ಹೆಚ್.ಎಸ್.ಪ್ರತಿಮಾ ಹಾಸನ್ ಬರಹ-‘ಟೀಮ್ ಪ್ರಮೋದಿನಿ ಪ್ರತಿಜ್ಞೆ’

ಬದಲಾಗುತ ನಡೆಯುತಿರೆ ಜೀವನವು ಸಂತಸವೆ
ಕದಲದಲೆ ಸಾಗುತಿರು ಬದುಕಿನಲಿಯೆ
ಮದವನ್ನು ತೊರೆಯುತ್ತ ಪಡೆಯುತಲಿ ಪ್ರೀತಿಯನ್ನು
ಪದವಿಯದು ಬರುತಿರಲು ಲಕ್ಷ್ಮಿ ದೇವಿ……

ಜೀವನದಲ್ಲಿ ಬದಲಾವಣೆ ಮುಖ್ಯ. ಆ ಜೀವನವು ಸಂತಸವಾಗಿ ಸಾಗಬೇಕೆಂದರೆ ಕೆಲವೊಮ್ಮೆ ಬೇಡವೆಂದರೂ ಬದಲಾಣೆ ಅಳವಡಿಸಿಕೊಂಡು ಬದುಕುವುದು ಅನಿವಾರ್ಯ. ಯಾರೇ ಆಗಲಿ ಬದುಕಿನಲ್ಲಿ ಸಾಗಬೇಕಾದರೆ ಅಲ್ಲಿ ಕದಲಿಕೆ ಇರಬಾರದು. ಹಾಗೆಯೇ ಮದವನ್ನು ಎಂದಿಗೂ ತೋರಿಸಬಾರದು. ಅದನ್ನು ತೊರೆದು ಪ್ರೀತಿಯಿಂದ ಜೀವಿಸುವುದನ್ನು ಕಲಿಯಬೇಕು. ಆಗ ನಾವು ಮಾಡುವ ಕೆಲಸಕ್ಕೆ ಬೇಡವೆಂದರು, ಪದವಿಗಳು, ಸನ್ಮಾನಗಳು ಸಿಗುತ್ತದೆ. ಹಾಗೆಯೇ ನಮ್ಮ ಟೀಮ್ ಪ್ರಮೋದಿನಿ ಅಂತ ಹೇಳಿದರೆ ಪ್ರಮೋದಿನಿ ಕಟ್ಟಿದಂತಹ ಒಂದು ಸಂಘಟನೆ. ಸಂಘಟನೆಯಲ್ಲಿರುವಂತಹ ಎಲ್ಲಾ ಸದಸ್ಯರನ್ನು ಟೀಮ್ ಎಂದು ಕರೆಯಬಹುದು. ಪ್ರಮೋದಿನಿಯ ದೊಡ್ಡ ಮಹತ್ತರವಾದ ಆಸೆಯೆಂದರೆ ಸಮಾಜಕ್ಕಾಗಿ ಏನಾದರೂ ಮಾಡಬೇಕೆಂಬುದು ಆಕೆ ಪದವಿದರಳಾಗಿದ್ದು ಬಹಳಷ್ಟು ವಿದ್ಯಾಭ್ಯಾಸವನ್ನು ಮಾಡಿದ್ದರಿಂದ ಸಮಾಜದ ಏರುಪೇರುಗಳನ್ನು ಗಮನಿಸುತ್ತಲೇ ಬೆಳೆದ ಹೆಣ್ಣು ಮಗಳಾಗಿದ್ದಳು . ಆಕೆಯು ಎಲ್ಲಿ ಅನ್ಯಾಯ ನಡೆಯುತ್ತದೆಯೋ ಅಲ್ಲಿ ದನಿ ಎತ್ತುವಂತಹ ಸ್ವಭಾವವನ್ನು ಹೊಂದಿರುತ್ತಾಳೆ. ಎಂತಹ ಪರಿಸ್ಥಿತಿಯಲ್ಲಿ ಸ್ವಾಭಿಮಾನವನ್ನು ಬಿಟ್ಟು ಬಾಳಬಾರದೆಂಬ ನಿಯಮಗಳನ್ನು ತನಗೆ ತಾನು ಹಾಕಿಕೊಂಡು ಬದುಕಿರುತ್ತಾಳೆ.ಬದುಕಿನಲ್ಲಿ ಹುಟ್ಟಿದ ಮೇಲೆ ಏನಾದರೂ ನಾವು ಸಾಧಿಸಿಯೇ ಸಾಯಬೇಕೆಂಬ ಆಸೆ ಅವಳದು.
ಹಲವಾರು ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿದವಳು. ಮಹಿಳೆಯರ ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಾ ಬಂದ ಅವಳು ಹಲವಾರು ಪಾಠಗಳನ್ನು ಕಲಿತಿದ್ದಳು. ಪ್ರಮೋದಿನಿಯ ಪ್ರತಿಭೆಯನ್ನು ಬಳಸಿಕೊಂಡರೆ ಹೊರತು ಯಾರು ಸಹ ಅವಳನ್ನು ಬೆಳೆಸಲಿಲ್ಲ. ಆಕೆಯ ಕೆಲಸಕ್ಕೆ ಸಿಕ್ಕಿದ್ದು ಮಾತ್ರ ಸಮಾರಂಭಗಳಲ್ಲಿ ಶಾಲುಗಳನ್ನು ಮಡಿಸುವುದು, ಹಾರಗಳನ್ನು ಜೋಡಿಸಿ ಕೊಡುವುದು , ಬಂದಂತಹ ಅತಿಥಿಗಳಿಗೆ ಉಡುಗೊರೆಗಳು ಮತ್ತು ಹೂಗಳನ್ನು ಕ್ರಮಬದ್ಧವಾಗಿ ಜೋಡಿಸಿಡುವುದು ಅಷ್ಟೇ. ಆಕೆ ಎಂದಿಗೂ ಹೆಸರು ಮಾಡುವ ಆಸೆ ಪಡಲಿಲ್ಲ. ಅವರು ಬಳಸಿಕೊಳ್ಳುತ್ತಿದ್ದಾರೆ, ಬೆಳೆಸುವುದಿಲ್ಲ ಎಂಬುದನ್ನು ಗಮನಿಸಿರಲಿಲ್ಲ ನಗುಮುಖದ ರಾಣಿಯಂತೆ ಕಾರ್ಯಕ್ರಮದಲ್ಲಿ ಸಂಭ್ರಮಿಸುತಿದ್ದಳು. ಎಲ್ಲಾ ಕೆಲಸಗಳನ್ನು ಚಟಪಟ ಎಂದು ಮಾಡುತ್ತಿದ್ದಳು. ಯಾವುದೇ ಕೆಲಸವನ್ನು ಚಿಕ್ಕದು ಎಂದು ಕೊಳ್ಳುತ್ತಿರಲಿಲ್ಲ. ಎಲ್ಲರೂ ತಮ್ಮವರು ಎಂದು ಭಾವಿಸುತ್ತಿದ್ದಳು. ಎಲ್ಲರೂ ನನ್ನ ಅಕ್ಕ, ತಂಗಿ , ಅಣ್ಣ ತಮ್ಮಂದಿರು ಎಂದು ಭಾವಿಸುತ್ತಿದ್ದಳು. ಆಕೆ ಕೆಲಸ ಮಾಡುತ್ತಿದ್ದ ಸಂಘ-ಸಂಸ್ಥೆಗಳಲ್ಲಿ ಒಂದು ಸಂಸ್ಥೆ ಮಾತ್ರ ವಾರಕ್ಕೊಮ್ಮೆ ಆನ್ಲೈನ್ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು. ನಮ್ಮ ಪ್ರಮೋದಿನಿ ಎಷ್ಟರ ಮಟ್ಟಿಗೆ ಆಸಕ್ತಿಯಿಂದ ಕಾರ್ಯವನ್ನು ಮಾಡುತ್ತಿದ್ದಳು ಅಂದರೆ ಆಕೆಯಂತೆ ಮುಂದೆ ಯಾರು ಕೆಲಸವನ್ನು ಮಾಡುತ್ತಿರಲಿಲ್ಲವೇನೋ ಎಂಬಂತೆ ಭಾವಿಸುವಂತಿತ್ತು. ಆನ್ಲೈನ್ ಕಾರ್ಯಕ್ರಮಗಳಲ್ಲಿ ಮಾತ್ರ ಆಕೆಯನ್ನು ರಾಣಿಯಂತೆ ಎತ್ತಿ ಕುಣಿ ಸುತ್ತಿದ್ದರು . ಆಕೆ ಎರಡು ಗಂಟೆಯ ಆನ್ಲೈನ್ ಕಾರ್ಯಕ್ರಮದಲ್ಲಿ ನಿರೂಪಣೆ, ಸ್ವಾಗತ, ಪ್ರಾರ್ಥನೆ, ವಂದನಾರ್ಪಣೆ, ಕೆಲವೊಮ್ಮೆ ಕವನವಾಚನಗಳನ್ನು ಮಾಡಿದ ಉದಾಹರಣೆಗಳು ಇದ್ದವು. ಎಷ್ಟೇ ಕೆಲಸ ಮಾಡಿದರೂ ಸಹ ಆಕೆಯನ್ನು ಸಮಾರಂಭಗಳಲ್ಲಿ ನೆನೆಯುತ್ತಿರಲಿಲ್ಲ. ಪತ್ರಿಕೆಯಲ್ಲಿ ಬರೆಯುವುದು ಆ ಸಂಸ್ಥಾಪಕಿಗೆ ತಿಳಿಯಿತು. ಆಕೆಯ ಉದ್ದೇಶ ಏನಿತ್ತೆಂದರೆ ಆಕೆಯ ಸಂಸ್ಥೆ ಬಿಟ್ಟು ಬೇರೆ ಸಂಸ್ಥೆಗಳಲ್ಲಿ ಕೆಲಸ ಮಾಡುವಂತಿರಲಿಲ್ಲ. ಕಾರ್ಯಕ್ರಮಗಳಿಗೆ ಹೋಗುವಂತಿರಲಿಲ್ಲ. ಪ್ರಮೋದಿನಿಯು ಸಹ ನಿಯಮಕ್ಕೆ ಬದ್ಧಳಾಗಿದ್ದಳು. ರಾಜ್ಯಾಧ್ಯಕ್ಷಳಾಗಿ ತಾಯಿಯಂತೆ ನೋಡುತ್ತಿದ್ದಳು. ಆದರೆ ಆ ರಾಜ್ಯಾಧ್ಯಕ್ಷೆಯು ತದ್ವಿರುದ್ಧವಾಗಿದ್ದಳು. ಪ್ರಮೋದಿನಿಯ ಯಶಸ್ವನ್ನು ಸಹಿಸುತ್ತಿರಲಿಲ್ಲ. ಆಕೆಯನ್ನು ಕಾಲೆಳೆಯುವುದು, ಮನ ನೋವಾಗುವ ರೀತಿಯಲ್ಲಿ ಮಾತನಾಡಿಸುವುದು. ಗ್ರೂಪ್ ಗಳಿಂದ ಅಡ್ಮಿನ್ ಆಗಿದ್ದವಳನ್ನು ತೆಗೆಯುವುದು. ಮತ್ತು ರಾಜ್ಯ ಕಮಿಟಿಯಿಂದ ತೆಗೆಯುವುದು. ಹೀಗೆ ಮಾಡುತ್ತಿದ್ದಳು. ನಮ್ಮ ಪ್ರಮೋದಿನಿ ಬಹಳಷ್ಟುನಾಜುಕು, ನಗು ಮುಖವನ್ನು ಒಳಗೊಂಡಂತಹ ಹೊಂದಾಣಿಕೆ ಸ್ವಭಾವದ ಹೆಣ್ಣು ಮಗಳು. ಇತರರಿಗೆ ಸಹಾಯ ಮಾಡುವುದೆಂದರೆ ಆಕೆಗೆ ಪ್ರೀತಿ. ಹೀಗೆ ಹಲವಾರು ಉತ್ತಮ ಗುಣಗಳನ್ನು ಹೊಂದಿದವಳು. ಪ್ರಮೋದಿನಿ ಅಲ್ಲಿ ಕಲಿಯುವ ಆಸಕ್ತಿಯಿಂದ ಇದ್ದಳಷ್ಟೇ. ಅವರ ಈ ನಡತೆಯಿಂದ ಆಕೆ ದೂರವಾಗುವ ಪರಿಸ್ಥಿತಿ ಬಂದಿತು. ಆಕೆಯ ಸ್ನೇಹಿತರು ಕಲಿಯುವ ಉದ್ದೇಶದಿಂದ ನಮ್ಮನ್ನು ಯಾವುದಾದರೂ ಸಂಘ ಸಂಸ್ಥೆಗಳಿಗೆ ಸೇರಿಸಿ ಎಂದು ಕೇಳುತ್ತಿದ್ದರು. ಆಕೆ ಇದ್ದದ್ದೇ ಒಂದೇ ಸಂಸ್ಥೆಯಲ್ಲಿದ್ದರಿಂದ ಆ ಸಂಸ್ಥಾಪಕಿಯನ್ನು ಕೇಳಿದಳು. ಸಾಹಿತ್ಯದ ಆಸಕ್ತಿಯನ್ನು ಹೊಂದಿರುವ ಕೆಲವರಿದ್ದಾರೆ ಮೇಡಂ ದಯಮಾಡಿ ಅವರನ್ನು ವಾಟ್ಸಪ್ ಗ್ರೂಪಿಗೆ ಆಡ್ ಮಾಡಿ ಎಂದು ಕೇಳಿಕೊಳ್ಳುತ್ತಾಳೆ. ಆಕೆಯು ಪ್ರಮೋದಿನಿಗೆ ಮುಖಕ್ಕೆ ಹೊಡೆದ ರೀತಿಯಲ್ಲಿ ನಿಮ್ಮ ಇತರ ಸಂಘ-ಸಂಸ್ಥೆಗಳಿಗೆ ಸೇರಿಸಿಕೊಳ್ಳಿ ಎಂದು ಹೇಳಿಬಿಡುತ್ತಾರೆ. ನನ್ನದು ಯಾವುದು ಸಂಸ್ಥೆ ಇಲ್ಲ ಮೇಡಂ ಎಂದು ಹೇಳಿದಾಗ. ನೀವು ಬೇರೆ ಗ್ರೂಪ್ಗಳಲ್ಲಿದ್ದೀರಲ್ಲ ಅಲ್ಲಿ ಹಾಕಿಕೊಳ್ಳಿ ಎಂದು ಮುಖಕ್ಕೆ ಒಡೆದ ರೀತಿಯಲ್ಲಿ ಹೇಳುತ್ತಾರೆ. ಮನಸ್ಸಿಗೆ ನೋವಾದರೂ ಸಹ ಹಿರಿಯರು ಎಂಬ ಒಂದೇ ಕಾರಣಕ್ಕೆ ಯಾವುದೇ ರೀತಿಯ ಉತ್ತರ ನೀಡದೆ ಪರಿಚಯದವರ ಒಂದು ಗ್ರೂಪಿಗೆ ಅವರನ್ನು ಸೇರಿಸುತ್ತಾಳೆ. ಈಗ ಪ್ರಸ್ತುತ ದಿನಮಾನದಲ್ಲಿ ಅವರು ಒಳ್ಳೆಯ ಸಾಹಿತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗೆ ಮತ್ತೊಮ್ಮೆ ಬ್ಯಾನರ್ ಒಂದನ್ನು ಮಾಡಿಸಿಕೊಂಡು ಕಾರ್ಯಕ್ರಮಕ್ಕೆ ಸಿದ್ದಳಾದ ಪ್ರಮೋದಿನಿಯ ಬಳಿ . ಆ ಬ್ಯಾನರ್ ಅನ್ನು ಯಾವುದೋ ಕಾರ್ಯಕ್ರಮಕ್ಕೆ ಹಿಂಪಡೆದಂತಹ ಅಧ್ಯಕ್ಷೆಯು ಮತ್ತೆ ಆ ಬ್ಯಾನರನ್ನು ನೀಡುವುದಿಲ್ಲ. ಪ್ರಮೋದಿನಿ ನನಗೆ ಏನು ಕೊರತೆ ಇದೆ. ನನಗೆ ನಾನೇ ಏಕೆ ಗುರುವಾಗಬಾರದೆಂದು ಯೋಚಿಸುತ್ತಾಳೆ. ಆಗ ಪ್ರಮೋದಿನಿ ಯೋಚಿಸುವುದು ನನಗೆ ನಾನೇ ಒಂದು ಟೀಮ್ ಅನ್ನು ಕಟ್ಟಿಕೊಂಡು ಸಂಸ್ಥೆಯನ್ನು ಚಾಲನೆ ಮಾಡೋಣ ಎಂದು ಯೋಚಿಸುತ್ತಾಳೆ. ಆಗ ಒಳ್ಳೆಯ ಕಾರ್ಯಗಳಿಗೆ ಬಹಳಷ್ಟು ವಿಘ್ನ ಎಂಬಂತೆ ಆಕೆಗೆ ಅರಿವೇ ಇಲ್ಲದಂತೆ ವಿಘ್ನಗಳ ಸರಮಾಲೆ ಅವಳ ಕೊರಳಿಗೆ ಬೀಳುತ್ತವೆ. ಪ್ರಮೋದಿನಿ ಅಂಕಣಗಾರ್ತಿ, ಪತ್ರಕರ್ತೆ,
ಶಿಕ್ಷಕಿ, ಸಾಮಾಜಿಕ ಚಿಂತಕಿಯಾಗಿ ಸಮಾಜ ಸೇವೆಗಳಲ್ಲಿ ತೊಡಗಿಕೊಂಡು ತನ್ನನ್ನು ತಾನು ಸಮಾಜಕ್ಕೆ ಒಳ್ಳೆಯ ಮಾಹಿತಿಗಳನ್ನು ನೀಡುತ್ತಾ ಸಾಗುತ್ತಿರುವ ದಿಟ್ಟ ನೇರ ನುಡಿಯ ಮಾತುಗಾರ್ತಿ. ಇಂತಹ ಪ್ರಮೋದಿನಿಗೆ ಅಧ್ಯಕ್ಷ್ಯೆಯಿಂದ ಸಮಸ್ಯೆಗಳು ಬಹಳಷ್ಟು ಬರುತ್ತವೆ. ಬಂದಂತಹ ಸಮಸ್ಯೆಗಳನ್ನು ಬಹಳಷ್ಟು ಧೈರ್ಯದಿಂದ ಎದುರಿಸುತ್ತಾಳೆ . ರಾಗಿಣಿ ಎಂಬವಳು ಹಣವನ್ನು ಕೊಟ್ಟು ಪ್ರಶಸ್ತಿಯನ್ನು ಪಡೆಯುತ್ತಿರುತ್ತಾಳೆ. ಪ್ರಮೋದಿನಿ ನಿರೂಪಣೆಗೆಂದು ಹೋದಂತಹ ಕಾರ್ಯಕ್ರಮದಲ್ಲಿ ಆಕೆ ಹಣವನ್ನು ಕೊಟ್ಟಿರುತ್ತಾಳೆ ನನ್ನನ್ನು ಅತಿಥಿಯಾಗಿ ಹಾಕಿ ಎಂದು ಹೆಚ್ಚಿನ ಹಣ ಕೊಟ್ಟಿದ್ದು ಪ್ರಮೋದಿನಿಗೆ ತಿಳಿಯುತ್ತದೆ. ಪ್ರಮೋದಿನಿಗೆ ನಾನು ಕಾರ್ಯಕ್ರಮಕ್ಕೆ ಬರಲಾಗುವುದಿಲ್ಲ ನನಗೆ ಅನಾರೋಗ್ಯವಿದೆ ದಯಮಾಡಿ ನನಗೆ ಪ್ರಶಸ್ತಿಯನ್ನು ತಂದು ಕೊಡು ಎಂದು ಹೇಳಿರುತ್ತಾಳೆ. ಆಕೆಯು ಹಾಗೆ ಹೂ ಎಂದು ತಂದು ಕೊಡುತ್ತಾಳೆ. ರಾಗಿಣಿಯ ವಿಚಾರವನ್ನು ಕಾರ್ಯಕ್ರಮದ ಆಯೋಜಕರು ತಿಳಿಸಿರುತ್ತಾರೆ. ರಾಗಿಣಿ ಪ್ರಮೋದಿನಿಗೆ ವಿಚಾರ ತಿಳಿತೆಂದಾಗ ಪ್ರಶಸ್ತಿಯನ್ನು ಪಡೆದ ನಂತರದಲ್ಲಿ ಪ್ರಮೋದಿನಿಯನ್ನು ಕಂಡರೆ ಸಾಕು ದ್ವೇಷ ಮಾಡಲು ಪ್ರಾರಂಭಿಸುತ್ತಾಳೆ. ಪ್ರಮೋದಿನಿಯೂ ಸಹ ಹಣ ಕೊಟ್ಟು ಪ್ರಶಸ್ತಿಯನ್ನು ಪಡೆಯಬಾರದೆಂದು ತಿಳಿಸುತ್ತಾಳೆ. ರಾಗಿಣಿ ಪ್ರಮೋದಿನಿಗಿಂತ ಬಹಳಷ್ಟು ಹಿರಿಯ ಮಹಿಳೆ.
ರಾಗಿಣಿಯೂ ಸಹ ಅಧ್ಯಕ್ಷೆಯೊಂದಿಗೆ ಸೇರಿಕೊಳ್ಳುತ್ತಾಳೆ. ಆಗ ಪ್ರಮೋದಿನಿಗೆ ಏನಾದರೂ ಹಾನಿಯನ್ನು ಮಾಡಿ ಆಕೆ ಈ ಸಮಾಜದಲ್ಲಿಹೆಸರು ಮಾಡಿ ಉಳಿಯದಂತೆ ಮಾಡಬೇಕೆಂದು ನಿರ್ಧಾರವನ್ನು ಮಾಡುತ್ತಾರೆ. ಅವರದೇ ಆದಂತಹ ಲೇಖಕರ ಬಳಗದಲ್ಲಿ ಪ್ರಮೋದಿನಿಯ ಬಗ್ಗೆ ಎತ್ತು ಕಟ್ಟಿ ನಿಲ್ಲಿಸುತ್ತಾರೆ. ಪ್ರಮೋದಿನಿ ಯಾವುದಕ್ಕೂ ಅಂಜದೆ ತನ್ನ ಕಾರ್ಯದ ಬಗ್ಗೆ ಗಮನಹರಿಸುತ್ತಾಳೆ. ತನ್ನ ಟೀಮ್ ನಲ್ಲಿ ಇರುವಂತಹ ವ್ಯಕ್ತಿಗಳನ್ನು ಸಹ ಅಧ್ಯಕ್ಷೆ ಮತ್ತು ರಾಗಿಣಿ ಸೇರಿಕೊಂಡು ಪ್ರಮೋದಿನಿ ವಿರುದ್ಧ ದೊಡ್ಡ ಟೀಮ್ ಅನ್ನೇ ಮಾಡುತ್ತಾರೆ. ಸತ್ಯಕ್ಕೆ ಬೆಲೆ ತಡವಾಗಿ ಸಿಕ್ಕರೂ ಸಹ ಅದು ಅರಿವಾಗುವವರೆಗೂ ಪ್ರಮೋದನಿಗೆ ಬಹಳಷ್ಟು ನೋವಾಗುತ್ತದೆ. ಯಾವುದಕ್ಕೂ ಸೊಪ್ಪು ಹಾಕದೆ ಮುಂದುವರಿಯುವುದನ್ನು ಪ್ರಮೋದಿನಿ ಕಲಿತ್ತಿರುತ್ತಾಳೆ.ಯಾಕೆ ತನ್ನದೇ ಆದಂತಹ ಒಂದು ದೊಡ್ಡದಾದ ಟೀಮ್ ಕಟ್ಟುತ್ತಾಳೆ. ಆ ಟೀಮಿನಲ್ಲಿ ನಿಷ್ಕಲ್ಮಶವಾಗಿ ಸೇವೆ ಸಲ್ಲಿಸುವುದನ್ನು ಪತ್ರಿಕೆಗಳು ಪ್ರಕಟಿಸಲು ಪ್ರಾರಂಭಿಸುತ್ತವೆ. ಕಲ್ಲು ಮುಳ್ಳುಗಳನ್ನು ಹೊಂದಿರುವ ದಾರಿಯಾದರು ಆ ದಾರಿ ಮಾತ್ರ ಸುಗಮವಾಗಿ ಇಲ್ಲದಿದ್ದರೂ ಬಿಡುವುದಿಲ್ಲ. ಹಾಗೆ ಮುಂದುವರೆಯುತ್ತಾ ಹೋದಂತೆ. ಪ್ರಮೋದಿನಿ ಹೋದ ಕಡೆಯಲ್ಲೆಲ್ಲ ಚಾಡಿ ಹೇಳುವ ಗುಂಪುಗಳು ಚಾಳಿಯನ್ನು ಬೆಳೆಸಿಕೊಂಡು ಸಾಗುತ್ತಿದ್ದರು . ಪ್ರಮೋದಿನಿ ನೋಡಲು ಬಹಳ ಚಂದ ಇದ್ದಾಳೆ ಆದ್ದರಿಂದ ಎಲ್ಲರೂ ಪ್ರಶಸ್ತಿಗಳನ್ನು ನೀಡುತ್ತಿದ್ದಾರೆ, ಆಕೆಗೆ ಗಂಡಸರ ಸಹಾಯವಿದೆ, ಸೆಲ್ಫಿಗಳನ್ನು ತೆಗೆದುಕೊಂಡು ಪ್ರಶಸ್ತಿಗಳನ್ನು ತರಿಸಿದ್ದಾಳೆ, ಅಂಕಣಗಾರ್ತಿ ಯಾದವಳು ಸರಿಯಾಗಿ ಲೇಖನವನ್ನು ಬರೆಯಲು ಬರುವುದಿಲ್ಲ, ಪತ್ರಿಕೆಗಳು ಸುಮ್ಮ ಸುಮ್ಮನೆ ಪ್ರಕಟಿಸುತ್ತಿವೆ. ಕೃತಿ ಚೌರ್ಯಗಳನ್ನು ಮಾಡುತ್ತಿದ್ದಾಳೆ ಹೀಗೆಲ್ಲ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾಳೆ ಎಂದು ಅವರು ಮಾಡುವ ಕೆಲಸಗಳನ್ನು ಆಕೆಯ ಮೇಲೆ ಹಾಕಿ ನಡೆದರು. ಆದರೂ ಪತ್ರಿಕೆಗಳು ಕೈ ಬಿಡಲಿಲ್ಲ. ಹಲವಾರು ಸಂಘ ಸಂಸ್ಥೆಗಳು ಆಕೆಯನ್ನು ಗುರುತಿಸಿ ಪ್ರತಿಭೆಗೆ ತಕ್ಕ ಪುರಸ್ಕಾರವನ್ನು ನೀಡಲು ಪ್ರಾರಂಭಿಸಿದರು.ಅವರೆಷ್ಟು ಟೀಮ್ ಕಟ್ಟಿ ಕಾಲೆಳೆಯಲು ಹೋದರು ಸಹ ಆಕೆ ಬೆಳೆಯುತ್ತಾ ಹೋದಳು. ಯಾವುದಕ್ಕೂ ತಲೆಕೆಡಿಸಿಕೊಳ್ಳದ ಪ್ರಮೋದಿನಿ ಎಲ್ಲ ಪ್ರಕಾರಗಳನ್ನು ಬರೆದು ಪತ್ರಿಕೆಗಳಲ್ಲಿ ಹಾಕುತ್ತಿದ್ದಳು. ಹಿಂದಿ, ಇಂಗ್ಲಿಷ್, ಕನ್ನಡಗಳಲ್ಲಿ ಬರೆಯುವುದನ್ನು ಅಭ್ಯಾಸ ಮಾಡಿಕೊಂಡಳು. ಆಕೆಯನ್ನು ಗುರುತಿಸಿ ರಾಜ್ಯ,ರಾಷ್ಟ್ರಮಟ್ಟದಲ್ಲೆಲ್ಲಾ ಪ್ರಶಸ್ತಿಗಳ ಸರಮಾಲೆಯೇ ಹಾಕಲು ಪ್ರಾರಂಭಿಸಿದರು. ಹಿಂದಿ ಮ್ಯಾಗ್ಝಿನ್ ಗಳಲ್ಲೂ ಆಕೆಯ ಲೇಖನಗಳು ಬರತೊಡಗಿದವು. ಅಲ್ಲೂ ರಾಜ್ಯಮಟ್ಟದಲ್ಲಿ ಸೈ ಎನಿಸಿಕೊಂಡಿದ್ದಳು. ಯಾರು ಏನೇ ಮಾಡಿದರೂ ಸಹ ಆಕೆಯ ಪ್ರಾಮಾಣಿಕತೆ, ಕೆಲಸದ ಮೇಲಿನ ಶ್ರದ್ದೆ, ಭಕ್ತಿ, ಎಲ್ಲವೂ ಆಕೆಯ ಯಶಸ್ವಿಗೆ ಕಾರಣವಾಗುತ್ತಾ ಹೋದವು. ಸತ್ಯಕ್ಕೆ ಬೆಲೆ ಹೆಚ್ಚು ಎಂಬುದನ್ನು ನಾವು ಈ ಪ್ರಮೋದಿನಿ ಕಥೆಯಲ್ಲಿ ನೋಡಬಹುದು. ಚಾಡಿ ಹೇಳಿದಾಗ ಕೆಲವು ಸಂಘ-ಸಂಸ್ಥೆಗಳು ಆಕೆಯನ್ನು ಅವಕಾಶ ವಂಚನೆ ಮಾಡಿ ದೂರ ಮಾಡಿದವರು. ಆಕೆಯನ್ನು ಅವರೇ ಮಾತನಾಡಿಸುವಂತೆ ಹಲವಾರು ಕೆಲಸಗಳಿಗೆ ಆಕೆಯನ್ನು ಕರೆದು ಮಾಡಿಕೊಡುವಂತೆ ಕೇಳುವಂತಾಯಿತು. ಆಕೆಯು ಟೀಮ್ ಪ್ರಮೋದಿನಿ ಎಂಬ ಹೆಸರಿನಿಂದ ಖ್ಯಾತಿಯನ್ನು ಹೊಂದಲು ಪ್ರಾರಂಭಿಸಿದಳು. ಕಾಲೆಳೆದ ಅಧ್ಯಕ್ಷಯೇ ಪ್ರಮೋದಿನಿ ಒಂದು ಸಂಘದಲ್ಲಿ ಜಿಲ್ಲಾಧ್ಯಕ್ಷೆ ಆಗಿದ್ದಳು. ಅಲ್ಲಿ ಒಂದು ಕಾರ್ಯಕ್ರಮಕ್ಕೆ ಆಕೆ ಆರೋಗ್ಯ ಸರಿ ಇಲ್ಲವೆಂದು ಬರಲಾಗಲಿಲ್ಲ . ಕಾರ್ಯಕ್ರಮಕ್ಕೆ ಕಾಲೆಳೆದಂತಹ ಅಧ್ಯಕ್ಷಯು ಅವಕಾಶ ಬೇಡಿ ಹೋಗಿದ್ದಳು . ಇಷ್ಟೇ ಪ್ರಪಂಚ ಕಾಲೆಳದವರು ಕಾಲಕೆಳಗೆ ಇರುತ್ತಾರೆ ಹೊರತು ಅವರು ಎಂದೂ ಬೆಳೆಯಲು ಸಾಧ್ಯವಿಲ್ಲ. ಸತ್ಯವನ್ನು ಸುಳ್ಳು ಎಂದು ಹೇಳಿದವರು ಕೊನೆಗೆ ಸತ್ಯವನ್ನೇ ಹುಡುಕಿಕೊಂಡು ಬರಬೇಕು. ಸತ್ಯಕ್ಕೆ ಎಂದು ಸಾವಿಲ್ಲ. ಸುಳ್ಳಿಗೆ ನೆಲೆಯೇ ಇಲ್ಲ. ಎಂಬುದನ್ನರಿತು ಜೀವಿಸಬೇಕು.


Leave a Reply

Back To Top