ಗಾಯತ್ರಿ ಎಸ್ ಕೆ ಅವರ ಕವಿತೆ-ಕನಸುಗಳ ಕವಿತೆ

ಕನಸುಗಳ ಕವಿತೆ
ಮನಸ್ಸು ನೀನು
ಬರೆಯುತ್ತಲೇ
ಸೊಗಸು ಹೊಂಗನಸು..!!

ಹೊಸ ಹೊಸ ವಿಷಯ
ತುಂಬುವೆ ಕನಸುಗಳತ್ತ
ಸಾಗುವೆ ಹೊರನೋಟ
ಕಲಿಸುವೆ ಪಾಠ..!!

ಸುಮ್ಮನಿರದೆ ಕಾಡುವೆ
ನಿನಗೆ ನಾನು ನನಗೆ ನೀನು
ಎನ್ನುವೆ ಖುಷಿಯ ಹಾದಿ
ಚಲಿಸುವ ದಾರಿ..!!

ಬೇರೆ ನೆನಪು ಕಾಡಿಸುವುದಿಲ್ಲ
ನಿನ್ನದೇ ನೆನಪು ತಗಾದೆ ಇಲ್ಲ
ಜೀವಂತ ಕನಸು ಹುರುಪು
ಎಲ್ಲ ನೀನೇ ನೀನೇ..!!

ಹೊರಹಾದಿ ಇಲ್ಲ ಬೀದಿ ಇಲ್ಲ
ಗಡಿಬಿಡಿಯಿಲ್ಲ ಗೌಪ್ಯವಿಲ್ಲ
ತನ್ಮಯ ಮನಸ್ಸು ವಿಸ್ಮಯ
ಸೃಷ್ಟಿಯ ನಿಯಮ..!!


Leave a Reply

Back To Top