ವಿಶೇಷ ಲೇಖನ
‘ಭೋವಿ ರಾಮಚಂದ್ರ
‘ಡಿಜಿಟಲ್ ಅಂಚೆ
ಕಚೇರಿಯಲ್ಲಿ
ತುಕ್ಕು ಹಿಡಿದ ಅಂಚೆ ಡಬ್ಬ
ಅಂಚೆ ಡಬ್ಬ (ಪೋಸ್ಟ್ ಬಾಕ್ಸ್)
ಸುಮಾರು ೨೦೦೦ ಇಸವಿಯ ಹಿಂದೆ ತಕ್ಕ ಮಟ್ಟಿಗೆ ಮಾನ್ಯತೆ ಪಡೆದ ಸಂಚಾರ ವಿಷಯದ ಡಬ್ಬವಾಗಿತ್ತು , ಅಂಚೆ ಡಬ್ಬವನ್ನು ನೆನೆಯುವ ಕಾಲದಲ್ಲಿ ನಮ್ಮೂರಿನ ಅಂಚೆ ಡಬ್ಬ ತುಕ್ಕು ಹಿಡಿದು ಮರಕ್ಕೆ ನೇತಾಡುತ್ತಿದೆ , ನಾನು ಅಂಚೆ ಕಚೇರಿಯ ಬಗ್ಗೆ ಮಾತನಾಡುತ್ತಿಲ್ಲ , ಅಂಚೆ ಕಚೇರಿ ಯಾವಾಗಲೂ ಇರುತ್ತೆ ಹಾಗೆ ಆಧುನಿಕ ತಂತ್ರಜ್ಞಾನದ ಮೂಲಕ ನವೀಕರಣಗೊಳ್ಳುತ್ತಿದೆ , ಈಗ ಡಿಜಿಟಲ್ ಅಂಚೆ ಕಛೇರಿಯ ಸೇವೆಗಳು ದೊರೆಯುತ್ತಿವೆ, ನಾವು ಕೂಡ ಬಳಕೆದಾರರಾಗಿ ಬಳಸುತ್ತಿದ್ದೇವೆ . ನಾನು ನೋಡಿದ ಅಂಚೆ ಡಬ್ಬದ ಬಗ್ಗೆ ಮಾತನಾಡುವೆ , ಇದರ ವಿಶೇಷತೆ, ಪ್ರಾಮುಖ್ಯತೆ, ಅನುಕೂಲತೆ , ತಂತ್ರಜ್ಞಾನವನ್ನು ಹೊರತು ಪಡಿಸಿ ಆದ ಸಹಾಯ , ಇದರಲ್ಲಿ ಬಿದ್ದ ಎಷ್ಟೋ ಅಂಚೆ ಪತ್ರಗಳ ವಿಶೇಷತೆ, ದೂರದಿಂದ ದೂರಕ್ಕೆ ಸೇರುವ ಪತ್ರಗಳ ಸಂಗಮ ಸಂಬಂಧ ನನಗೆ ತಿಳಿದ ಮಟ್ಟಿಗೆ ನಿಮ್ಮ ಮುಂದೆ ವ್ಯಕ್ತ ಪಡಿಸುವೆ.
ನಮ್ಮ ಊರಿನ ಅಂಚೆಯ ಪಿನ್ ಕೋಡ್ “583125” ನಾನು ಸಿದ್ಧಗಂಗಾ ಮಠದಲ್ಲಿ ಓದುತ್ತಿರುವಾಗ ಮೊದಲ ಬಾರಿಗೆ ಆಧಾರ್ ಕಾರ್ಡ್ ಮಾಡಿಸಲು ಅಂಚೆ ಪಿನ್ ಕೋಡ್ ನನಗೆ ಗೊತ್ತಿರಾದ ಕಾರಣ ನಮ್ಮ ಊರಿನ ವಿಳಾಸವನ್ನು ನಮೂದಿಸದೆ , ಸಿದ್ದಗಂಗಾ ಮಠದ ವಿಳಾಸವನ್ನು ನಮೂದಿಸಿ ಬಿಟ್ಟರು ಆಗ , ನಾನು ಯಾವುದೇ ಅರ್ಜಿ ಸಲ್ಲಿಸಿದ್ರು ಆಧಾರ್ ಕಾರ್ಡ್ ವಿಳಾಸವನ್ನೆ ನಮೂದಿಸಬೇಕಿತ್ತು , ಮನೆಗೆ ಫೋನ್ ಮಾಡುವ ಮೂಲಕ ನಮ್ಮೂರಿನ ಅಂಚೆ ಪಿನ್ ಕೋಡ್ ತಿಳಿದುಕೊಂಡೆ ಆಗ ನನಗೂ ಮತ್ತು ಅಂಚೆ ಡಬ್ಬಕ್ಕೂ ತುಂಬಾ ಆತ್ಮೀಯ ಸಂಬಂಧ ಬೆಳೆಯಿತು , ಅಲ್ಲಿಂದ ಅಂಚೆ ಕಚೇರಿಗೆ ರಜೆಯ ದಿನಗಳಲ್ಲಿ ಹೋಗತೊಡಗಿದೆ . ನಮ್ಮ ಸಿದ್ಧಗಂಗಾ ಮಠದ ಒಳಗೆ ಅಂಚೆ ಕಚೇರಿ ಇರುವ ಕಾರಣ ನನಗೆ ತುಂಬಾ ಸಹಾಯ ಆಯಿತು, ಆರನೇ ತರಗತಿ ವಿದ್ಯಾರ್ಥಿ ನಾನು , ಒಂದು ರೂಪಾಯಿಗೆ ಎರಡು ಕಾರ್ಡ್ ತೆಗೆದುಕೊಳ್ಳುತ್ತಿದ್ದೆ , ಇಂದ ಮತ್ತು ಇವರಿಗೆ ಎನ್ನುವ ಸ್ಥಳದಲ್ಲಿ ಮೊದಲ ಬಾರಿಗೆ ತಪ್ಪು ತಪ್ಪಾಗಿ ಬರೆದು ಅಂಚೆ ಡಬ್ಬದಲ್ಲಿ ಹಾಕುತ್ತಿದ್ದ , ಒಂದು ದಿನ ಅಂಚೆ ಕಚೇರಿಯಲ್ಲಿ ಕೆಲಸ ಮಾಡುವ ಆಫೀಸರ್ ಒಬ್ಬರು ಕೊಡು ನಿನ್ನ ಪತ್ರ ಅಂತ ಕೇಳಿದಾಗ ಕೊಟ್ಟೆ ಆಗ ಸರಿ ತಪ್ಪುಗಳು ನನಗೆ ತಿಳಿಯಿತು, ನಂತರ ಅಲ್ಲೆ ಮತ್ತೇರಡು ತೆಗೆದುಕೊಂಡು ಸರಿಯಾಗಿ ಬರೆದೆ ಅಮ್ಮರ ಊರಿಗೆ ಒಂದು , ನಮ್ಮ ಊರಿಗೆ ಒಂದು , ಇಂದ ಭೋವಿ ರಾಮಚಂದ್ರ , ಆರನೇ ತರಗತಿ , ಕೆ, ವಿಭಾಗ ,ಸಿದ್ಧಗಂಗಾ ಮಠ, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ , ಮತ್ತೆ ಗೆ ಯಾರಿಗೆ ಎಂದರೆ ನವಲಿ ಸಿದ್ಧಪ್ಪ , ಹೊನ್ನೇನಹಳ್ಳಿ ಗ್ರಾಮ , ಹರಪನಹಳ್ಳಿ ತಾಲೂಕು, ಆಗ ದಾವಣಗೆರೆ ಜಿಲ್ಲೆ, ಮತ್ತೊಂದು ನಮ್ಮ ಊರಿಗೆ , ಹಾಲೇಶಪ್ಪ , ರಾಮಘಟ್ಟ ,ಹರಪನಹಳ್ಳಿ ತಾಲೂಕು, ದಾವಣಗೆರೆ ಜಿಲ್ಲೆ. ಈ ಎರಡು ಪತ್ರಗಳು ಮೂರು ನಾಲ್ಕು ದಿನಕ್ಕೆ ಹೋಗಿ ಸೇರಿಕೊಂಡವು. ಪತ್ರಗಳನ್ನು ಕಳಿಸಿ ರಜೆ ದಿನಗಳಲ್ಲಿ ಪೋನ್ ಮಾಡಿ ಕೇಳುತ್ತಿದ್ದೆ ಅಂಚೆ ಪತ್ರಗಳು ಬಂದಿದ್ದವ ಅಂತ ಆಗ ಅಂಚೆ ಡಬ್ಬದಲ್ಲಿ ತಿಂಗಳಿಗೆ ಏಳೆಂಟು ಪತ್ರಗಳು ಹಾಕುತ್ತಿದ್ದೆ ಹೀಗೆ ಅಂಚೆ ಕಚೇರಿಯ ಬಗ್ಗೆ ಮತ್ತು ಡಬ್ಬದ ಬಗ್ಗೆ ತಿಳಿದ್ದಿದ್ದು ಆಗ , ಆವಾಗ ಅಂಚೆ ಡಬ್ಬಗಳು ಬಣ್ಣದಿಂದ ತುಂಬಿ ತುಳುಕುತ್ತಿತ್ತು ಈಗ ತುಕ್ಕು ಹಿಡಿದಿವೆ.
ಈಗೆಲ್ಲಾ ಸ್ಮಾರ್ಟ್ ಫೋನ್ ಗಳು ರಾರಾಜಿಸುತ್ತಿವೆ ಆದರೆ ಇಪ್ಪತ್ತೈದು ವರ್ಷಗಳ ಹಿಂದೆ ಇಷ್ಟೇಲ್ಲಾ ಪೋನ್ ಗಳ ಬಳಕೆ ಇರಲಿಲ್ಲ , ಎಸ್ ಟಿ ಡಿ ಬೂತ್ ಮತ್ತು ಶ್ರೀಮಂತರ ಮನೆಯಲ್ಲಿ ಕೀಬೋರ್ಡ್ ಮೊಬೈಲ್ ಫೋನ್ ಗಳು ಇದ್ದವು , ಯಾವುದಾದರೂ ವಿಷಯಗಳು ತಲುಪಬೇಕಾದರೆ ರಾಜ್ಯ ಮತ್ತು ಹೊರ ರಾಜ್ಯದಲ್ಲಿ ತುಂಬಾ ಸಮಯ ಬೇಕಿತ್ತು, ಅಂಚೆ ಪತ್ರ ಬರೆಯುವುದರಿಂದ ಭಾಷಾ ಜ್ಞಾನ, ಬರವಣಿಗೆ ಜ್ಞಾನ ಎರಡು ತುಂಬಾ ಅತಿ ಅಮೂಲ್ಯವಾಗಿತ್ತು ಈಗ ಭಾಷಾ ಜ್ಞಾನ ಇಲ್ಲ ಏನು ಇಲ್ಲ ಬರೇ ತಲೆಯಲ್ಲಿ ಮಣ್ಣು , ಪತ್ರ ಬರೆಯುವಾಗ ಶ್ರೀ ಮತ್ತು ಶ್ರೀಮತಿ , ನೀವು ಕ್ಷೇಮವೇ ಎಂದು ತಿಳಿಸುವ ಮೂಲಕ ಪ್ರಾರಂಭವಾದ ಪತ್ರ ಕೊನೆಯಲ್ಲಿ ಗೌರವಾನ್ವಿತರಿಗೆ ಧನ್ಯವಾದಗಳು ಅಥವಾ ವಂದನೆಗಳು ಅಂತ ಕೊನೆಗಾಣುತ್ತಿತ್ತು ಆದರೆ ಈಗ ಹಲೋ ಎಲ್ಲಿದ್ದಿಯಾ ಲೇ , ಸರಿ ಪೋನ್ ಮಾಡುಗ್ಲಾ ಎನ್ನುವ ಭಾಷೆ ಬರುತ್ತಿದಿದೆ , ಏನೇ ಇರಲಿ ವ್ಯಯಕ್ತಿಕ ಆದರೆ ಅಂಚೆ ಪತ್ರಗಳು ಈಗೀನ ಜನರಿಗೆ ಬರೆಯುವುದೇ ಗೊತ್ತಿಲ್ಲ , ಅಂಚೆ ಕಚೇರಿ ಈಗ ಸಮಾಜದ ವ್ಯಾವಹಾರಿಕ ಪತ್ರಗಳ ವಿನಿಮಯ ಕಂಪನಿಯಾಗಿದೆ , ಎಲ್ ಐ ಸಿ , ಕೋರ್ಟ್ ಆದೇಶದ ಪತ್ರಗಳು , ಸರ್ಕಾರಿ ಪತ್ರಗಳು ಮಾತ್ರ ಬರುತ್ತಿವೆ ಆದರೆ ಆತ್ಮೀಯತೆಯ ಸಂಬಂಧದ ಪತ್ರಗಳು ಬರುತ್ತಿಲ್ಲ ಕಾರಣ ಡಿಜಿಟಲ್ ಜಗತ್ತು, ಇದರಲ್ಲಿ ನಾನು ಕೂಡ ಒಬ್ಬ ಲೇಖನ ಬರೆತ್ತಿರುವೆ ಅಂತ ನಾನೇನು ಇನ್ನು ಅಂಚೆ ಪತ್ರಗಳು ಬರೆಯುತ್ತಿದ್ದೇನೆ ಅಂತ ಭಾವಿಸಿ ಜಗಳ ಮಾಡಬೇಡಿ , ನನ್ನ ಕೈಯಲ್ಲಿ ಸ್ಮಾರ್ಟ್ ಫೋನ್ ಇದೆ ಆಗಾಗಿ ನಾನು ಹೊಸ ಸಮಾಜಕ್ಕೆ ಹೊಂದಿಕೊಂಡಿರುವೆ , ಅಂಚೆಯ ಡಬ್ಬದಲ್ಲಿ ಈಗ ಇರುವೆ , ಚಿಕ್ಕ ಚಿಕ್ಕ ಕೀಟಗಳು ವಾಸವಾಗಿವೆ, ಮನುಷ್ಯನಿಗೆ ಸಹಾಯ ಮಾಡಲು ಜನ್ಮ ತಾಳಿದ ಅಂಚೆ ಡಬ್ಬ, ಚಿಕ್ಕ ಚಿಕ್ಕ ಜೀವಿಗಳಿಗೆ ಆಸರೆಯಾಗಿದೆ ಗ ಋಷಿ ವಿಚಾರ .
ನನಗೆ ನಮ್ಮ ಶಾಲೆಯಲ್ಲಿ ಒಂದು ಚರ್ಚಾಸ್ಪರ್ಧೆ ಇಟ್ಟಿದ್ರು , ಅಂಚೆ ಪತ್ರ ಮತ್ತು ಮೊಬೈಲ್ ಪೋನ್ ಗಳಿಂದ ಆಗುವ ಅನುಕೂಲತೆ ಮತ್ತು ಅನಾನುಕೂಲತೆಗಳ ಬಗ್ಗೆ ಸ್ಪರ್ಧೆ ಏರ್ಪಡಿಸಲಾಗಿತ್ತು, ಅಂಚೆ ಪತ್ರ ಮತ್ತು ಮೊಬೈಲ್ ಅನುಕೂಲತೆಯ ಬಗ್ಗೆ ನಮಗೆ ಗೊತ್ತಿದೆ ಹಾಗೆ ಅನಾನುಕೂಲತೆಯ ಬಗ್ಗೆಯು ನಮಗೆ ಗೊತ್ತಿದೆ ಇದರ ಬಗ್ಗೆ ಹೆಚ್ಚಿನ ಹೇಳಿಕೆಯ ಬಗ್ಗೆ ಬೇಡ ಅನಿಸುತ್ತದೆ ಆಗ ನಾನು ಮೊಬೈಲ್ ಪೋನ್ ಅನುಕೂಲತೆ ಮತ್ತು ಅನಾನುಕೂಲಗಳ ಬಗ್ಗೆ ಪ್ರಸ್ತುತ ತಂತ್ರಜ್ಞಾನವನ್ನು ಗಮನದಲ್ಲಿಟ್ಟುಕೊಂಡು ಹೇಳಿದೆ ದ್ವಿತೀಯ ಸ್ಥಾನ ಬಂತು ಇದು ಬೇರೆ ವಿಚಾರ , ವಿಷಯದ ಬಗ್ಗೆ ವ್ಯಕ್ತಪಡಿಸುವ ವಿಚಾರ ಎಷ್ಟು ಅನುಕೂಲ ಮತ್ತು ಅನಾನುಕೂಲ ಅಂತ ನಮಗೆ ತಿಳಿಯಬೇಕು ಅಲ್ವಾ ಅದಕ್ಕೆ ನಾನು ಈ ಚಿಕ್ಕ ವಿಚಾರ ಹೇಳಿದೆ, ಈಗ ಈ ತುಕ್ಕು ಹಿಡಿದ ಅಂಚೆ ಡಬ್ಬವನ್ನು ಏನು ಮಾಡಬೇಕು ನಾವು ಮತ್ತು ನಮ್ಮ ಸರ್ಕಾರ , ಅಂಚೆ ಪತ್ರಗಳ ಅವಶ್ಯಕತೆ ಈಗ ಇಲ್ಲ , ಕಂಪ್ಯೂಟರ್ ಬಂದಿದೆ , ಇಮೇಲ್, ಜೀ ಮೇಲ್ , ವಾಟ್ಸ್ ಆ್ಯಪ್, ಪೇಸ್ ಬುಕ್, ಮತ್ತೆ ನಾವು ಬಳಸುವ ಗ್ರಾಮ್ ಗಳು ತುಂಬಾ ಇವೆ ಇವುಗಳ ಮೂಲಕ ಯಾವುದೇ ವಿಚಾರವಾಗಲಿ ಬೇಗ ತಲುಪುತ್ತದೆ, ಅದು ಸುಳ್ಳು ಆದರೂ ಸರಿ , ಆಗ ಏನಾದರೂ ಆಗಿದೆ ಅಂದರೆ ಎರಡು ಮೂರು ದಿನ ಬೇಕಿತ್ತು ತಿಳಿಯಲು ಈಗ ಒಂದು ಸೆಕೆಂಡ್ ಸಾಕು ಅವನು ಸತ್ತಿರಲ್ಲ ಇನ್ನು ಮರಳಿ ಬಾರದೂರಿಗೆ ನಿನ್ನ ಪಯಣ ಅಂತ ಸಂದೇಶ , ಸೋಶಿಯಲ್ ಮೀಡಿಯಾ ಎಂದರೆ “ಒಬ್ಬರಿಂದ ಇನ್ನೊಬ್ಬರಿಗೆ ಅತಿ ಬೇಗನೆ ಸಮಯದಲ್ಲಿ ತಲುಪುವ ತಂತ್ರಜ್ಞಾನದ ಪಕ್ಕದ ಮನೆಗಳು” ಅಂತ ಹೇಳಬಹುದು. ಆಧುನೀಕರಣದ ತಂತ್ರಜ್ಞಾನ ಭೂಮಿಯ ಸರ್ವನಾಶಕ್ಕೆ ಕಾರಣವಾಗುತ್ತಿದೆ , ಅಂಚೆಯ ಡಬ್ಬ ಮತ್ತು ಕೈ ಬರವಣಿಗೆ ಜಗತ್ತಿನ ಮಾಲಿನ್ಯವನ್ನು ಕಾಪಾಡುತ್ತಿತ್ತು , ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಇದ್ದು ಜನಿಸಿದ ಮಗು ಆರೋಗ್ಯವಾಗಿ ಬೆಳೆಯುತ್ತದೆ ಆದರೆ ಒಂದು ದಿನದಲ್ಲಿ ತಂತ್ರಜ್ಞಾನದ ಮೂಲಕ ಜನಿಸಿದ ಮಗು ಸರ್ವನಾಶಕ್ಕೆ ದಾರಿಯಾಗುತ್ತದೆ ಎಂದು ನನ್ನ ತಿಳುವಳಿಕೆ.
ನನ್ನೂರಿನ ಅಂಚೆ ಡಬ್ಬ ಮತ್ತು ಅಂಚೆ ಡಬ್ಬಕ್ಕೆ ಹಾಕಿದ ಬೀಗ ತುಕ್ಕು ಹಿಡಿದಿದೆ ಮತ್ತು ಈ ಬೀಗದ ಕೈ ಕಾಣೆ ಆಗಿರಬಹುದು ದಯಮಾಡಿ ಏನು ಎರಡು ಮೂರು ಸಾವಿರ ಹೋಗಬಹುದು ನೋಡಲು ಚೆಂದ ಕಾಣುವ ಹಾಗೆ ಆದರೂ ಹಾಕಿ , ಪತ್ರ ಬರೆಯುವುದು ದೂರದ ವಿಚಾರ , ಡಬ್ಬ ಗಳಿಂದ ಪತ್ರಗಳು ಪೋಸ್ಟ್ ಮ್ಯಾನ್ ಕೈಯಲ್ಲಿ ಸಿಗುತ್ತಿಲ್ಲ , ಚೀಲದಲ್ಲಿ ಕಛೇರಿಯಿಂದ ಕಛೇರಿಗೆ ಬರುತ್ತವೆ ಅಷ್ಟೇ , ಮತ್ತೆ ಇನ್ನೊಂದು ವಿಚಾರ ಹಳ್ಳಿಯಲ್ಲಿ ಈಗಾಗಲೇ ಅತಿ ಹೆಚ್ಚು ಮರ ಕಡಿಯುವ ಪ್ರಕ್ರಿಯೆ ಜಾಸ್ತಿಯಾಗಿದೆ ಅದಕ್ಕಾಗಿ ಹಳ್ಳಿಯಲ್ಲಿ ಮರಗಳು ಕಮ್ಮಿ , ಮಳೆಯು ಕಮ್ಮಿ , ಪಟ್ಟಣಗಳಲ್ಲಿ ಮರಗಳು ಜಾಸ್ತಿ ಮಳೆಯು ಜಾಸ್ತಿ , ಆದರೆ ಮಣ್ಣಿಗೆ ಬಿದ್ದ ಬೀಜ ಫಲ ನೀಡುತ್ತದೆ, ಡಾಂಬರು ಮೇಲೆ ಬಿದ್ದ ಬೀಜ ಸಿಡಿದು ಹೋಗುತ್ತದೆ ವಾಹನಗಳಿಗೆ ಸಿಲುಕಿ , ಪಟ್ಟಣದಲ್ಲಿ ಅತಿ ಹೆಚ್ಚಿನ ಮಳೆ ಪ್ರಯೋಜನೆ ಇಲ್ಲ ಆದರೆ ಹಳ್ಳಿಗಳಲ್ಲಿ ರೈತರು ಮರಗಳನ್ನು ಕಡಿದು ಹಣಕ್ಕಾಗಿ ಮಳೆಯನ್ನು ಮಾರಾಟ ಮಾಡುತ್ತಿರುವುದು ಶೋಚನೀಯ ಸ್ಥಿತಿಯಲ್ಲಿ ನಾವು ಇದ್ದೇವೆ ಇದಕ್ಕಾಗಿ ಯಾವುದೇ ಮರ ಗಿಡಗಳಿಗೆ ಮೊಳೆ ಹೊಡೆದು ಜಾಹೀರಾತು ಫಲಕಗಳು , ಬ್ಯಾನರ್ ಕೊಟ್ಟಬೇಡಿ , ಅಂಚೆ ಡಬ್ಬವನ್ನು ಮರಕ್ಕೆ ಮೊಳೆ ಹೊಡೆದು ನೇತಾಡುವ ರೀತಿ ಮಾಡಬೇಡಿ ಮರಗಳಿಗೂ ಕೂಡ ಜೀವವಿದೆ. ಒಂದು ಸಿಮೆಂಟಿನ ಗೋಡೆಗೆ ಅಂಚೆ ಡಬ್ಬವನ್ನು ಹಾಕಿ , ಅಂಚೆ ಪತ್ರಗಳನ್ನು ಮುದ್ರಿಸಲು ನಿಲ್ಲಿಸುವ ಯೋಚನೆಯನ್ನು ಸರ್ಕಾರಕ್ಕೆ ಕೊಡದೆ ಪತ್ರಗಳನ್ನು ಬರೆಯಿರಿ ಭಾಷೆ ಮತ್ತು ಬರವಣಿಗೆ ಅತಿ ಹೆಚ್ಚು ಅಭಿವೃದ್ಧಿಯಾಗುತ್ತದೆ. ಇನ್ನು ಮುಂದೆ ನಾನು ಕೂಡ ತಿಂಗಳಲ್ಲಿ ಪತ್ರಗಳನ್ನು ಬರೆಯಲು ಪ್ರಾರಂಭಿಸುವೆ , ನೀವು ಕೂಡ ಎರಡು ಪಾತ್ರವಾದರೂ ಬರೆಯಿರಿ ನಿಮ್ಮ ಮಕ್ಕಳಿಗೂ ಹೇಳಿ ಬರೆಯಲು ಶೂರು ಮಾಡಿ ಪರೀಕ್ಷೆಯಲ್ಲಿ ಅಂಕವಾದರು ಬರುತ್ತವೆ.ಅಂಚೆ ಡಬ್ಬಕ್ಕೆ ಮರುಜನ್ಮ ನೀಡಿ, ಡಬ್ಬದಿಂದ ತುಕ್ಕನ್ನು ಶಾಶ್ವತವಾಗಿ ದೂರ ಹಿಡಿ, ನಾನು ಮೊದಲೇ ಹೇಳಿರುವೆ ಅಂಚೆ ಕಛೇರಿ ಮತ್ತು ಡಿಜಿಟಲ್ ಅಂಚೆಯ ಬಗ್ಗೆ ಮಾತನಾಡುತ್ತಿಲ್ಲ ಅಂತ ಏಕೆಂದರೆ ಕಾಲ ಕಾಲಕ್ಕೆ ಮನುಷ್ಯನಿಗೆ ತಂತ್ರಜ್ಞಾನ ಅವಶ್ಯಕತೆ ಇದೆ ಏನು ಮಾಡಲು ಸಾಧ್ಯವಿಲ್ಲ.
ಭೋವಿ ರಾಮಚಂದ್ರ