‘ಅನುಬಂಧ’ ಗಾಯತ್ರಿ ಎಸ್ ಕೆ ಅವರ ಹೊಸ ಕವಿತೆ

ಕಲ್ಪನೆಯಿರದ ನನ್ನಲಿ
ಕಲ್ಪಿಸುವಂತೆ ಮಾಡಿದೆ
ಗೆಳೆತನದ ಪ್ರೀತಿಯಿದು
ಬಯಸಿದಂತೆ ಇರುವುದು!!

ಮಾತುಗಳಲಿ ಏನಿದೆ
ಮೌನದಲಿ ಎಲ್ಲ ಇದೆ
ಮಾಣಿಕ್ಯ ನೀನು..
ಬರಹದಲ್ಲಿ ಓದುವೆ
ಮತ್ತೆ ಮತ್ತೆ ಅದ ಅದನೆ!!

ಪ್ರೀತಿಸುವ ಅಕ್ಷರಗಳು
ಪ್ರೇಮಿಸುವ ಬರಹಗಳು
ಪಟ್ಟನೆ ಮಾತುಗಳು
ಪುಟಪುಟದಿ ಬರೆಯುವೆ

ಕೇಳಲೇನಿದೆ ಆಲಿಸುವ
ಪರಿ ಇದೆ ಮಾತುಗಳಲಿ
ಹೇಳದ ನಡವಳಿಕೆಯಿದೆ
ಎತ್ತಣ ಮಾಮರ ಎತ್ತಣ
ಕೋಗಿಲೆ ಆಕಸ್ಮಿಕ ವದು!!

ಹರುಷವಿದೆ ನನ್ನಲ್ಲಿ
ನಿನ್ನ ವಿರಹದಲ್ಲಿ
ಬದುಕು ಸೋಪಾನ
ಸುಂದರ ಯಾನ..!!


Leave a Reply

Back To Top