ಕಾವ್ಯ ಸಂಗಾತಿ
ಹನಮಂತ ಸೋಮನಕಟ್ಟಿ
ಬನ್ನಿ ಬಂಗಾರವಾಗದು
ಬನ್ನಿ ಬಂಗಾರವಾಗದು
ಬಂಧುತ್ವದಲ್ಲಿ ಬಂಗಾರಕ್ಕೆ ಬೆಲೆ ಕೊಡಬಾರದು
ಆಗ ಬಾಂಧವ್ಯ ಗಟ್ಟಿಯಾಗಿರುತ್ತದೆ.
ಸಂತೋಷ ಸರ್ವರಿಗಿರಲಿ
ದ್ವೇಷ ಅಸೂಯೆ ಸರ್ವನಾಶವಾಗಲಿ
ಅಂದರೆ ಮಾತ್ರ ಎಲ್ಲರಲ್ಲೂ ನಗು ಕಾಣಲು ಸಾಧ್ಯ
ಪ್ರೀತಿಯಲ್ಲಿ ದೋಷ ಸಿಗಬಾರದು
ಸ್ನೇಹಕ್ಕೆ ಜಾತಿ ಗಡಿಗಳಿರಬಾರದು
ಅಂದರೆ ಎಲ್ಲರಿಗೂ ಸ್ನೇಹದ ಕೊಂಡಿ ಚಾಚಬಹುದು
ಸಂಬಂಧದಲ್ಲಿ ಸಿರಿತನ ಸಿಡುಕುತನ
ಎರಡಕ್ಕೂ ಅವಕಾಶ ಕೊಡಬಾರದು
ಅಂದರೆ ಮಾತ್ರ ಬಂಧು ಬಳಗ ಒಂದಾಗಲು ಸಾಧ್ಯ
ಗುಡಿಸಲಿನಲ್ಲಿ ಸಿಗುವ ಗೌರವ
ಬಡತನದಲ್ಲಿನ ಬಂಧುತ್ವ ಬೆಲೆ ಕಟ್ಟಲಾಗದು
ಇದನ್ನು ಅನುಭವಿಸಿ ಪಡೆಯಬೇಕು
ಬನ್ನಿಯ ಜೊತೆಗಿದ್ದ ಮುಳ್ಳು
ಇರುವ ಬಂಧುತ್ವ ಗಟ್ಟಿಗೊಳಿಸುವುದು
ನೋವುಕೂಡ ನಲಿವನ್ನು ಹಂಚಬಹುದು
ಗುಲಾಬಿ ಜೊತೆಗಿದ್ದ ಮುಳ್ಳು
ಪ್ರೀತಿ ಸ್ನೇಹ ಬಾಂಧವ್ಯಕ್ಕೆ ಕಾವಲಾಗಿರುವುದು
ಆದ್ದರಿಂದ ಇಲ್ಲಿಯವರೆಗೂ ಪ್ರೀತಿ ಪ್ರೇಮ ಉಸಿರಾಡುತ್ತಿರುವುದು
ಬನ್ನಿ ಬನ್ನಿ ಕೊಡುವೆ
ಬನ್ನಿ ಬನ್ನಿ ಜೊತೆಗೂಡಿ ಸಾಗೋಣ
ಬನ್ನಿ ಮಂಟಪದವರೆಗೆ ಬಲವಾದ ಹೆಜ್ಜೆಯನಿಟ್ಟು
ದಸರಾ ಆಚರಣೆ
———————————
ಹನಮಂತ ಸೋಮನಕಟ್ಟಿ