ಈಗ ಬಂದೊದಗುತ್ತಿರುವ ಹೆಚ್ಚಿನ ಸಮಸ್ಯೆ ಎಂದರೆ ವಿಚ್ಛೇದನ, ಇದು ನಿಮ್ಮ ಮಕ್ಕಳ ಮನಸ್ಸು ಬುದ್ಧಿ ಚಟುವಟಿಕೆ ಎಲ್ಲವನ್ನೂ ಕುಂಠಿತಗೊಳಿಸುತ್ತದೆ.ನೀವೇನು ಒಬ್ಬರಿಗೊಬ್ಬರು ನೀನು ಸರಿ ಇಲ್ಲ ನೀನು ಸರಿ ಇಲ್ಲ ಎಂದು ಬೇರೆಯಾಗುವ ನಿರ್ಧಾರ ಮಾಡಬಹುದು. ಅದಕ್ಕೆ ಅನೇಕ ಕಾರಣಗಳಿರುತ್ತವೆಂದು ನನಗೂ ಸಹ ತಿಳಿಯುತ್ತದೆ.
ಆದರೆ ಅದನ್ನೆಲ್ಲ ಇಲ್ಲಿ ವ್ಯಕ್ತಪಡಿಸಲು ನನಗೆ ಇಷ್ಟವಿಲ್ಲ.ಹೇಳಬೇಕೆಂದರೆ ನಿಮ್ಮ ಈ ನಿರ್ಧಾರಗಳು ಮಕ್ಕಳ ಮನಸ್ಸನ್ನು ಕಲಕದಿರಲಿ. ಅವು ಎಲ್ಲ ಆಸೆ ಆಕಾಂಕ್ಷೆಗಳನ್ನು ತೊರೆದು ಅತಿ ಕೋಪ ವ್ಯಕ್ತಪಡಿಸುವುದೋ, ಓದಿನಲ್ಲಿ ಆಸಕ್ತಿ ತೋರಿಸದೆ ಇರುವುದೋ, ಅನ್ಯಮನಸ್ಕಾರಾಗಿರುವುದೋ ಅಥವಾತಂದೆ ತಾಯಿಯರ ಚಿಂತೆಯಲ್ಲಿ ತೊಡಗಿಬಿಡುವುದೋನನಗೆ ಮುಂದೆ ಅಪ್ಪ-ಅಮ್ಮ ಇಬ್ಬರೂ ಜೊತೆ ಇರದೆ ನನ್ನ ಬದುಕು ಹೇಗೆಂಬ ಆಲೋಚನೆಯಲ್ಲಿ ಮುಳುಗಿ ಖಿನ್ನತೆ ಗೊಳಗಾಗುತ್ತಾರೆ. ತನ್ನ ಸ್ನೇಹಿತರು ಅವರ ಪೋಷಕರೊಂದಿಗಿರುವುದು ನೋಡಿ ಇವರ ಮನಸ್ಸಿಗೆ ತುಂಬಾ ನೋವಾಗಬಹುದು ಅಥವಾ ಅವರನ್ನು ನೋಡಿ ಈರ್ಷೆಯೂ ಉಂಟಾಗಬಹುದು.
ದಯಮಾಡಿ ಕಂದಮ್ಮಗಳ ಮನಸ್ಸನ್ನು ನೋಯಿಸಬೇಡಿ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಒಳ್ಳೆಯ ಆರೋಗ್ಯವಂತ, ಧೈರ್ಯವಂತ, ತಾಳ್ಮೆಯಿಂದ ಕೂಡಿದ ಪ್ರಜೆಗಳನ್ನು ಕೊಡುವುದು ನಿಮ್ಮ ಕೈಲಿದೆ ಪೋಷಕರೇ. ತಮ್ಮಲ್ಲಿ ಕಳಕಳಿಯ ಪ್ರಾರ್ಥನೆ ಇಷ್ಟೇನೀವು ಹೇಗೆ ಬದಲಾಗುವಿರೋ ತಿಳಿಯದು ಆದರೆ ನೀವು ಖಂಡಿತ ಬದಲಾಗಲೇಬೇಕು. ನಿಮ್ಮ ಜೀವದ ಉಸಿರಾದ ನಿಮ್ಮ ಕಂದನಿಗಾಗಿ ಯಾರಿಗೋ ಒಳಿತು ಮಾಡುವ ಕಾರ್ಯಕ್ಕೆ ಕೈಚಾಚಿ ನಿಲ್ಲುವ ಬದಲು, ನಿಮ್ಮ ಸಂಸಾರಕ್ಕೆ ಸಂತಸತಂದ ಕಂದನಿಗಾಗಿ ನಿಮ್ಮ ನಿಲುವುಗಳನ್ನು ದಲಾಯಿಸಿಕೊಳ್ಳಿ  ಪೋಷಕ ವರ್ಗದವರೇ….

ಆಟ ಆಡುವಾಗ ಯಾರಾದರೂ ಮಕ್ಕಳು ಬಿದ್ದು ಪೆಟ್ಟು ಮಾಡಿಕೊಂಡಾಗ ಅಲ್ಲಿಂದ ಅನೇಕ ಮಕ್ಕಳು ಓಡಿ ಬಂದುಬಿಡುತ್ತಾರೆ. ಖಂಡಿತ ಆ ತಪ್ಪು ಮಾಡದಿರಲು ಕಲಿಸಿ ಕಷ್ಟಗಳಲ್ಲಿ ಓಡಿ ಹೋಗುವ, ಸುಖ ಬಂದಾಗ ಕುಣಿದಾಡುವ ಬದಲು ಎರಡು ಒಂದೇ ಎಂಬ ಭಾವದ ಸಮಚಿತ್ತತೆಯಿಂದ ಇರುವುದನ್ನು ಆಗಾಗ ಹೇಳುತ್ತಿರಿ.
ನೋವಿನಲ್ಲೂ ನಗುವುದನ್ನು ಕಲಿಸಿ. ಏಕೆಂದರೆ ನಮಗೆಷ್ಟೇ ನೋವುಗಳು ಬಂದಾಗ ನಗು ಮುಖದ ಮೇಲೆ ನೋವಿನ ಛಾಯೆ ಮಾಯವಾಗುತ್ತದೆ. ಇದಕ್ಕೆ ಎಲ್ಲ ನೋವುಗಳನ್ನು ಸಹಿಸುವ ಶಕ್ತಿ ಇದೆ. ಎಂದಿಗೂ ಮಕ್ಕಳಲ್ಲಿ ವರ್ಣಭೇದ ಮತ್ತು ಜಾತಿಯ ಭೇದದಂತ ಬೀಜಗಳು ಅಂಕುರಿಸಿದಂತೆ ನೋಡಿಕೊಳ್ಳಿ. ಸಾಧ್ಯವಾದರೆ ಮೊಬೈಲ್ ಬಿಟ್ಟು ಪ್ರಕೃತಿಯೊಂದಿಗೆ ಕಳೆದುಹೋಗುವುದನ್ನು ತಿಳಿಸಿ. ಬಣ್ಣ ಬಣ್ಣದ ಚಿಟ್ಟೆಗಳ ಅಂದವನ್ನು ನೋಡಿ ಆನಂದಿಸುವ, ಸಾಲಾಗಿ ನಡೆದು ಹೋಗುವ ಇರುವೆಗಳನ್ನು ಹಿಂಬಾಲಿಸುವ, ಬೀಜ ಮೊಳೆಯುವುದನ್ನು ಕಾಯುವ ಕುತೂಹಲ ತುಂಬಿ ಗಿಡ ನೆಡಬೇಕೆಂಬ ಉತ್ಸುಕತೆಯನ್ನು ಮೂಡಿಸಿ. ಬದುಕಿನಲ್ಲಿ ಮೋಸ ಮಾಡಿ ಗೆಲ್ಲುವುದು ಶ್ರೇಯಸ್ಕರವಲ್ಲವೆಂಬುವ
ವಿಷಯ ಮನದಟ್ಟು ಮಾಡಿಸಿ. ಪ್ರಾಮಾಣಿಕವಾಗಿ ಸೋಲುವುದನ್ನು ಕಲಿಸಿ. ಜೀವನ ತುಂಬಾ ಸುಂದರವಾಗಿದೆ ಎಂದು ಪದೇ ಪದೇ ಕಥೆಗಳ ಮೂಲಕ ಹೇಳುತ್ತಿರಿ
. ಪ್ರತಿಕ್ಷಣದಲ್ಲೂ ಖುಷಿ ಇದೆ ಎಂಬುದನ್ನು ಮಕ್ಕಳು ತಿಳಿಯಲಿ. ಮಕ್ಕಳಲ್ಲಿ ಆತ್ಮವಿಶ್ವಾಸ  ತುಂಬುವುದು ಬಹಳ ಮುಖ್ಯ. ಯೌವ್ವನಾವಸ್ಥೆಗೆ ಬಂದಾಗ ಮಕ್ಕಳು
ಗೆಳೆತನಕ್ಕೆ ಹೆಚ್ಚು ಹೊಂದಿಕೊಳ್ಳುತ್ತಾರೆ. ಅವರೊಂದಿಗೆ ಹೆಚ್ಚು ಪ್ರೀತಿಯನ್ನು ವಿಶ್ವಾಸವನ್ನು ಇಟ್ಟುಕೊಂಡು ಅವರಂತೆ ಇವರೂ ಸಹ ಬದಲಾಗಿ ಅನೇಕ ಕೆಟ್ಟ ಚಟಗಳಿಗೆ ದಾಸರಾಗುತ್ತಾರೆ. ಇದನ್ನೆಲ್ಲ ತಪ್ಪಿಸಬೇಕೆಂದರೆ ನೀವು ಅವರೊಂದಿಗೆ ಸ್ನೇಹಿತರಂತೆ ಇರಬೇಕು. ಸಣ್ಣಪುಟ್ಟ ಪ್ರವಾಸಗಳಿಗೆ ಕರೆದುಕೊಂಡು ಹೋಗುತ್ತಿರಿ. ಮನೆಯಲ್ಲಿ ಮಕ್ಕಳೊಂದಿಗೆ ಅವರ ಆತ್ಮವಿಶ್ವಾಸ ಮೂಡಲು ಅವರಿಗೆ ಅನ್ವಯಿಸುವ ನೀತಿ ಬೋಧನೆಗಳನ್ನ ಖಂಡಿತಾ ಮಾಡಬೇಕು. ಹೀಗೆಲ್ಲಾ ಮಾಡಿದಾಗ ಅವರು ಎಂತಹ ಸ್ನೇಹಿತರೊಂದಿಗೆ ಹೋದರೂ ಸಹ ಬದಲಾಗಲಾರರು.
ನೀವು ಕೊಟ್ಟ ಅಡಿಪಾಯದ ಭದ್ರಬುನಾದಿ ಅವರ ಮನಸ್ಸನ್ನು ವಿಚಲಿತಗೊಳಿಸದು. ಮೊಬೈಲ್ ನಲ್ಲಿ ಪೇರೆಂಟ್ ಕಂಟ್ರೋಲಿಂಗ್ ಆಪ್ಷನ್ ಅಲ್ಲಿ ಮಕ್ಕಳು ಏನು ನೋಡುತ್ತಿದ್ದಾರೆಂದು ನೀವು ತಿಳಿಯಬಹುದು. ಅದನ್ನು ಅಳವಡಿಸಿಕೊಳ್ಳಿ. ಮೆಡಿಟೇಶನ್ ಉಸಿರಾಟದ ಏಕಾಗ್ರತೆ ಇವುಗಳನ್ನು ಅಭ್ಯಾಸ ಮಾಡಿಸಿ. ಆಧ್ಯಾತ್ಮಿಕತೆಯತ್ತ ಮಕ್ಕಳ ಒಲವು ಬೆಳೆದರೆ ಒಳ್ಳೆಯ ಸಂಸ್ಕಾರಗಳನ್ನುಳ್ಳ ಪ್ರಜೆಯಾಗಿ ಬೆಳೆಯುತ್ತಾರೆ ಎಂಬುವಲ್ಲಿ ಸಂದೇಹವೇ ಇಲ್ಲ.


Leave a Reply

Back To Top