ಮಾಲಾ ಚೆಲುವನಹಳ್ಳಿ ಅವರಕವಿತೆ-ಎಷ್ಟು ದುಡಿದೇನು ಪ್ರಯೋಜನ

ಎಷ್ಟು ದುಡಿದು ಏನು ಪ್ರಯೋಜನ
ಎಲ್ಲವೂ ಇದ್ದರೂ ಬೇಸತ್ತಿದೆ ಮನ
ಆಂತರ್ಯದಲ್ಲಿರದ ಆ ಅಭಿಮಾನ
ಅರಸಿ ಹಿಡಿದಂತಾಗಿರುವುದು ಗ್ರಹಣ

ಕಷ್ಟ ಸುಖದಿ ಭಾಗಿಯಾದ ಕೃತಜ್ಞತೆ
ಋಣವ ಅರಿಯುವಲ್ಲೂ ಕೊರತೆ
ಅಜ್ಞಾನದ ಪರಮಾವಧಿಯೇ ಭವತೆ
ವಿಧಿ ಮುನಿದಾಗ ಸಹಜವಿದು ಅರಿತೆ

ಮನೋಭಾವ ಕಾಣದ ವೈಶಾಲ್ಯತೆಯ
ಸರಳ ಗುಣ ನಡತೆಯ ಆರ್ದ್ರತೆಯ
ಅಟ್ಟಿಕ್ಕಿ ಉಂಡಂತ ಆ ನೆಮ್ಮದಿಯ
ಮಿತಿಯಾಗಿ ಬಳಸು ನೀ ಕುಟಿಲತೆಯ

ಹೆಣಗಾಡುತಿಹೆ ದುಡಿ ದುಡಿದು ಮೂಢ
ತೊರೆದೆ ಸ್ವಾರ್ಥಿಯಾಗಿ ಸುಖದ ಮಾಡ
ಅರಿತರೂ ಅರಿಯದೇ ಆಗಿಹೆ ದಿಗ್ಮೂಢ
ಹೊಕ್ಕು ಅಲೆಯುತಿರುವೆ ದಟ್ಟದಾ ಕಾಡ


Leave a Reply

Back To Top