ಐದನೇ ವಾರ್ಷಿಕೋತ್ಸವದ ವಿಶೇಷ

ಸಂಕಲನದ ಸಂಪ್ರೀತಿಯ ಸುಪ್ರಭಾತ…
ತೊದಲು ನುಡಿಯ ಮೊದಲ ಮಾತು ಮತ್ತನೇರಿಸಿತ್ತು, ಬೆಳಗ್ಗೆ ಮಳೆಯು ಮುತ್ತಿಟ್ಟಂತೆ ಪ್ರೀತಿ ಮಾಂಗಲ್ಯ ಧರಿಸಿ ನಿಂತೆ ಸ್ನೇಹ ಸಂಘ ತೊರೆದು ನಿಂತೆ ಒಂಟಿತನದಲ್ಲಿ ಮಿಂದು ನಿಂತೆ ನಿನ್ನ ನೋಟ ಕಚ್ಚಗೊಳಿಸುವ ಸನ್ನೆಯ ಆಟ ಸಂಭಾಷಣೆಗೆ ಮನಸ್ಸಾಕ್ಷಿ ಹು ಗುಟ್ಟುವಂತೆ ನನ್ನ ನೋಟ ನಿನ್ನಲ್ಲಿ ಬೆರೆಸಿ ನಿಂತೆ, ಜೊತೆಗೆ ಭಯ ಭೀತಿ ರೀತಿ ನೀತಿ ಮತ್ತೆ ಗೀತಿ ಎಲ್ಲ ಮರೆಸುವಂತೆ ನಿನ್ನ ಪ್ರೀತಿ ತಿರುತ್ತಿರುಗುವ ಬಿಕ್ಕಳಿಕೆಯಂತೆ ಮುಲಾಮು ಔಷಧಿ ಇದಕ್ಕಿಲ್ಲವಂತೆ ನೀ ಕಡಲಂತೇ ನಾ ನದಿಯಂತೆ ಬದುಕ ಭಾವನೆಯ ಬೆಲೆಬಾಳುವ ಮುತ್ತು ರತ್ನದಂತೆ ನಮ್ಮ ಮಕ್ಕಳಂತೆ ಸಹಜತೆಯಲ್ಲಿ ಸಹಕರಿಸು ಗೆಳೆಯ, ಪ್ರೀತಿ ಉಂಡು ನೋವು ಗೆದ್ದು ಸೋಲು ಮರೆತು ಅಪಮಾನ ಸರಿಸಿ ತಿರಸ್ಕಾರ ಸರಿಸಿ ಸ್ವೀಕರಿಸು ನನ್ನ ಸತಿಯಂತೆ ಮರೆತು ತೊರೆದು ದೂರವಿಟ್ಟು ಬಿಡು, ಸಂತೆಯಲ್ಲಿರುವ ಚಿಂತೆಗಳ ಘಟನೆಗಳ ಗೆಳೆಯ ಬದುಕಿಗೆ ತಿರುವು ಅಂತ್ಯವಲ್ಲ ಆರಂಭವಂತೆ, ಆರಂಭವಂತೆ, ನೀ ಲೆಕ್ಕದ ಮಾಸ್ಟರ್ ಆಗಿರುವಂತೆ, ಆರ್ ಮೂರ್ಲೆ ಹದಿನೆಂಟು ಲೆಕ್ಕದ ಮಾಸ್ಟರ್ ಮಡದಿ ಮಾತು ಕರೆದಂಟಂತೆ, ನಿಮ್ಮ ನಿಲ್ದಾಣ ನನ್ನ ನಿಲ್ದಾಣವಂತೆ ನನ್ನ ನಿಲ್ದಾಣ ನಿಮ್ಮ ನಿಲ್ದಾಣವು ಅಂತೆ ಗೆಳೆಯ ನಿಮ್ಮ ನಿಲ್ದಾಣವು ನನ್ನ ನಿಲ್ದಾಣವಂತೆ.
ಏನಂತೀರಿ…..


Leave a Reply

Back To Top