ಗಂಗಾ ಚಕ್ರಸಾಲಿ ಅವರ ಕವಿತೆ-ಮೌನದ ದಾರಿ

ಮೌನ ದಾರಿ
ಕೋಮಲ ಹಾದಿ ಎನ್ನಿಸುತ್ತಿಲ್ಲ
ತಿರುವು ತಿರುವಿನಲ್ಲೂ
ಭಾರ ನೆನಕೆಗಳು ಎದೆಗಿರಿಯುತ್ತವೆ
ಮನಕ್ಕಪ್ಪಳಿಸುತ್ತವೆ..

ಆಡಿದ ಮಾತುಗಳದ್ದು
ಮತ್ತೆ ದರ್ಬಾರು
ಕೇಳಬೇಕೆಂಬ ಉಮೇದು
ಹೃದಯಕ್ಕಿಲ್ಲ…ಆದರೂ
ಮೌನದಲ್ಲಿ ಜೊತೆಯಾಗುತ್ತವೆ..

ತಪ್ಪು ಯಾರದ್ದು ಎಂಬ ಪ್ರಶ್ನೆ
ಹಾದಿಗುಂಟ ಕಾಡುತ್ತಲೇ ಇರುತ್ತದೆ
ಮಾತಿನಲ್ಲಿ ಇದಕ್ಕೆ ಉತ್ತರವಿದೆ
ಹೌದು.. ಅದು ಮೌನಕ್ಕೆ ಗೊತ್ತಿದೆ

ಹೋಗಲಿ ನೆನಪುಗಳ ಕಟಕಟೆಗೆ
ಬಂದು ನಿಲ್ಲು ನೀನು
ಸಂಧಿಸಿದ ಕಣ್ಣುಗಳ
ಮಿಡಿದ ಹೃದಯಗಳ
ಸಾಕ್ಷಿ ಮಾಡೋಣ..
ಮೌನ ಮುರಿಯೋಣ


2 thoughts on “ಗಂಗಾ ಚಕ್ರಸಾಲಿ ಅವರ ಕವಿತೆ-ಮೌನದ ದಾರಿ

Leave a Reply