ಎಲ್. ನರಸಿಂಹಾಚಾರ್ಯರ ನೇರ ಪ್ರಭಾವಕ್ಕೆ ಒಳಗಾಗಿದ್ದರು.  

  ಪ್ರೊ ಎಲ್ ಬಡವರಾಜು  ಅವರು  ದಾವಣಗೆರೆಯಲ್ಲಿ ಉಪನ್ಯಾಸಕರಾಗಿ ತಮ್ಮ ವೃತ್ತಿಯನ್ನು ಆರಂಭಿಸಿದರು.  ವಿದ್ಯಾರ್ಥಿಗಳ ಜೊತೆ ಹಾಸ್ಟೆಲ್ಲಿನಲ್ಲಿಯೇ ಇದ್ದುಕೊಂಡು ಅವರ ಪ್ರಗತಿಗೆ ನೀರೆರೆದ ಅದಮ್ಯ ಚೇತನರಿವರು.  ಇವರ ಶಿಷ್ಯರಾದ ಡಾ. ಚಿದಾನಂದ ಮೂರ್ತಿ ಹೇಳುತ್ತಾರೆ:  “ಗುರುಗಳಾದ ಎಲ್. ಬಸವರಾಜು ಅವರು ನನ್ನ ಮೇಲೆ ನಿರಂತರವಾದ ಪ್ರೀತಿಯ ಧಾರೆಯನ್ನೇ ಎರೆದಿದ್ದಾರೆ.  ಅವರಿಂದ ನಾನು ಕಲಿತಿರುವುದು ಎಷ್ಟೋ”. ಪ್ರೊ  ಬಸವರಾಜು ಅವರು “ಅಲ್ಲಮನ ವಚನಚಂದ್ರಿಕೆ” ಮತ್ತು “ಶಿವದಾಸ ಗೀತಾಂಜಲಿ”ಗಳಿಗೆ ಡಿ.ಲಿಟ್ ಪದವಿ ಪಡೆದರು.  

ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಬಸವರಾಜು ಅವರು ಗ್ರಂಥ ಸಂಪಾದನೆ, ಕಾವ್ಯ ಅನುವಾದ, ಸಂಶೋಧನ ಬರಹ ಮತ್ತು ಸರಳ ಗದ್ಯಾನುವಾದ  ಮುಂತಾದ  ಅಪಾರ ಕಾರ್ಯವನ್ನು ಮಾಡಿದರು.  ಪ್ರಾಚೀನ ಕನ್ನಡ ಸಾಹಿತ್ಯದ ಪಂಪ, ಬಸವಣ್ಣ, ಅಕ್ಕ ಮಹಾದೇವಿ, ಅಲ್ಲಮ ಪ್ರಭು, ಸರ್ವಜ್ಞ, ನಿಜಗಣಶಿವಯೋಗಿ, ನಾಗವರ್ಮ, ಕೇಶಿರಾಜ ಮುಂತಾದ ಮುಖ್ಯ ಲೇಖಕರ ಬಗ್ಗೆ ಅವರು ಕೆಲಸ ಮಾಡಿದ್ದಾರೆ.   ಜೈನ ಕಾವ್ಯ ಸಂಪಾದನೆ, ಶರಣ ಸಾಹಿತ್ಯ, ‘ಸರಳ ಪಂಪ ಭಾರತ’ ಮುಂತಾದ ಸಂಪಾದನೆಗಳನ್ನು  ಮಾಡಿದ್ದಾರೆ. ಶೂನ್ಯ ಸಂಪಾದನೆಯ ಬಗೆಗಿನ ‘ಶಿವಗಣ ಪ್ರಸಾದಿ ಮಹಾದೇವಯ್ಯಗಳ ಶೂನ್ಯಸಂಪಾದನೆ’  ರಚಿಸಿದ್ದಾರೆ.   ಶಾಸ್ತ್ರ ಸಾಹಿತ್ಯದಲ್ಲಿ ‘ಕನ್ನಡ  ಛಂದಸ್ಸು ಸಂಪುಟ ’, ‘ಶಬ್ದಮಣಿ ದರ್ಪಣ’ ಹೀಗೆ ಹಲವು ಕೃತಿಗಳನ್ನು ಪರಿಷ್ಕರಿಸಿದ್ದಾರೆ. ಕಾವ್ಯ, ಅನುವಾದದಲ್ಲೂ ಸೃಜನಾತ್ಮಕ ಕೆಲಸ ಮಾಡಿದ್ದಾರೆ.  ‘ಗಂಡ ಹೆಂಡಿರ ವಿರಸವನ್ನು ವಿಶ್ವ ಸಂಸ್ಥೆಯೂ ಬಗೆಹರಿಸಲಾರದು”, ”ವಾದಕ್ಕೆ ಪ್ರತಿವಾದವಿದೆಯೇ ಹೊರತು ತರ್ಕವೆಂಬುದು ಎಲ್ಲಿಯೂ ಇಲ್ಲ”, “ಬದುಕುವುದೇ ಒಂದು ಪವಾಡವಾಗಿರುವಾಗ ಉಂಡು ತೆಗಿದವನೇ ಪವಾಡ ಪುರುಷ” ಪರಿಣಾಮಕಾರಿಯಾಗಿವೆ.

ಅವರ ಒಂದು ಪದ್ಯ ಹೀಗಿದೆ:

ಸೆಖೆಗೆ ಸೊರಗಿದ ಹಕ್ಕಿಗಳ
ಕ್ಷೀಣಸ್ವರದಿಂದ
ನರಳುತ್ತಿದ್ದಾನೆ
ಹಚ್ಚ ಹಸಿರುಟ್ಟು
ಬರುವುದಿನ್ನೆಂದು ವಾಸಂತಿ?

ಅಶ್ವಘೋಷನ ‘ಬುದ್ಧಚರಿತೆ; ಮತ್ತು ‘ಸೌನ್ದರನಂದ’ದ ಅನುವಾದಗಳು ಬಸವರಾಜು ಅವರ ವಿಶಿಷ್ಟ ಕೃತಿಗಳು.  ಮೊದಲಿನಿಂದಲೂ ಬಸವರಾಜು ಅವರು ಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಸಾಹಿತ್ಯದ ಕೆಲಸ ಮಾಡಿದ್ದಾರೆ.  

“ಒಬ್ಬ ಮನುಷ್ಯನ ಘನತೆಯನ್ನು ಪ್ರಶಸ್ತಿಯಿಂದಲೇ ಅಳೆಯಲು ಹೋಗಬಾರದು” ಎನ್ನುತ್ತಿದ್ದ ಎಲ್. ಬಸವರಾಜು ಅವರಿಗೆ  ‘ಪಂಪ ಪ್ರಶಸ್ತಿ’, ‘ಬಸವ ಪುರಸ್ಕಾರ’ ಗಳೇ ಅಲ್ಲದೆ 1994ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಮತ್ತು 2006ರ ವರ್ಷದ  ‘ಭಾಷಾ ಸಮ್ಮಾನ್’, ನಾಡೋಜ ಪ್ರಶಸ್ತಿ ಮುಂತಾದ ಅನೇಕ  ಗೌರವಗಳು ಸಂದಿದ್ದವು.  2009ರ ವರ್ಷದಲ್ಲಿ ಚಿತ್ರದುರ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸುವುದರ ಮೂಲಕ ನಾಡು ಅವರನ್ನು ಸಂಮಾನಿಸಿತು.

ಇವರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ನಾಡಿನ ಅನೇಕ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ, ಗೌರವಿಸಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1977), ಕನ್ನಡ ರಾಜ್ಯೋತ್ಸವ ಪ್ರಶಸ್ತಿ (1994), ಚಿದಾನಂದ ಪ್ರಶಸ್ತಿ (11994), ಪಂಪ ಪ್ರಶಸ್ತಿ(2000), ಚಾವುಂಡರಾಯ ಪ್ರಶಸ್ತಿ(2002), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(2000) ಇತ್ಯಾದಿಗಳು ಇವರಿಗೆ ಸಂದಿವೆ. ಸಂಶೋಧಕರಾಗಿ, ಗ್ರಂಥ ಸಂಪಾದಕರಾಗಿ ಇವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿರುವ ಸೇವೆ ಅಮೋಘವಾದುದು. ಸರಳ ಪಂಪಭಾರತ (1999), ಪಂಪನ ಆದಿಪುರಾಣ (ಸಂಪಾದನೆ), ರನ್ನನ ಸರಳ ಗದಾಯುದ್ಧ, ಅಲ್ಲಮನ ವಚನ ಚಂದ್ರಿಕೆ(ಸಂಶೋಧನೆ), ಬಸವಣ್ಣನವರ ವಚನಗಳು, ಸರ್ವಜ್ಞನ ವಚನಗಳು, ಕೇಶಿರಾಜನ ಶಬ್ದಮಣಿದರ್ಪಣಂ ಇತ್ಯಾದಿಗಳು ಇವರ ಕೃತಿಗಳು.

ಬಸವರಾಜು ಅವರು ಕನ್ನಡದ ಶಾಸ್ತ್ರೀಯ ಸಾಹಿತ್ಯ ಮತ್ತು ವಿದ್ವತ್ಪೂರ್ಣ ಕೃತಿಗಳನ್ನು ಹಳೆಯ ಕನ್ನಡದ ಪರಿಚಯವಿಲ್ಲದವರಿಗೆ ತಲುಪುವಂತೆ ಮಾಡುವ ಗುರಿಯನ್ನು ಹೊಂದುವ ಮೂಲಕ ಪಠ್ಯ ವಿಮರ್ಶೆಯನ್ನು ಕ್ರಾಂತಿಗೊಳಿಸಿದರು. ಅವರ ಆವಿಷ್ಕಾರಗಳಲ್ಲಿ ಪ್ರಮುಖ ಪಠ್ಯಗಳ ಸರಳೀಕೃತ ಗದ್ಯ ಆವೃತ್ತಿಗಳನ್ನು ರಚಿಸುವುದು ಮತ್ತು ಪ್ರಾಚೀನ ಕವಿತೆಗಳನ್ನು ಅವುಗಳ ರೂಪವಿಜ್ಞಾನದ ಘಟಕಗಳಾಗಿ ಮರುಸಂಘಟಿಸುವುದು, ಸೂಕ್ತವಾದ ವಿರಾಮಚಿಹ್ನೆಯೊಂದಿಗೆ ಓದುವಿಕೆಯನ್ನು ಹೆಚ್ಚಿಸುವುದು ಸೇರಿದೆ. ಈ ಪ್ರಗತಿಗೆ ಮುಂಚಿತವಾಗಿ, ಅವರು ಹಳೆಯ ಕಾಗದದ ಹಸ್ತಪ್ರತಿಗಳು ಮತ್ತು ತಾಳೆಗರಿಗಳ ಪಠ್ಯಗಳನ್ನು ಅವುಗಳ ಮೂಲ ಆವೃತ್ತಿಗಳನ್ನು ಬಹಿರಂಗಪಡಿಸಲು ಸೂಕ್ಷ್ಮವಾಗಿ ಅಧ್ಯಯನ ಮಾಡಿದರು. ಆದಿಪುರಾಣ, ಬೌದ್ಧರ ಮೇರುಕೃತಿಗಳಾದ ಅಶ್ವಘೋಷನ ‘ಬುದ್ಧಚರಿತ’ ಮತ್ತು ತೊರವೆಯ ರಾಮಾಯಣ ಮತ್ತು ಶಬ್ದಮಣಿದರ್ಪಣದಂತಹ ಇತರ ಮಹತ್ವದ ಕೃತಿಗಳನ್ನು ಒಳಗೊಂಡಿರುವ ಬಸವರಾಜು ಅವರ ಕೃತಿಗಳ ಆಯ್ಕೆಯು ಅಂತರ್ಗತವಾಗಿತ್ತು. ಜಾತ್ಯತೀತತೆಯ ಬದ್ಧತೆ ಮತ್ತು ಕನ್ನಡದ ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಸಂರಕ್ಷಿಸುವ ಮತ್ತು ಪ್ರಸ್ತುತಪಡಿಸುವ ಸಮರ್ಪಣೆಯಿಂದ ಅವರ ವಿಧಾನವು ನಿರೂಪಿಸಲ್ಪಟ್ಟಿದೆ.

ಎಲ್.ಬಸವರಾಜು ಸಂಪಾದಿಸಿದ ಕೃತಿಗಳು:-

  • ಬಸವೇಶ್ವರ ವಚನಸಂಗ್ರಹ (1952)
  • ಅಲ್ಲಮನ ವಚನಚಂದ್ರಿಕೆ (1960)
  • ಶಿವದಾಸ ಗೀತಾಂಜಲಿ (1963)
  • ಬಸವ ವಚನಾಮೃತ (ಎರಡು ಭಾಗಗಳಲ್ಲಿ) (1964, 1970 ಮತ್ತು 1989)
  • ಅಕ್ಕನ ವಚನಗಳು (1966)
  • ಅಲ್ಲಮನ ವಚನಗಳು (1969)
  • ಬಸವಣ್ಣನವರ ವಚನಗಳು (1996)
  • ಬಸವಣ್ಣನವರ ಷಟ್ಸ್ಥಲದ ವಚನಗಳು (1990)
  • ದೇವರ ದಾಸಿಮಯ್ಯನ ವಚನಗಳು
  • ಸರ್ವಜ್ಞಾನ ವಚನಗಳು (‘ಪರಮಾರ್ಥ’) (1972)
  • ಬೆಡಗಿನ ವಚನಗಳು (1998)
  • ಶಿವಗಣಪ್ರಸಾದಿ ಮಹಾದೇವಯ್ಯನ ಪ್ರಭುದೇವರ ಶೂನ್ಯಸಂಪಾದನೆ (1969)
  • ಕಲ್ಯಾಣದ ಮಾಯಿದೇವನ ಶಿವಾನುಭವ ಸೂತ್ರ (1998)
  • ಪಂಪನ ‘ಆದಿಪುರಾಣ’ (1976)
  • ಪಂಪನ ‘ಸರಳ ಪಂಪಭಾರತ’ (1999)
  • ಪಂಪನ ‘ಸಮಸ್ತ ಭಾರತ ಕಥಾಮೃತ’ (2000)
  • ಪಂಪನ ‘ಸರಳ ಆದಿಪುರಾಣ’ (2002)
  • ಪಂಪನ ಆದಿಪುರಾಣ ಕಥಾಮೃತ (2003)
  • ರನ್ನನ ‘ಸರಳ ಗದಾಯುದ್ಧ’ (2005)
  • ತಿರುಮಲಾರ್ಯರಿಂದ ‘ಚಿಕ್ಕದೇವರಾಯ ಸಪ್ತಪದಿ’ (1971)
  • ‘ತೊರವೆ ರಾಮಾಯಣ ಸಂಗ್ರಹ’ (1951)
  • ‘ಸರಳ ಸಿದ್ದರಾಮಚರಿತೆ’ (2000)
  • ರಾಘವಾಂಕನ ‘ಸರಳ ಹರಿಶ್ಚಂದ್ರ ಕಾವ್ಯ’ (2001)
  • ‘ಕನ್ನಡ ಚಂದಸ್ಸಂಪುಟ’ (1974)

(ಇದು ಸಂಪಾದಿತ ಕೃತಿಯಾಗಿದ್ದು, ಛಂದಸ್ಸಿನ ಎಲ್ಲಾ ನಾಲ್ಕು ಪ್ರಾಚೀನ ಕನ್ನಡ ಕೃತಿಗಳನ್ನು ಒಳಗೊಂಡಿದೆ. ಅವು ನಾಗವರ್ಮನ ‘ಛಂದೋಂಬುಧಿ’, ಈಶ್ವರ ಕವಿಯ ‘ಕವಿಜಿಹ್ವಾಬಂಧನ’, ಗುಣಚಂದ್ರನ ‘ಛಂದಸ್ಸಾರ’ ಮತ್ತು ವೀರಭದ್ರನ ‘ಚಂದೋರ್ಣವ’.)

  • “ಕೇಶಿರಾಜನ ಶಬ್ದಮಣಿದರ್ಪಣ’ (1986)

ಎಲ್.ಬಸವರಾಜು ಅವರು ಸಂಸ್ಕೃತದಿಂದ ಕೆಲವು ಕೃತಿಗಳನ್ನು ಅನುವಾದಿಸಿದ್ದಾರೆ. ಅವರು

  • ಅಶ್ವಘೋಷರಿಂದ ‘ಬುದ್ಧಚರಿತೆ’ (2000)
  • ಅಶ್ವಘೋಷರಿಂದ ‘ಸೌಂದರಾನಂದ’ (2000)
  • ಭಾಸನ ‘ಭಾರತ ರೂಪಕ’ (1958)
  • ‘ನಾಟಕಾಮೃತ ಬಿಂದುಗಳು’ (1958)
  • ‘ರಾಮಾಯಣ ನಾಟಕ ತ್ರಿವೇಣಿ’ (1958)

(‘ಪ್ರತಿಮಾ ನಾಟಕ’ ಸೇರಿದಂತೆ ಭಾಸರ ಮೂರು ನಾಟಕಗಳ ಅನುವಾದ)

  • ‘ನಿಜಗುಣಶಿವಯೋಗಿಯ ತತ್ವದರ್ಶನ’ (1961)

(ನಿಜಗುಣ ಶಿವಯೋಗಿಗಳ ಆರು ತಾತ್ವಿಕ ಗ್ರಂಥಗಳ ಗದ್ಯ ನಿರೂಪಣೆ)

ಬಸವರಾಜು ಎಪ್ಪತ್ತೈದನೇ ವಯಸ್ಸಿನಲ್ಲಿ ಸೃಜನಶೀಲ ಬರವಣಿಗೆಗೆ ಕೈಹಾಕಿದರು ಮತ್ತು ಮೂರು ಕವನ ಸಂಕಲನಗಳಾದ ‘ತಾನಾಂತರ’, (1994) (ತಾನಾಂತರ) ‘ಜಲಾರಿ’ (ಜಲಾರಿ) (1995) ಮತ್ತು ‘ಚಾಯಿಬಾಬಾ’ (Chayibaba) (2005) ಪ್ರಕಟಿಸಿದರು.
“ಈಗಲೂ ಗಾಂಧೀಜಿ ಪ್ರಸ್ತುತರಾಗುತ್ತಾರೆ.  ಆ ಕಾಲದಲ್ಲಿ ಭಾರತವನ್ನು ಕಟ್ಟಲು ವಿದ್ಯಾವಂತರಿಗೆ ಹಳ್ಳಿಗಳಿಗೆ ಹೋಗಿ ಎಂದು ಕರೆಕೊಟ್ಟರು.  ಸೇವಾದಳವನ್ನು ಕಟ್ಟಿ, ಯುವಜನರನ್ನು ಅಲ್ಲಿ ಸಂಘಟಿಸಿದರು.  ಇವತ್ತು ನಿರುದ್ಯೋಗಿಗಳಾಗಿ ಕುಳಿತಿರುವ ಯುವಕರು ಇಂಥ ಸೇವೆಗೆ ಮುಂದಾಗಬೇಕು.  ಜಾಗತೀಕರಣದಿಂದ ಬರುತ್ತಿರುವ ಅನಿಷ್ಟಗಳನ್ನು ಮೀರಿಸಬೇಕು.” ಇದು ಬಸವರಾಜು ಅವರ ಸಾಮಾಜಿಕ ಚಿಂತನೆಯಾಗಿದ್ದರೆ,  “ಜನಪದ ಕವಿ ತನ್ನ ಹಾಡುಗಳನ್ನು ಹಾಡುವುದನ್ನು ನಿಲ್ಲಿಸಿದಾಗಿನಿಂದ ಮಾನವಜನಾಂಗಕ್ಕೆ, ಅದರಲ್ಲೂ ಗ್ರಾಮೀಣರಿಗೆ ಮುಗ್ದಕಾವ್ಯ ಸಂಪರ್ಕ ತಪ್ಪಿಹೋಯಿತು” ಎಂಬುದು ಅವರ ಸಾಂಸ್ಕೃತಿಕ ಅಳಲಾಗಿತ್ತು.

ಇವರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ನಾಡಿನ ಅನೇಕ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ, ಗೌರವಿಸಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (
ಡಾ. ಎಲ್ ಬಸವರಾಜು 2012ರ ಜನವರಿ 29ರಂದು ಈ ಲೋಕವನ್ನಗಲಿದರು.  ಈ ಹಿರಿಯ ಚೇತನಕ್ಕೆ ನಮ್ಮ ನಮನಗಳು. ಕನ್ನಡ ಸಾರಸ್ವತ ಲೋಕದಲ್ಲಿ ಸದ್ದು ಗದ್ದಲವಿಲ್ಲದೆ ತನ್ನದೇ ಆದ ದಾರಿಯಲ್ಲಿ ಕ್ರಮಿಸಿ ಅಜರಾಮರವಾಗಿ ಉಳಿದ ಶ್ರೇಷ್ಠ ಸಾವಿಲ್ಲದ ಶರಣರು
————————————————————————————

4 thoughts on “ಸಾವಿಲ್ಲದ ಶರಣರು ಮಾಲಿಕೆ-‘ಕನ್ನಡ ಸಾಹಿತ್ಯದ ವಿಶಿಷ್ಟ ವಿದ್ವಾಂಸ, ಕವಿ, ಪ್ರೊ. ಎಲ್ ಬಸವರಾಜು’ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

  1. ಡಾ. ಎಲ್. ಬಸವರಾಜು ಅವರ ಸಮಗ್ರ ಪರಿಚಯ ಮಾಡಿಸಿದ ತಮಗೆ ಧನ್ಯವಾದಗಳು ಸರ್ ಇಂಥ ಮೌಲ್ಯಯುತವಾದ ವ್ಯಕ್ತಿ
    ಚಿತ್ರಣ ಸಾವಿಲ್ಲದ ಶರಣರು ಮಾಲಿಕೆಯ ಮೂಲಕ ಮೂಡಿ ಬಂದಿದ್ದು ಅತ್ಯಂತ ಅವಶ್ಯಕ ಮತ್ತು ಅನಿವಾರ್ಯ.. ಮರೆತುಹೋದ ಮಹನೀಯರ ನೆನಪು ಮಾಡಿಕೊಡುವ ನಿಮ್ಮ ಲೇಖನಗಳು ಎಂದಿಗೂ ಅಭಿನಂದನಾರ್ಹ ಸರ್

    ಸುಧಾ ಪಾಟೀಲ ( ಸುತೇಜ )
    ಬೆಳಗಾವಿ

  2. ಶರಣು
    ಶ್ರೀ ಎಲ್. ಬಸವರಾಜು ಅವರ ಕುರಿತು ತಿಳಿಸಿದಿರಿ ನಿಮಗೆ ಅನಂತ ಧನ್ಯವಾದಗಳು

Leave a Reply

Back To Top