‘ಪಿತೃ ಪಕ್ಷವು….ಗಾಂಧೀ ಜಯಂತಿಯೂ’ ಹಾಸ್ಯಲೇಖನ-ಗೊರೂರು ಶಿವೇಶ್

ಪಾರ್ಕ್ ನಲ್ಲಿ ಎದುರಾದೊಡನೆ ಸ್ಮೈಲ್ ಮಾಡಿ ಮುಂದುವರಿಯುತ್ತಿದ್ದ ಧರಣಿ ಇಂದೇಕೋ ಅನ್ಯಮನಸ್ಕನಾಗಿ ಸಾಗುತ್ತಿದ್ದ .”ಯಾಕಪ್ಪ ಧರಣಿ ಆಕಾಶನೇ ತಲೆ ಮೇಲೆ ಬಿದ್ದ ಹಾಗೆ ಹೋಗ್ತಾ ಇದ್ದೀಯಲ್ಲೋ” ಎಂದೆ . ‘ನಿನಗೆ ಏನಪ್ಪಾ ಆಕ್ಲಾಸೆ, ನನ್ ಕಷ್ಟ ನನಗೆ” ಅಂಥದ್ದು ಏನಪ್ಪಾ  ಕಷ್ಟ ನಿಂಗೆ? ಈ ಬಾರಿ ಪಿತೃಪಕ್ಷಕ್ಕೆ ಮಟನ್ ಸಿಗಲಂತಲ್ಲಪ್ಪ 

ಯಾಕೆ ಏನು ವಿಷಯ ?

“ಅವತ್ತೇ ಬಸವ ಜಯಂತಿ ಬಂದಿದೆ, ಅಂತ ಹಂಗಾಗಿ ಮಾಂಸ ಮಾರಂಗಿಲ್ವಂತೆ “ತಕ್ಷಣ ನೆನಪಾಯಿತು

 ಹೈ ಸ್ಕೂಲ್ ವರೆಗೂ ಓದಿದಿಯ, ಏನು  ತಿಳ್ಕೊಂಡಿದ್ದೀಯೋ? ಅದು ಬಸವ ಜಯಂತಿಯಲ್ಲ, ರಾಷ್ಟ್ರಪಿತನ ಜಯಂತಿ ಗಾಂಧಿ ಜಯಂತಿ.

ಸರಿ .ಸರಿ.. ಟೆನ್ಶನ್ ಅಲ್ಲಿ ಯಾವತ್ತೂ ಏನು ಅನ್ನೋದೇ  ಗೊತ್ತಾಗ್ತಿಲ್ಲ. ಅದೇನಪ್ಪ ಅಂತ ಟೆನ್ಶನ್?  ಯಾರಿಗೂ ಇಲ್ದೆ ಇರೋ ಟೆನ್ಶನ್. ? 

“ನಿಂಗೇನಪ್ಪಾ ಸಿಹಿ ಬಾಯಿ  ಕರೆದರೆ ಅಲ್ಲ,ಕೂಗುದ್ರು ಪಿತೃಪಕ್ಷಕ್ಕೆ ಹತ್ತು ಜನ ಬರಲ್ಲ . ನಮ್ದು ಖಾರಾಬಾಯಿ,.ನಾನು ಏನು ಬೇಡ .ಫ್ರೆಂಡ್ಸ್ ಬೇಡ. ನಮ್ ಕಡೆ ನೆಂಟರು ತುಂಬಾ ಜನ  ಅವತ್ತೆ ಮಾಡೋದ್ರಿಂದ ಅವರು ಬೇಡ ಅಂದ್ರು. ನನ್ ಹೆಂಡ್ತಿ ಕಡೆಯಲರೆ ನೂರು ಜನ ಆಗ್ತಾರೆ .”

 “ಹಂಗಾದ್ರೆ ಸರಿ ಹಿಂದಿನ ದಿನಾನೇ ತಂದು ಇಟ್ಕೊಳೋ”

 ನಾನು ಲೋಕಲ್, ಸಿಂಧೂರ ಮರಿಗಳನ್ನೆಲ್ಲ ತರೋಲ್ಲ, ಚನ್ನರಾಯಪಟ್ಟಣದ ಹತ್ತಿರ ಬಾಗೂರು ನಾಟಿ ಮರಿ ನೇ ತರೋದು . ಅವತ್ತು ಅರ್ಲಿ ಮಾರ್ನಿಂಗೆ ಹೋಗಿ ತರೋದು. ಹಿಂದಿನ ದಿನಾನೇ  ಹೋಗಿ ತಂದ್ರೆ ಮಾರನೇ ದಿನ ರಾತ್ರಿ ಅಷ್ಟೊತ್ಗೆ ಟೇಸ್ಟ್ ಹೊರಟು ಹೋಗುತ್ತೆ.

 ಅಷ್ಟರಲ್ಲಿ ಅತ್ತ ಹೋಗುತ್ತಿದ್ದ ದೇವರಾಜ   ನಮ್ಮನ್ನು ಕಂಡು ಇತ್ತ ಬಂದ. 

.” ಏನ್ ನಿನ್ ಪ್ರಾಬ್ಲಮ್? “ಥೇಟ್ ತಿಥಿ ಚಿತ್ರದ ಗಡ್ಡಪ್ಪನ  ರೀತಿ ಪ್ರಶ್ನಿಸಿದ .ಅವನ ಬಳಿ ತನ್ನ ಸಮಸ್ಯೆ ತೋಡಿಕೊಂಡ  ಧರಣಿ . 

“ನನಗೂ ಅದೇ ಪ್ರಾಬ್ಲಮ್  ಆಗಿತ್ತು. ಏನು ಮಾಡೋಣಾಪ್ಪ ಅಂತ ಯೋಚನೆ  ಮಾಡ್ತಾ ಇದ್ದೆ. ಆಮೇಲೆ ಮಂಗಳವಾರ ಸಂಜೆಯಿಂದಲೇ ಅಮವಾಸ್ಯೆ ಶುರು ಅಂತ ಮಂಗಳವಾರನೇ ಮಾಡ್ತಾ ಇದ್ದೀವಿ ಅಂತ ನಮ್  ಕಡೆ ನೆಂಟರು ಒಬ್ಬರು ಹೇಳಿದರು .ನಾನು ಐನೋರ ಹತ್ರ ವಿಚಾರಿಸಿದೆ. ಅವರು  ಕೂಡ ಮಂಗಳವಾರ  ರಾತ್ರಿನೇ ಅಮಾವಾಸ್ಯೆ ಹುಟ್ಟುತ್ತೆ ಅಂದ್ರು. ಸರಿ ಅಂತ ನಾವು ಅವತ್ತೆ ಮಾಡ್ತಾ ಇದ್ದೀವಿ” .

“ಸರಿ ಹಂಗಾದರೆ ನೀನು ಸಿಕ್ಕಿದ್ದು ಒಳ್ಳೆದಾಯಿತು. ನಾನು ಮಂಗಳವಾರಕ್ಕೆ ಶಿಫ್ಟ್ ಮಾಡ್ಕೋತೀನಿ. ಬರ್ಲಾ.  ಮತ್ತೆ ನೀನು ಬಾರೋ .ಆಮೇಲೆ ಕರೀಲಿಲ್ಲ  ಅಂತ  ಬರೋದು ಬಿಟ್ಟಿಯ”ಅಂತ ಅಲ್ಲಿಂದ ಧಾವಿಸಿದ ಧರಣಿ


Leave a Reply

Back To Top