ಸವಿತಾ ದೇಶಮುಖ್ ಅವರ ಕವಿತೆ-ಸಂಘರ್ಷ

ಮರ- ಮರ ಮರುಗುತಿಹಳು
ವನಿತೆ – ತನ್ನ ಸ್ಥಿತಿ-ಗತಿಗಳು
ನೆನೆ ನೆನೆದು, ದಾಟಿ ಬಂದ ದಿನಗಳು
ಸೈರೆಪಿಸುತ ಮುನ್ನಡೆದಿಹಳು
ಮರೆತು ಶೋಷಣೆಗಳ ಕ್ಷಣಗಳು…

ಅಂದು ಹೆಣ್ಣು ಹುಟ್ಟಿತೆಂದು ,
ಮನೆಯ ಲಕ್ಷ್ಮಿ ಬಂದಳೆಂದು
ದಿವ್ಯತೆಯ ಆಶೀರ್ವಾದವೆಂದು
ಹೇಳಿದರೂ..ಮನದ ಮೂಲೆಯಲಿ
ಹುಣ್ಣು ಹುಟ್ಟಿತೆಂಬ ನೋವಿನಲ್ಲಿ…….

ಮನೆಯ ತುಂಬವಳು ದೇವತೆಯಾಗಿ
ಹೊತ್ತು ನೂರಾರು ಕಿರುಗನಸುಗಳು,
ಮನೆ ಗಂಡ ಮಕ್ಕಳು ನನ್ನ ಸ್ವತ್ತುಗಳು
ಎಂಬ ಊಹೆ ಪೊಹೆಯಲಿ ಇರುವಳು,
ಎಂದು ಮನೆಯ ಆಳಾದಳು ಅರಿಯಳು……

ತನ್ನ ಆವಾಸವೇ ಪ್ರಪಂಚವೆಂದು
ಜಗವ ಮರೆತು ನಿಂದಳು ,
ಕಿರುನಗೆಯ ಹೊತ್ತು, ತನ್ನ ತನದ
ಪ್ರಜ್ಞೆಯ ದಾಟಿ ಬಂದಳು..
ಅವಳರಿವಿಲ್ಲದೆ ಬಂಧಿಯಾದಳು….

ಈ ಬಂಧನದ ಸಂಕೋಲೆಗಳನ್ನು
ಕಳಚಿ ಬಿಸಿಡುವ ಪ್ರಯತ್ನದಲ್ಲಿ,
ಇಲ್ಲ ನಾಲ್ಕು ಗೋಡೆಯ ಮಧ್ಯದ
ಬಾಳ ಬಾಳುವ ಸಂಘರ್ಷದಲ್ಲಿ
ಸಮತೆಯ ದೀವಿಗೆ ಹಚ್ಚಿ
ಗಾಳಿಯ ದಾಳಿಗೆ ಆರದಿರಲೆಂದು…

ದೀಪವಳಿಯದಂತೆ ಕಾಯುತಿಹಳು……


One thought on “ಸವಿತಾ ದೇಶಮುಖ್ ಅವರ ಕವಿತೆ-ಸಂಘರ್ಷ

Leave a Reply

Back To Top