ಮನ್ಸೂರ್ ಮೂಲ್ಕಿ ಅವರ ಕವಿತೆ-ಸಿಂಚನ

ನಿನ್ನ ಪ್ರೀತಿ
ನನ್ನ ಮೇಲೆ
ನೂರು ಸಿಂಚನ…
ಕಣ್ಣಂಚಿನಲ್ಲಿ
ನಿನ್ನ ನಗುವು
ನನ್ನ ಕಂಕಣ….
ಸಮಧಾನವಾಗಿದೆ
ಸಮಧಾನವಾಗಿದೆ
ಸಮಧಾನವಾಗಿದೆ

ಕಂಡ ಕನಸು
ಮರಳಿ ಬರಲು
ನನ್ನ ಹಂಬಲ….
ಚಿನ್ನ ನಿನ್ನ
ನುಡಿಯ ಕೇಳಿ
ನಾನು ತನ್ಮಯ….

ನಗುವ ಬೀರಿ
ಮುಂದೆ ನಡೆದು
ತಿರುಗಿ ನೋಡಿ
ಮತ್ತೆ ಸಿಂಚನ…
ಅರಳೋ ಹೂವು
ಬೀರೋ ಸೊಗಸು
ಹೃದಯ ಕಳವಳ….

ದಾರಿ ಸಾಗಿ
ಸಮಯ ಕಳೆದು
ಬಾಳು ಸಾಗಿತು….
ಬದುಕಿನಲ್ಲಿ
ಭಾವ ತುಂಬಿ
ಜೀವ ನಲಿಯಿತು….


Leave a Reply

Back To Top