ಸಂಗಾತಿ ಪತ್ರಿಕೆಯಹಿರಿಯ ಲೇಖಕಿ, ಕವಯತ್ರಿ,ಕಥೆಗಾರ್ತಿ,ಅಂಕಣಗಾರ್ತಿ ಪ್ರೇಮಾ ಟಿ ಎಂ ಆರ್ ಅವರು ಕಾರವಾರ ತಾಲೂಕಿನ ಎಂಟೆನೇ ಸಾಹಿತ್ಯ ಸಮ್ಮೇಳನದ ಸರ್ವಾದ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ

ಸಮ್ಮೇಖನದ ದಿನಾಂಕ

[5:02 pm, 20/10/2024] PREMA TMR: ನಾನು ಪ್ರೇಮಾ ಟಿ ಎಂ ಆರ್ ….ಹುಟ್ಟಿದ್ದು ಕುಮಟಾ ತಾಲೂಕಿನ ಕೂಜಳ್ಳಿಯ “ಬೆಂಕಿಮನೆ” ಯೆಂಬ ಕಲಾವಿದರ ಮನೆತನದಲ್ಲಿ. ತಾಯಿ ಶ್ರೀಮತಿ ಮಾದೇವಿ ಹಾಗೂ ತಂದೆ ಶ್ರೀ ದೇವಪ್ಪ ನಾಯ್ಕ. ದೊಡ್ಡಪ್ಪ ನಾರಾಯಣ ನಾಯ್ಕರು ಯಕ್ಷಗಾನದ ಭಾಗವತರಾಗಿದ್ದರು. ಕುಮಟಾ ತಾಲೂಕಿನ ಕಲ್ವೆ ಚಿಮ್ಮಳ್ಳಿ ಗ್ರಾಮದಲ್ಲಿ ತನ್ನ ಪತ್ನಿಯೊಂದಿಗೆ ಕೃಷಿಯನ್ನು ನಂಬಿಕೊಂಡ ಶ್ರಮಜೀವಿ ಅಪ್ಪ ದೇವಪ್ಪ ನಾಯ್ಕ ಅವರು ಯಕ್ಷಗಾನ ಪಾತ್ರಧಾರಿಗಳಾಗಿದ್ದು ತನ್ನ ಸುತ್ತಲಿನ ಪರಿಸರದ ಹಾಲಕ್ಕಿ ಹಾಗೂ ಕುಂಬ್ರಿ ಮರಾಠಿ ಯುವಕರಿಗೆ ಯಕ್ಷಗಾನ ತರಬೇತಿ ನೀಡಿ ಪ್ರತಿವರ್ಷ ಅವರಿಗೆ ವೇಷ ಕಟ್ಟಿಸಿ ಬಯಲಾಟ ನಡೆಸುತ್ತಿದ್ದುದು ವಿಶೇಷ.. ಕೃಷಿ ಅಧಿಕಾರಿಯಾಗಿದ್ದ ಅಣ್ಣ ಮೋಹನ ನಾಯ್ಕ ಕೂಜಳ್ಳಿಯವರು ಹೆಸರಾಂತ ಹಾಗೂ ಅದ್ಭುತ ಯಕ್ಷಗಾನ ಕಲಾವಿದರೆಂದು ಪರಿಚಿತರಿದ್ದು ಲೇಖಕರಾಗಿ ಕೂಡ ಹೆಸರಾಗಿದ್ದಾರೆ.. ಇನ್ನೊಬ್ಬ ಸಹೋದರ ಅಶೋಕ ನಾಯ್ಕ ಅವರು ನಾಟಕಕಾರರಾಗಿ ಹೆಸರಾದವರು. ಊರಿನ ಆಸಕ್ತ ಯುವಕರಿಗೆ ನಾಟಕ ಕಲೆಯ ತರಬೇತಿ ನೀಡುತ್ತಿದ್ದಾರೆ. ಇವರು ಉತ್ತಮ ಮಾತುಗಾರರೂ ಆಗಿದ್ದಾರೆ..‌ ಕಿರಿಯ ಸಹೋದರ ಗಜು ನಾಯ್ಕ ಕೂಡ ಯಕ್ಷಗಾನ ಭಾಗವತರಾಗಿ ಹೆಸರಾಗಿದ್ದು ಕುಮಟಾ ತಾಲೂಕಿನಾದ್ಯಂತ ಅನೇಕ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲೆಯನ್ನು ತರಬೇತು ನೀಡುತ್ತಿದ್ದಾರೆ.
ಮದುವೆ ಮಾಡಿಕೊಟ್ಟದ್ದು ಊರು ಭಟ್ಕಳ ಬಂದರ್ ದ ಕಡಲ ಕಿನಾರೆಯ ತಲಗೋಡು ಗ್ರಾಮದ ‘ರೊಡಾಸ್ರಮನೆ’ ಕುಟುಂಬಕ್ಕೆ .. ಸಂಗಾತಿ ಟಿ ಎಂ ಆರ್ ನಾಯ್ಕ ಅವರು ಎಲ್ ಐ ಸಿ ಕಾರವಾರದಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ವೃತ್ತಿ ನಿರತರಾಗಿದ್ದು ಈಗ ವಿಶ್ರಾಂತ ರಾಗಿದ್ದಾರೆ.. ಒಬ್ಬನೇ ಮಗ ಅಭಿಷೇಕ್ ಟಿ ಎಂ ಆರ್, ಬಿ ಇ & ಅಲಯನ್ಸ್ ಯುನಿವರ್ಸಿಟಿಯ ಸ್ಕೂಲ್ ಒಫ ಬ್ಯುಸಿನೆಸ್ ನಲ್ಲಿ ಎಮ್ ಬಿ ಎ (ಒಪರೇಶನ್ ಮೆನೆಜ್ಮೆಂಟ್) ಪದವೀಧರನಾಗಿದ್ದು ‘ಡೆಲೊಯ್ಟ್’ ಕನ್ಸಲ್ಟನ್ಸಿಯಲ್ಲಿ ಸೀನಿಯರ್ ಕನ್ಸಲ್ಟಂಟ್ ಆಗಿ ವೃತ್ತಿ ನಿರತನಾಗಿದ್ದಾನೆ.. ಸೊಸೆ ನಾಗಸತ್ಯಶೃತಿ, ಸಿ ಎಸ್ ಪದವಿ, ಕಾನೂನು ಪದವಿ ಹಾಗೂ ರಿಟೇಲ್ ಮೆನೆಜ್ಮೆಂಟ್ ಪದವಿಧರಳಾಗಿದ್ದು ‘ಜೆ ವಿ ವೆಂಚರ್ಸ್’ ನ ‘ಅಲ್ಫಾ ಅಲ್ಟರ್ರ್ನೇಟಿವ್ಸ್ ‘ ನಲ್ಲಿ ವ್ಯವಸ್ಥಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ…
ನೆಲಸಿದ್ದು ಕಾರವಾರ ಕಡಲತೀರದ ‘ಚಿಂತನಗಂಗಾ’ದಲ್ಲಿ. ಕುಮಟಾದ ಎ .ವಿ . ಬಾಳಿಗಾ ಮಹಾವಿದ್ಯಾಲಯದಲ್ಲಿ ಬಿ ಎ ಪದವಿ. ಕರ್ನಾಟಕ ಯುನಿವರ್ಸಿಟಿಯಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ. ಮೂರು ವರ್ಷ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದು ಮದುವೆಯಾದಮೇಲೆ ಕೆಲಸಕ್ಕೆ ರಾಜಿನಾಮೆ ನೀಡಿ ಗೃಹಿಣಿಯಾಗಿದ್ದೇನೆ. ಕವಯಿತ್ರಿ, ಕಥೆಗಾರ್ತಿ, ಲೇಖಕಿ, ಅಂಕಣಕಾರ್ತಿ.. ಅಪರೂಪಕ್ಕೆ ಕೃತಿಗಳ ವಿಮರ್ಶೆ ಕೂಡ ಒಂದು ಹವ್ಯಾಸ.. ಹಲವಾರು ಕಾರ್ಯಕ್ರಮಗಳಿಗೆ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದೇನೆ… ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ. ‘ವಿಲ್ಲು ಬರೆಯುತ್ತೇನೆ’ ಕವನ ಸಂಕಲನ ಹೊರಬಂದಿದೆ. ನಾಲ್ಕು ಪುಸ್ತಕಗಳಿಗಾಗುವಷ್ಟು ಲೇಖನಗಳು , ಒಂದು ಕೃತಿಗಾಗುವಷ್ಟು ಕಥೆಗಳು (ಎಲ್ಲವೂ ಬಹುಮಾನಿತ ಕಥೆಗಳು) ಹಾಗೂ ಎರಡು ಸಂಕಲನಕ್ಕಾಗುವಷ್ಟು ಕವನಗಳು ಒಂದು ಸಂಕಲನಕ್ಕಾಗುವಷ್ಟು ವಿಮರ್ಶಾ ಬರಹಗಳ ಸಂಗ್ರಹಗಳು ಕೈಯ್ಯಲ್ಲಿವೆ.. ಇಂಡಿಯನ್ ಎಕ್ಸಪ್ರೆಸ್ ದಿನಪತ್ರಿಕೆಯ ಸಂಡೇ ಪುರವಣಿಯ ಲಿವಿಂಗ್ ವಿಭಾಗದಲ್ಲಿ ಪ್ರಕಟವಾಗುವ ಮಹಿಳೆಯರ ಸಾಧನೆಗಳ ಬರಹಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಕನ್ನಡ ಪತ್ರಿಕೆಗಳಿಗೆ ಬರೆದಿದ್ದೇನೆ…ರಾಜ್ಯಮಟ್ಟದ ಪತ್ರಿಕೆಗಳಾದ ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ವಿಜಯವಾಣಿ, ಹೊಸದಿಗಂತ ಉದಯವಾಣಿ ದಿನಪತ್ರಿಕೆಗಳಲ್ಲಿ ಕವನಗಳು ಹಾಗೂ ಲೇಖನಗಳು ಪ್ರಕಟವಾಗಿವೆ..‌ ಕಾರವಾರದ ಹೆಸರಾಂತ ದಿನಕರ ಕಲಾನಿಕೇತನದಲ್ಲಿ ಹಿಂದೂಸ್ಥಾನೀ ಸಂಗೀತಾಭ್ಯಾಸ ಮಾಡುತ್ತಿರುವದು ವಿಶೇಷ.. ಪ್ರತಿಷ್ಠಿತ ಕಾರವಾರ ಮಹಿಳಾ ಮಂಡಳದ ಮೆನೆಜಿಂಗ್ ಕಮಿಟಿಯಲ್ಲಿ ಸದಸ್ಯೆಯಾಗಿದ್ದೇನೆ.
ಜಿಲ್ಲೆಯ ಮನೆಮನೆಯ ಜನಮನದ ಮುಂಜಾನೆಯ ಮುಂಬೆಳಕಾದ ‘ಕರಾವಳಿ ಮುಂಜಾವು’ ಕೂಡ ನನ್ನ ಪರಿಚಯದ ಒಂದು ಭಾಗ.. ನನ್ನೊಳಗಿನ ಬರಹಗಾರ್ತಿ ಮುಂಜಾವು ನ ಅಂಗಳದಲ್ಲಿಯೇ ಹುಟ್ಟಿ ಬೆಳೆದವಳು ಎಂಬುದನ್ನು ವಿನಯದಿಂದ ನೆನಪಿಟ್ಟುಕೊಳ್ಳುತ್ತೇನೆ.. ಕೊನೆಯದಾಗಿ ಅನಕ್ಷರಸ್ಥೆಯಾಗಿದ್ದು ತನ್ನ ನಡು ವಯಸ್ಸಿನಲ್ಲಿ ಅಕ್ಷರ ಕಲಿತು ಮತಗಟ್ಟೆಯಲ್ಲಿ ಹೆಬ್ಬೊಟ್ಟಿನ ಬದಲು ಸಹಿ ಬರೆದ ಅಮ್ಮ ಮಾದೇವಿ, ರಾತ್ರಿ ಶಾಲೆಯಲ್ಲಿ ಅಕ್ಷರ ಕಲಿತು ಸಾಕ್ಷರರಾಗಿ ತೊಂಬತ್ತರಾಚೆಯೂ ಓದು ಬರೆಯುತ್ತಿದ್ದ ಅಪ್ಪ ದೇವಪ್ಪ ಆ ಕಾಲದಲ್ಲಿಯೇ ಮಗಳ ವಿದ್ಯಾಭ್ಯಾಸಕ್ಕೆ ಒತ್ತುಕೊಟ್ಟು ತಮ್ಮ ಬದುಕನ್ನು ಒತ್ತೆಯಿಟ್ಟು ನನ್ನ ಬದುಕನ್ನು ಹೀಗೆ ತಿದ್ದಿ ತೀಡಿದ್ದಕ್ಕೆ ಎದೆಯೆಲ್ಲ ವಿನೀತ ಭಾವವ ಬಳಿದು ಅವರ ಅಡಿಗೆ ಇಡುತ್ತಿದ್ದೇನೆ…

ಪ್ರೇಮಾ ಟಿ ಎಂ ಆರ್
ಕಾಲರುದ್ರೇಶ್ವರ ದೇವಸ್ಥಾನ ರಸ್ತೆ
ಕಾರವಾರ ೫೮೧೩೦೧
ಉತ್ತರಕನ್ನಡ ಜಿಲ್ಲೆ
ಕರ್ನಾಟಕ
ಮೊಬೈಲ್ ನಂಬರ…೮೬೧೮೦೯೫೪೯೩


One thought on “ಸಂಗಾತಿ ಪತ್ರಿಕೆಯಹಿರಿಯ ಲೇಖಕಿ, ಕವಯತ್ರಿ,ಕಥೆಗಾರ್ತಿ,ಅಂಕಣಗಾರ್ತಿ ಪ್ರೇಮಾ ಟಿ ಎಂ ಆರ್ ಅವರು ಕಾರವಾರ ತಾಲೂಕಿನ ಎಂಟೆನೇ ಸಾಹಿತ್ಯ ಸಮ್ಮೇಳನದ ಸರ್ವಾದ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ

Leave a Reply

Back To Top