ವ್ಯಾಸ ಜೋಶಿ ಅವರಹಾಯ್ಕುಗಳು

ಓಟದ ಸ್ಪರ್ಧೆ,
ಶಬ್ದ ಬೆಳಕಿಗಿಂತ
ಮನಸ್ಸೇ ಮುಂದು.
*
ಅಮ್ಮನ ಪ್ರೀತಿ
ಎಂದೂ ಸುಳ್ಳು ಹೇಳದ
ಸ್ವಚ್ಛ ಕನ್ನಡಿ.
*
ಸ್ವರ್ಗದಮೃತ
ಹಸುಗೂಸಿನ ತಾಯ
ಕೆಚ್ಚಲೊಳಗೆ.
*
ಭಾರಿ ದ್ವೇಷವ
ಶಮನ ಮಾಡಿದೊಂದು
ಮುಗುಳುನಗೆ.
*
ಮನೋ ದೇವತೆ
ಪ್ರೇಮ ಸಂಗಮದಲಿ
ಐಕ್ಯಳಾದಳು.
*
ನನ್ನ ಹೃದಯ-
-ಸಿಂಹಾಸನ ಏರಿದ್ದು
ಮನದರಸಿ.


Leave a Reply

Back To Top