ಕಾವ್ಯ ಸಂಗಾತಿ
ತಾತಪ್ಪ.ಕೆ.ಉತ್ತಂಗಿ
ನವರಾತ್ರಿಯ ನೀರೆಯರು
ಹಸಿರೇ ಉಸಿರೆಂದರು
ನಗುವಿನಾಭರಣದ ನೀರೆಯರು
ಭುವಿಯಭಾವದ ತಾರೆಯರು
ನವರಾತ್ರಿಯ ರಂಗಿನ ತರಂಗೀಯರು
ವರ್ಣವರ್ಣದ ಸೀರೆಗಳು
ಬಣ್ಣಬಣ್ಣದ ಭಾವಗಳು
ಭಾವಕ್ಕೂ ಬಣ್ಣಕ್ಕೂ
ಭಾವಬೆಸೆದ ಬೆಡಗಿಯರು
ನಮ್ ಸೀಮೆ ಸಂಪ್ರದಾಯದ
ಹುಡುಗಿಯರು
ತಿಳಿನೀಲಾಂಬರದ ಸಹೃದಯರು
ಮಾತುಮಾತಿಗೂ ಕಥೆಯ ಕಟ್ಟಿ
ಸಂಭ್ರಮಿಸುವರು
ತಮಾಷೆ,ನಗು,ಸಂತಸಗಳೇ
ಇವರಿಗೆ ಒಡವೆಗಳು
ಇವರೇ ಮನಮನೆಯ
ಸಂಸ್ಕೃತಿಯ ಒಡತಿಯರು.
ನೀವೊಂದು ಹನಿಮುಗಿಲು
ಎಂದೂ ಮುಗಿಯದ ಹಗಲು
ಅಬ್ಬರಿಳಿತ ಮಿಳಿತಗಳ ಕಡಲು
ಸಂಭ್ರಮದ ಹೂನಗೆಯ ಹೊನಲು
ನಿಮಗೆ ನೀವೇ ಸಾಟಿ
ನಿಮಗಿಲ್ಲ ಯಾರಾ ಚಾಟಿ
ನಗುವಿನಿಂದ ನೀವು ಸದಾ ಚೂಟಿ
ನಿಮಗೆ ನಿಮ್ಮದೇ ದಾಟಿ.
ತಾತಪ್ಪ.ಕೆ.ಉತ್ತಂಗಿ
Supar sir❤️
Nic5
ಹಾಯ್ ಸರ್ ಆರಾಮಿದ್ದೀರಾ
ಸೂಪರ್ ಸರ್
Super sir
Super sir
Nice
Super sir ❣️
Nice