ಇದೆಂತಹಾ ವಿಷಯ ಅನ್ನಿಸಬಹುದು.ಇದು ಸುಳ್ಳಂತು‌ ಅಲ್ಲ? ಇವತ್ತು ಜಗತ್ತು ನಿಂತಿರುವುದು ಯಾವುದರ ಮೇಲೆ ಎಂಬುದು ಅರಿವಾಗಬೇಕಾದರೆ ನಮ್ಮ ಸುತ್ತಮುತ್ತಲಿನ ಪ್ರಪಂಚವನ್ನು ನೋಡಬೇಕು.ಉದ್ಯೋಗ ಇಂದಿನ ದಿನಗಳಲ್ಲಿ ಅನಿವಾರ್ಯ ಕೂಡ. ಮೊದಲಿತ್ತು ಗಂಡು ಮಕ್ಕಳು ಹೊರಗೆ ದುಡಿದು ತಂದು ಹಾಕಬೇಕು,ಮನೆಯಲ್ಲಿ ಹೆಣ್ಣಮಗಳು‌ ಮಾಡಿ ಹಾಕಬೇಕು.ಈ ಮಾತು ಸರ್ವೇಸಾಮಾನ್ಯ. ..ಆಗಿನ ಸಮಯದಲ್ಲಿ ಶಿಕ್ಷಣದ ಕೊರತೆ ಅಥವಾ ಹೆಚ್ಚು ಮಕ್ಕಳು ಇದ್ದಾಗ ಎಲ್ಲರ ಅವಶ್ಯಕತೆ ಪೂರೈಸಲು ಅಸಾಧ್ಯವಾದಾಗ, ಮನೆಯಲ್ಲಿ ತ್ಯಾಗ ಮಾಡಬೇಕಾದವರು ಹೆಣ್ಣು ಮಕ್ಕಳು.ಕಾರಣ ಮದುವೆ ಮಾಡಿ ಕಳಿಸಬೇಕು,ತಕ್ಕ ಮಟ್ಟಿಗೆ ಶಿಕ್ಷಣ ನೀಡಿ ಕೈತೊಳೆದು ಕೊಂಡ ಹೆಣ್ಣೆತ್ತವರು…ಅಡಿಗೆಮಾಡುವುದು,ಮನೆ ಸಂಭಾಳಿಸುವುದು ಕೆಲಸದತ್ತ ಹೆಚ್ಚು ಆದ್ಯತೆ ನೀಡಿ ಅಂದ್ರೆ ಟ್ರೇನಿಂಗ್ ಮಾಡಿಸುತ್ತ ಸಮಯವದು.ಗಂಡ ಮಕ್ಕಳು ಮಾತ್ರ ಹೊರಗೆ ದುಡಿಯೋದು ತಂದು ಹಾಕೋದು.ಏನು? ಹೇಗೆ? ತಂದಿದ್ದರಲ್ಲಿ ಜೀವನ ಸಾಗಬೇಕು.ಆದ್ರೆ ಇಲ್ಲಿ ಮನೆಯ ಆಗುಹೋಗುಗಳಿಗೆ ಯಾರೆಲ್ಲ ಜವಾಬ್ದಾರರು? ಅದರ ಹೊಣೆಯು ಗಂಡು ಮಕ್ಕಳದ್ದೆ.ಮನೆಯಲ್ಲಿ ಬಿರುಕುಗಳು ಬಂದರೆ ಅದರ ಜವಾಬ್ದಾರಿ ಹೆಣ್ಣು ಮಕ್ಕಳು ಹೊರಬೇಕು..
ಗಂಡಸಿನ ಆದಾಯ,ಲಾಭ,ಸರಿಯಿದ್ದರೆ ಅದರ ಎಲ್ಲ ಶ್ರೇಯಸ್ಸು ಮನೆಯ ಗಂಡಸರಿಗೆ ಹಾಗೂ ಅವನ ತಾಯಿಗೆ ಸಲ್ಲುತ್ತದೆ.ಅದೇ ಅವನು ನಷ್ಟ ಹೊಂದಿದರೆ,ಉದ್ಯೋಗದಲ್ಲಿ ತೊಂದರೆ ಆದ್ರೆ ಹೊಣೆ ಹೊರಬೇಕಾದವಳು ಅವನ ಹೆಂಡತಿ; ಅವಳ ಕಾಲ್ಗುಣ ಸರಿಯಿಲ್ಲ ಎಂಬೆಲ್ಲ ಮಾತುಗಳು ಗುಸುಗುಸು ಅಂತ ಹರಿದಾಡುವಾಗ, ಅಸಹಾಯಕಳಾದ ಹೆಣ್ಣು ಮಗಳು (ಸೊಸೆ) ಎಲ್ಲ ಆಪಾದನೆಗಳಿಗೆ ತಲೆದಂಡವಾಗಿ ಮೌನವಾಗಿ ಸಹಿಸಿಕೊಳ್ಳುತ್ತ ಹಗಲುಇರುಳು ತವರು ಮನೆಯ ಮರ್ಯಾದೆ ಹಾಳಾಗಬಾರದೆಂದು ತುಟಿಕಚ್ಚಿಕೊಂಡು ಗಂಡನ ಮನೆಯಲ್ಲಿ ದುಡಿಯುತ್ತಿರುತ್ತಾಳೆ.

ತನಗೆ ಏನಾದರೊಂದು ವಸ್ತು ತೆಗೆದುಕೊಳ್ಳಬೇಕೆಂದರೆ ಕೈಯೊಡ್ಡಿ ಬೇಡಬೇಕಾದ ಪರಿಸ್ಥಿತಿಗಳನ್ನು ನೆನೆದವರು ತಮ್ಮ ಅಸಹಾಯಕತೆ ದುಃಖ ಪಟ್ಟವರು ಇದ್ದಾರೆ.ನಾನು ಕಲಿತಿದ್ದರೆ,ನನಗೂ ಚಿಕ್ಕ ಪುಟ್ಟ ಉದ್ಯೋಗ ಇದ್ದಿದ್ದರೆ ನಾನು ಸ್ವಾಭಿಮಾನಿಯಾಗಿ ಬದುಕುತ್ತಿದ್ದೆ. ಕುಟುಂಬದ ಏಳಿಗೆಗೆ ನನ್ನ ಕೊಡುಗೆಯನ್ನು ನೀಡುತ್ತಿದ್ದೆ.ಎಂಬೆಲ್ಲ‌ ಅನಿಸಿಕೆಗಳು ಕಣ್ಮುಂದೆ ಹಾದುಹೋಗುವುದಂತು ಸತ್ಯ.ಹಳ್ಳಿಗಳಲ್ಲಿ ಹಿಂದೆಲ್ಲ  ‌ಹೆಣ್ಣು ಋತುಮತಿಯಾದರೆ ಮುಗಿತು, ಅವಳನ್ನು ಬಾಲ್ಯವಿವಾಹ ಪದ್ಧತಿಯಲ್ಲಿ ಕಟ್ಟಿ ಹಾಕಿ ಮದುವೆಯೆಂಬ ಕಂದಕದಲ್ಲಿ ದೂಡುವುದು ದೊಡ್ಡ ಪ್ರತಿಷ್ಠೆಯಾಗಿ ಪರಿಣಮಿಸಿತ್ತು.ಅದರ ಪರಿಣಾಮವೇ ಅಮಾಯಕ ಹೆಣ್ಣು ಮಕ್ಕಳು ಬಲಿಪಶುಗಳಾಗಿ ಜೀವನ ನಡೆಸುತ್ತಿರುವುದಂತೂ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ.ಅದರ ವಿರುದ್ಧ ಜಾಗೃತಿ ಮೂಡಿಸುವ ಎಲ್ಲ ಕಾಯಿದೆಗಳು ಬಾಲ್ಯವಿವಾಹ ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ. ಅಲ್ಲದೆ ಬಾಲ್ಯವಿವಾಹಗಳು ಇಂದಿನ ದಿನಗಳಲ್ಲಿ ತೊಂಬತ್ತು ಪ್ರತಿಶತದಷ್ಟು ಕಡಿಮೆಯಾಗಿದೆ.

ಶಿಕ್ಷಣದ ಮಹತ್ವ ಮತ್ತು ಶಿಕ್ಷಣ ಲಿಂಗ ತಾರತಮ್ಯವಿಲ್ಲದೆ ಎಲ್ಲರಿಗೂ ಉಚಿತ ಕಡ್ಡಾಯ ಶಿಕ್ಷಣ ನೀಡುವುದು ಪ್ರಥಮ ಆದ್ಯತೆ ಎಂಬುದನ್ನು ಪ್ರಜ್ಞಾವಂತ ಪಾಲಕರು ಅರಿತಿದ್ದರಿಂದ,ಹೆಣ್ಣು ಮಕ್ಕಳು ಇವತ್ತು ಗಂಡು ಮಕ್ಕಳ ಸರಿಸಮವಾಗಿ ಕಲಿತು‌ ಉದ್ಯೋಗ ಗಿಟ್ಟಿಸುವುದರಲ್ಲಿ ಮೇಲುಗೈ‌ ಸಾಧಿಸುತ್ತಿರುವುದು ಪ್ರಗತಿಪರ ಚಿಂತನೆಗೆ ದಾರಿಮಾಡಿಕೊಟ್ಟಂತೆ. ಬದುಕು ಬದಲಾಗುತ್ತಿದೆ.ವಿಚಾರಗಳು ಮೂಡನಂಬಿಕೆಯಿಂದ ಹೊರಬರುತ್ತಿರುವುದು ಸ್ವಾಗತಾರ್ಹ.ಆದರೆ ವಿಚಾರಗಳು ವಿಭಿನ್ನವಾಗಿ ಆಲೋಚಿಸುವ ಚಿಂತನೆಗಳು‌ ಸಂಕುಚಿತವಾಗಿ ಬೆಳೆಯುತ್ತಿರುವುದು‌; ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಪರಿವರ್ತನೆ
ಖಂಡಿತ ಖಂಡನಾರ್ಹ.ಇಂದು ಇಂತಹ ಕುಟುಂಬಗಳು ಹೆಚ್ಚುತ್ತಿರುವುದು ಮಾನವೀಯ ಮೌಲ್ಯಗಳು ಹಂತ ಹಂತವಾಗಿ ಸಂಬಂಧಗಳು ಕೆಡಲು ಕಾರಣವಾಗುತ್ತಿರುವುದು ದಿಟ. ವೈಚಾರಿಕ ಮನೋಭಾವ ಬೆಳೆಯಬೇಕು ಆದರೆ ಕುಟುಂಬ ದಿಕ್ಕಾಪಾಲಾಗಬಾರದು.

ಮೊದಲೆಲ್ಲ,ಟೆಂಟ್,ಸೋದೆ, ತಗಡು,ಹೆಂಚಿನ ಮನೆಗಳು ಮಾಯವಾಗಿದ್ದು ಪ್ರಗತಿಪರ ಎನ್ನಬಹುದು.ಇಂತಹ ಮನೆ ಕಟ್ಟಲು ಹೆಣಗಾಡುವ ಕುಟುಂಬಗಳು ಇಂದಿಗೂ ಅಲ್ಲಿ ಇಲ್ಲಿ ಆಶ್ಚರ್ಯ ಪಡಬೇಕಿಲ್ಲ.ಇವತ್ತು ನೋಡಿದರು ಕಾಡಿಗಿಂತ ಆರ್‌ಸಿ.ಸಿ.ಮನೆಗಳ ಹಾವಳಿಯೆ ಜಾಸ್ತಿ.ಕುಟುಂಬದ ಕಲ್ಪನೆ ಸಂಕುಚಿತವಾಗಿದೆ.ದುಡಿಯುವ ಕೈಗಳು ಕೇವಲ ತಮ್ಮ ಅವಶ್ಯಕತೆ ಬಗ್ಗೆ ಮಾತ್ರ ಮೀಸಲು. ತಾವು ಚೆನ್ನಾಗಿರಬೇಕು.ಉಳಿದವರ ಬಗ್ಗೆ ಕಿಂಚಿತ್ತೂ ಲಕ್ಷವಿಲ್ಲ.ಏನೋ ಎಲ್ಲರ ಧಾವಂತ ದುಡಿಬೇಕು,ಗಳಿಸಬೇಕು,ತನ್ನ ಮುಂದಿನ ತಲೆಮಾರಿಗಾಗುವಷ್ಟು ಗಳಿಸಬೇಕು ಎಂಬ ಹುಚ್ಚಾಟದಲ್ಲಿ ಗಂಡು,ಹೆಣ್ಣು ಮಕ್ಕಳು ಗಳಿಸುವತ್ತ ಓಡುತ್ತಿರುವುದು ಖುಷಿಪಡಬೇಕೋ,ದುಃಖ ಪಡಬೇಕೋ,ಅನ್ನೊರಿಗೆ ಒಂದು ಪ್ರಶ್ನೆ? ಕಾಡದಿರದು.ಇಷ್ಟೆಲ್ಲ ಗಳಿಸುವ ನೆಪದಲ್ಲಿ ಎನು ಸಾಧನೆ ಮಾಡಿದಿವಿ‌ ಅಂತ.

ಸಂಬಂಧಗಳು ಹೇಗೆ ಇರುತ್ತವೆ ಅಂತ ಅವರವರ ಸಂಬಂಧಿಕರ ಬಗ್ಗೆ ಅವರಿಗೆ ಮಾತ್ರ ಗೊತ್ತಿರುತ್ತದೆ.ಬಡತನ ಇದ್ದವರು ಉಳ್ಳವರ ನಡುವೆ ಬದುಕುವುದು ಕಷ್ಟ. ಅವರ ಮಕ್ಕಳಿಗೂ ಎಲ್ಲ ವ್ಯವಸ್ಥೆ ಮಾಡಿಕೊಡುವ ಸಾಮರ್ಥ್ಯ ಅವರಿಗಿಲ್ಲದಿರುವುದು ಅವರ ಅಸಹಾಯಕತೆ. ಸಂಬಂಧಿಕರು ಅವರ ಪರಿಸ್ಥಿತಿ ತಿಳಿದು ಸಹಾಯ ಮಾಡಿದರೆ ಸ್ವೀಕರಿಸಬೇಕು. ಆದರೆ ಅದೇ ನೆಪ ಇಟಗೊಂಡು ಪದೇ ಪದೇ ಕೈಚಾಚಿ ನಿಲ್ಲುವುದನ್ನು ಬಿಡಬೇಕು.ಮಕ್ಕಳ ಶಿಕ್ಷಣಕ್ಕಾದರೆ ಓಕೆ….ಆದರೆ ಮನೆ ನಡೆಸಲು ಬೇಡುವುದನ್ನು ಬಿಟ್ಟರೆ ನಿಮಗೆ ಗೌರವ.‌‌‌ಕೊಡುವವರು ಅಥವಾ ಉಪಕಾರ ಮಾಡುವರು ಇದ್ದಾರೆಂದು ಅವರ ನೆಮ್ಮದಿಯನ್ನು ಹಾಳುಮಾಡುವಷ್ಟು ಗಂಟುಬಿದ್ದರೆ ಬೆಲೆಯೆಲ್ಲಿದೆ? ಇಂತಹ ಸಂಬಂಧಿಗಳು ರಕ್ತಹೀರುವ ತಿಗಣೆಗಳಿಗೆ ಸಮಾನ!.ಹೆಣ್ಣು ಗಂಡಿಗೆ ಅಹಂಕಾರದ ಮದ,ಹಣದೊಂದಿಗೆ ಎಲ್ಲರನ್ನು ಕಾಲ ಕಸದಂತೆ ಕಾಣುವವರನ್ನು ದುರಂಹಕಾರಿಗಳಿಗೆ ಕಾಲವೇ ಉತ್ತರ ಕೊಡುತ್ತದೆ.ಇನ್ನೊಬ್ಬರ ಒಳ್ಳೆಯತನವನ್ನು ಕಿತ್ತು ತಿನ್ನುವ ಸಂಬಂಧಗಳಿಗೆ     ಯಾವ ಫಿಲಿಂಗ್ಸ್ ಇರದು.ಅವರಿಗೆ ಅವರ ಅವಶ್ಯಕತೆ ಪೂರೈಸುವವರು ಸಿಕ್ಕರೆ ಸಾಕು ಯಾರಾದರೂ ಆದಿತು…ಉಪಕಾರ ಉಪದ್ರವ ಆಗಿ ಎಷ್ಟೋ ಕುಟುಂಬಗಳು ನೆಮ್ಮದಿ ಕಳೆದುಕೊಂಡಿವೆ.ಅವಶ್ಯಕತೆ ಮೀರಿ ಉಪಕಾರ ಮಾಡುವವರ ಮನುಷತ್ವ ಸತ್ತು ಹೋಗಿದ್ದಂತು ಸತ್ಯ.

ಇಂದಿನ ದುಡ್ಡು ಎಷ್ಟು ಮಹತ್ವದ ಸ್ಥಾನ ಪಡೆಯುತ್ತಿದೆಯೋ ….ಅಷ್ಟೇ ಸಂಬಂಧಗಳು ಕೂಡ ದುಡ್ಡಿನ ಮೇಲೆ ತಮ್ಮ ಸ್ಥಾನವನ್ನು ಅತಿಕ್ರಮಿಸಿ ಬಿಟ್ಟಿವೆ.ಹಣದ ಹಿಂದೆ ಬಿದ್ದವರು‌…..ಕೇವಲ ಹಣದ ಬಗ್ಗೆ ಮಾತ್ರ ಲೆಕ್ಕ ಇಡುತ್ತಾರೆ.ಪ್ರತಿಯೊಂದನ್ನು ಹಣದಿಂದ ಕೊಂಡುಕೊಳ್ಳುವ ಧಾವಂತವದು.ಹಾಕುವ ಬಟ್ಟೆಯಿಂದ ವ್ಯಕ್ತಿಯನ್ನು ಅಳೆಯುವ ಮಾನದಂಡ ಬದಲಾಗಬೇಕು.ಉದಾ.ಬೆಂಗಳೂರನಲ್ಲಾದ ಘಟನೆ ನೆನೆಯಬಹುದು…ಪಂಜೆ ಉಟ್ಟು ಮಾಲ್ಗೆ ಬಂದ ರೈತನಿಗೆ ಅವಮಾನವಾದದ್ದನ್ನು ಮೆಲುಕುಹಾಕಬಹುದು.ಯಾರು ತಮ್ಮ ಜೀವಿತಾವದಲ್ಲಿ ಗಳಿಸಬಹುದಾದ ಸಂಪತ್ತಿಗಿಂತ ಹೆಚ್ಚು ಗಳಿಕೆ ಯಾವುದಕ್ಕೆ ಸಲ್ಲಬೇಕು ಎಂಬುದನ್ನು ಮನಗಾಣಬೇಕು.ಯಾರು ಸ್ಥಿತಿವಂತರೋ,ಕೇಳಿ ಕೇಳಿದಾಗ ದುಡ್ಡು ಕೊಟ್ಟು ಸಹಾಯ ಮಾಡುತ್ತಾರೋ‌ ಅವರ ಮನೆ ಮುಂದೆ ಸಾಲು ಸಾಲು ದಂಡು.ಸಕ್ಕರೆ ಎಲ್ಲಿದೆಯೋ ಅಲ್ಲಿ ಇರುವೆಗಳು…ಆದರೆ,ಸಮಾಜದಲ್ಲಿ ಟಾಟಾ ರತನ್ ನಂತಹ ಅಮೋಘ ದಾನಿಗಳು ಸಿಗುವುದು ದುರ್ಲಭ.

ಈಗ ಎಲ್ಲರೂ ಸ್ವಾವಲಂಬಿಯಾಗಲು ಬಯಸುತ್ತಿರುವುದು ಒಳ್ಳೆಯದು.ಕುಟುಂಬ ಛಿದ್ರವಾಗದಂತೆ ನೋಡಿಕೊಳ್ಳುವುದು ಬಹುಮುಖ್ಯ.ಉಪಕಾರ ಮಾಡಬೇಕು…ತನ್ನ ಮನೆಯನ್ನು ಹಾಳುಮಾಡಿ ಉಪಕಾರ ಮಾಡುವುದು “ಮಹಾಭಾರತದ ಕರ್ಣನ ಸ್ಥಿತಿಯನ್ನು ಮರೆಯಬಾರದು”.ದಾನಕ್ಕೆ ಅವನಿಗಿಂತ ಶ್ರೇಷ್ಠ ವ್ಯಕ್ತಿ ಬೇರಾರಿಲ್ಲ.ಆದರೆ ಸಂಬಂಧಿಗಳಿಂದ ಮೋಸದಿಂದ ಸಾಯುವಂತಾಗಿದ್ದು ಮಹಾಕಾವ್ಯಗಳೇ   ಸಾಕ್ಷಿ. ಇರುವಾಗ ಕಿತ್ತು ತಿನ್ನೊರು,ಅದೇ ವ್ಯಕ್ತಿಗೆ ಕಷ್ಟವಾಗಿದೆ ತೊಂದರೆಯಲ್ಲಿ ಇದ್ದಾನೆ,ಹಣಕಾಸಿನ ಸಮಸ್ಯೆ ಉಂಟಾಗಿದೆಯೆಂಬ ಸುದ್ದಿ ಗೊತ್ತಾದರೆ ಸಾಕು….ಅಥವಾ…ಆಸ್ಪತ್ರೆ, ಮನೆಕಟ್ಟುವುದು, ಮದುವೆ ಇಂತಹ ಕೆಲಸಗಳಿಗೆ ಕೈಜೋಡಿಸುವ ಸಂಬಂಧಿಗಳು ತುಂಬಾ ವಿರಳ.ಇದ್ದರೆ ಅವರು ಪುಣ್ಯವಂತರು.

“ಹಣವೆಂದರೆ ಹೆಣವು ಬಾಯಿ ತೆರೆಯುತ್ತೆ” ಎಂಬ ಮಾತಿದೆ.ಹಣದ ಹಿಂದೆ ಹೋದವರು ಹೆಣವಾಗಿ ಹೋದರು ಎಂಬ ಗಾಳಿ ಮಾತಿದೆ. ಅನೇಕ ಸಂಬಂಧಗಳು ಹಣಕಾಸಿನ ವ್ಯವಹಾರದಲ್ಲಿ ಜಗಳ ಮನಸ್ತಾಪ ರಕ್ತಪಾತವಾಗಿರುವುದು ಉಂಟು.ಹಣದಿಂದ ವಸ್ತುಗಳನ್ನು ಕೊಳ್ಳಬಹುದು,ಆದರೆ ಮನುಷತ್ವವನ್ನು ಕೊಳ್ಳಲು‌ ಸಾಧ್ಯವಿಲ್ಲ.ಹಣ ಬೇಕು ಅವಶ್ಯಕತೆ ಇಡೇರಿಸಿಕೊಳ್ಳಲು,ಅದೇ ಹಣ ಅವಶ್ಯಕತೆಗಿಂತ ಹೆಚ್ಚಾದಾಗ ದುಶ್ಚಟಗಳು,ದುರಾಭ್ಯಾಸಗಳು ಹೆಚ್ಚಾಗುತ್ತಿವೆ.ಸಹಾಯದ ಹೆಸರಿನ ಹಿಂದೆ ಅನೈತಿಕ ವ್ಯವಹಾರಗಳು ಹುಟ್ಟಿಕೊಂಡು ಕುಟುಂಬಗಳು ಪಾಶ್ಚಾತ್ಯ ಸಂಸ್ಕೃತಿಗಳ ಪ್ರಭಾವಕ್ಕೆ ಒಳಗಾಗುತ್ತಿವೆ.ಉದ್ಯೋಗ ಇದ್ದು ನೆಮ್ಮದಿಯ ಹುಡುಕಾಟ ಶುರುವಾಗಿದೆ.ಯಾವ ಸಂಬಂಧಗಳು ತಮ್ಮ ನೈಜ ಬದುಕಿಗಿಂತ ಮುಖವಾಡದ ಬದುಕಿಗೆ ಹೆಚ್ಚು ಒತ್ತುಕೊಡುತ್ತಿದೆ   ಮತ್ತು ಒಣ ಅಹಂ ನ್ನು ಜಾಗೃತಗೊಳಿಸುತ್ತಿದೆ.ಅದಕ್ಕೆ ದುಡ್ಡಿದ್ದರೆ ಸಂಬಂಧಗಳು ಬೇಡ ಅಂದ್ರು ಜೊತೆಗಿರುತ್ತವೆ; ಇಲ್ಲಾಂದರೆ ನಿಮಗೆ ನೀವೆ ಗತಿ!……


Leave a Reply

Back To Top