ಕಾವ್ಯ ಸಂಗಾತಿ
ಮಾಜಾನ್ ಮಸ್ಕಿಅವರ ಕವಿತೆ
ಮರೆಯಾಗದಿರು ಬಾಪು
ಪ್ರತಿ ಆತ್ಮಗಳ ಮಹಾತ್ಮ
ನೊಂದವರ ಅಭಯ ಹಸ್ತ
ದೇವನಾಗಿ ಕರಗದಿರು
ಕರುಣೆಯ ತತ್ವ ಮೂರ್ತಿ ನೀನು
ಗೂಡ್ಸೆಗಳಿಗೇನು ಕಮ್ಮಿ ಇಲ್ಲ
ದ್ವೇಷಿಸುವರು ದ್ವೇಶಿಸಲಿ
ಟಿಕೀಸುವರು ಟೀಕಿಸಲಿ
ಅಹಿಂಸೆಯ ಅಸ್ತ್ರ ಹಿಡಿದು ಮತ್ತೆ ಬಾ
ಹಿಂಸೆ ಅತ್ಯಾಚಾರ ಯೋಧರ ಜೀವಂತ ದಹನ
ಮುಗಿಲು ಮುಟ್ಟಿದೆ ಆಕ್ರಂದನ ಎಲ್ಲೆಡೆ ಚಿತ್ಕಾರ
ಸಿಡಿಲು ಮಿಂಚಾಗಿ ಸಂಚರಿಸು
ನಮ್ಮಯ ಧಮನಿ ಧಮನಿಗಳಲ್ಲಿ
ನೋವನುಂಡು ತಲ್ಲಣಿಸಿವೆ ಮನಗಳು
ಹಗಲಿನಲ್ಲಿಯೇ ನಡೆದಾಡಲು ಕಂಪಿಸಿವೆ
ನಿನ್ನ ಕೋಲಿನ ಗಸ್ತು ಬೇಕಿದೆ
ಬಂದೊಮ್ಮೆ ನೋಡು ಇಂದಿನ ಭಾರತ
ಮನೆ ಮನಗಳಲ್ಲಿ ನೆಲೆಸಿ
ಶಾಂತಿಯ ಹರಸು ಗಾಂಧಿ….
ಬಾ ಮತ್ತೊಮ್ಮೆ ಗಾಂಧಿ….
ಬಾ ಮತ್ತೊಮ್ಮೆ ಗಾಂಧಿ….
ಮಾಜಾನ್ ಮಸ್ಕಿ