ಕಾಮುಕರು, ಅತ್ಯಾಚಾರಿಗಳಿಂದ ಹೆಣ್ಣಿನ ರಕ್ಷಣೆ ಹೇಗೆ ?ಲೇಖನ-ಹೆಚ್.ಎಸ್.ಪ್ರತಿಮಾ ಹಾಸನ್.

 ನಮ್ಮ ದೇಶದಲ್ಲಿ ಹೆಣ್ಣಿಗೆ ಮಹತ್ತರವಾದಂತಹ ಸ್ಥಾನವಿದೆ. ಆದರೆ ಆ ಮಹತ್ತರ ಸ್ಥಾನ ಎಲ್ಲಿಯು ಸಿಗುತ್ತಿಲ್ಲ. ಇಂದಿನ ಸಂಸ್ಕೃತಿಯ ನಾಶವು ಹಲವಾರು ದುಷ್ಟ ಕಾರ್ಯಗಳಿಗೆ  ಪ್ರೋತ್ಸಾಹವನ್ನು ನೀಡುವಂತಾಗುತ್ತಿದೆ. ಇಂದಿನ ಲಿವಿಂಗ್  ಟು ಗೆದರ್, ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಕಾರ್ಯನಿರ್ವಹಿಸುತ್ತಿರುವುದು, ತುಂಡು ಉಡುಗೆಗಳನ್ನು  ತೊಡುತ್ತಿರುವುದು, ಅವಿಭಕ್ತ ಕುಟುಂಬಗಳು ಇಲ್ಲದಂತಾಗುತ್ತಿರುವುದು, ಹಿರಿಯರ ಮಾರ್ಗದರ್ಶನದ ಕೊರತೆ ಇರುವುದು, ಹೀಗೆ ಹಲವಾರು  ಉದಾಹರಣೆಗಳನ್ನು ನೀಡಬಹುದಾಗಿದೆ.
 ಎಷ್ಟೇ ಹೆಣ್ಣನ್ನು ರಕ್ಷಿಸುತ್ತೇವೆಂದು ಕಾದು ಕುಳಿತರೂ ಸಹ ಮೋಸಗಾರರ ಜಾಲ, ಕಾಮುಕರಿಂದ, ಅತ್ಯಾಚಾರಿಗಳಿಂದ  ಹೆಣ್ಣು ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ದಿನಮಾನಗಳಲ್ಲಂತೂ  ಅತ್ಯಾಚಾರವೆಂದರೆ ವಿಕೃತವಾಗಿ  ನಡೆಸಿ ವಿಡಿಯೋಗಳನ್ನು  ಮಾಡುವಂತಹ ವಿಕೃತ ಎಷ್ಟೋ ಗಂಡಸರು ಬದುಕಿರುವುದು ನಮ್ಮ  ದೇಶದ ಅಸಹಜತೆ. ಎಲ್ಲಾ ಗಂಡಸರು ಹಾಗೆ ಇದ್ದಾರೆ ಎಂದು ಹೇಳುವುದಿಲ್ಲ. ಕೆಲವು ಕಾಮುಕರು  ಹೆಣ್ಣು ಮಕ್ಕಳನ್ನು  ನೋಡುವ ದೃಷ್ಟಿಯೇ ಬೇರೆ. ಅವರ ಟಾರ್ಗೆಟ್ ಮುಗ್ಧ ಹೆಣ್ಣು ಮಕ್ಕಳು  . ಮೊದಮೊದಲು  ಹೆಣ್ಣು ಮಕ್ಕಳ ವಿಶ್ವಾಸವನ್ನು  ಗಳಿಸುತ್ತಾರೆ. ಆ ನಂತರದಲ್ಲಿ ಅವರ ವರ್ತನೆ  ಆಕೆಯನ್ನು  ಬಲಿ ಮಾಡುವುದು. ಇಂದಿನ ಜಾಲತಾಣಗಳು ಬಹಳ ವೇಗವಾಗಿ ಕಾರ್ಯವನ್ನು ನಿರ್ವಹಿಸುತ್ತಿವೆ.ಸೆಕೆಂಡಲ್ಲಿ ಎಲ್ಲೆಡೆ ವಾರ್ತೆಗಳನ್ನು   ಪಸರಿಸುವ ವಿಚಾರಗಳಂತು ಒಳ್ಳೆಯದಾದರೆ ಹೆಚ್ಚು ಪ್ರಚಾರಕ್ಕೆ ಬರುವುದಿಲ್ಲ . ಕೆಟ್ಟ ಕೆಟ್ಟ ವಿಚಾರಗಳೆಂದರೆ ಬಹಳ ವೇಗವಾಗಿ ಪಸರಿಸುತ್ತಾರೆ.
ಒಮ್ಮೊಮ್ಮೆ ನಾನು ನೋಡುವ ಕೆಲವು ದೃಶ್ಯಗಳು ಹೇಗಿರುತ್ತದೆ ಎಂದರೆ ನನಗೆ ನಂಬಲು ಅಸಾಧ್ಯವಾದಂತ ವಿಚಾರಗಳನ್ನು  ಅಲ್ಲಿ ಕೇಳಿ ಬೇಸರಗೊಂಡು  ನನ್ನ ಪಾಡಿಗೆ ನಾನು ಸುಮ್ಮನಿದ್ದ ಸನ್ನಿವೇಶಗಳು ಬಹಳಷ್ಟು ಇದೆ.
 ಯಾವುದೇ ಹೆಣ್ಣು ಮಕ್ಕಳು ಸಹ  ಒಳ್ಳೆಯ ಮನೋಭಾವದಲ್ಲಿ ತನ್ನ ಪಾಡಿಗೆ ತಾನು ಜೀವಿಸಲು ಬಿಡದಂತಹ ಕಾಮುಕರು,ಅತ್ಯಾಚಾರಿಗಳು ನಮ್ಮ ಅಕ್ಕ ಪಕ್ಕದಲ್ಲಿ ಇದ್ದಾರೆ. ಅಣ್ಣ ತಂಗಿ ಎಂಬ ಹೆಸರಿಗೆ ಮಸಿ ಬಳಿಯುವಂತಹ ಕೆಲಸಗಳನ್ನು ಎಷ್ಟೋ ಜನರು ಮಾಡುತ್ತಿರುವುದನ್ನು ನೋಡಿದರೆ ಆ ಪದಕ್ಕೆ ಇರುವ ಪವಿತ್ರವಾದಂತಹ ಸಂಬಂಧವೇ ಹಾಳು ಮಾಡುತ್ತಿದ್ದಾರೆ ಎಂಬುದು ಅರಿವಾಗುತ್ತದೆ. ಪ್ರತಿಕ್ಷಣದಲ್ಲೂ ಸಹ  ಕಾಮನೆಯ ದಾರಿಗಳು ಹಲವಾರು  ಅದನ್ನು ಈಡೇರಿಸಿಕೊಳ್ಳಲು ನಟನೆಗಳಂತೂ ಅದ್ಭುತವಾಗಿಯೇ ಮಾಡುತ್ತಾರೆ. ಬೇಕು ಬೇಡಗಳ  ಆಲಿಸುವಂತಹ ನಾಟಕದ ದೃಶ್ಯಗಳಂತೂ ಅದ್ಭುತವಾಗಿಯೇ ನಟಿಸುತ್ತಾರೆ.  ಆಗ ನಾವು  ಅರಿಯುವುದು  ಒಂದೇ ಎಷ್ಟೇ ಯಾವುದೇ ವಿಚಾರಕ್ಕೂ ಹೋಗದಂತೆ ತಮ್ಮ ಪಾಡಿಗೆ ತಾವು ಇರುವಂತಹ ಹೆಣ್ಣು ಮಕ್ಕಳನ್ನು ಬಿಡದಂತಹ ಸಮಾಜ ವಾಗಿರುವ ಈ ಸಮಾಜದಲ್ಲಿ ಗಂಡು ಮಕ್ಕಳು ತಮ್ಮ ಸ್ವಾರ್ಥಕ್ಕಾಗಿ ಯಾವ ರೀತಿ ವರ್ತಿಸುತ್ತಾರೆ ಎಂಬುದನ್ನು ನೋಡುತ್ತಿದ್ದರೆ ಅವರಿಗೆ ಬುದ್ಧಿ ಹೇಳಲು ಹೋದರೆ ನಾವಿಬ್ಬರು ಅಣ್ಣ ತಂಗಿ ಎಂಬ ಪಟ್ಟ ಕಟ್ಟಿ ಅದನ್ನು  ಮುಚ್ಚಿ ಹಾಕಿಬಿಡುತ್ತಾರೆ . ಅವರಿಗೆ ಬುದ್ಧಿ ಹೇಳಲು ಹೋದವರೇ ನಾಚಿಕೊಂಡು ವಾಪಸ್ಸು ಬರುವಂತಹ ಪರಿಸ್ಥಿತಿಗಳು ಬಹಳವಿದೆ.
 ನಮ್ಮ ಹೆಣ್ಣು ಮಕ್ಕಳು  ಇಂದಿನ ಪ್ರಸ್ತುತ ದಿನಮಾನಗಳಲ್ಲಿ ಸ್ವತಂತ್ರವಾಗಿ ತಮಗೆ ತಾವೇ ದುಡಿದು ಬದುಕುವ ಶಕ್ತಿಯನ್ನು  ಹೊಂದಿದ್ದಾರೆ. ಪ್ರತಿಯೊಬ್ಬರೂ ತನ್ನ ಕಾಲ ಮೇಲೆ ತಾನು ನಿಲ್ಲುವ ಆಸೆಯಲ್ಲಿ ಒಳ್ಳೆಯ ಬೆಳವಣಿಗೆಯನ್ನು ಕಾಣಲು ಕನಸು ಕಾಣುತ್ತಾರೆ. ಆದರೆ ಎಂದಿಗೂ ಹೆಣ್ಣು ಹೆಣ್ಣೇ ಎಂಬುದಕ್ಕೆ  ಹಲವಾರು ಕಹಿ ಘಟನೆಗಳು  ಹೆಣ್ಣನ್ನು ಸ್ವಲ್ಪ ಕುಗ್ಗಿಸುವಂತಹ  ಅಹಿತಕರ ಘಟನೆಗಳು ನಡೆದಾಗ  
 ಕೆಲಸ ಮಾಡುವುದೇ ಬೇಡ, ನಾವು ಬೆಳೆಯುವುದೇ ಬೇಡ ಎಂಬ ಮನೋಭಾವಕ್ಕೆ ಒಳಗಾಗುವಂತೆ ಮಾಡುತ್ತದೆ. ಈ ದಿನ ಆಧುನಿಕ ಯುಗದಲ್ಲೂ ಸಹ  ಹೆಣ್ಣು ಮಕ್ಕಳ ಮೇಲೆ  ಕಾಮುಕರ, ಅತ್ಯಾಚಾರಿಗಳ  ಕಣ್ಣು ಬೀಳುತ್ತಿರುವುದು  ಹೆಚ್ಚುತ್ತಿದೆ ಹೊರತು  ಕಡಿಮೆಯಂತು ಆಗುತ್ತಿಲ್ಲ. ಎಷ್ಟೇ ಜಾಗೃತಿಯನ್ನು ಮೂಡಿಸಿದರು ಜಾಗೃತಿಯ ಕಾರ್ಯ ಮಾತ್ರ ಹೆಸರಿಗೆ ಆಗುತ್ತಿದೆ ಅಷ್ಟೇ. ಅದರಲ್ಲಿ ಬದಲಾವಣೆಗಳು ಕಾಣುತ್ತಿಲ್ಲ. ಬಹಳಷ್ಟು ವಿಕೃತ ಮನೋಭಾವದ  ಹಲವು ಪುರುಷರಿಂದ ಪುರುಷ ಸಮಾಜಕ್ಕೆ ಕಳಂಕವನ್ನು ತರುತ್ತಿದ್ದಾರೆ.ದಯಮಾಡಿ ನಮ್ಮ ಹೆಣ್ಣು ಮಕ್ಕಳು ಅಷ್ಟೇ  ನಾವು ತೊಡುವಂತಹ ಉಡುಗೆಯಲ್ಲಿ ಸಂಸ್ಕಾರವನ್ನು ಎತ್ತಿ ಹಿಡಿಯುವಂತಹ  ಬಟ್ಟೆಗಳನ್ನು ತೊಡೋಣ. ಚಿಕ್ಕ ವಯಸ್ಸಿನಿಂದಲೇ  ಶಕ್ತಿ,ಯುಕ್ತಿ, ಭಕ್ತಿಯನ್ನು ಕಲಿಸೋಣ. ಅದು ಹೆಣ್ಣು ಮಕ್ಕಳಾಗಲಿ, ಗಂಡು ಮಗುವಿಗೆ ಆಗಲಿ ನಮ್ಮ ನಮ್ಮ ಕುಟುಂಬಗಳಲ್ಲೇ ಸಂಸ್ಕಾರಗಳನ್ನು ಕಲಿಸೋಣ, ಕೆಟ್ಟ ಸ್ಪರ್ಶ ಮತ್ತು ಒಳ್ಳೆಯ ಸ್ಪರ್ಶದ ವ್ಯತ್ಯಾಸಗಳನ್ನು ಮನೆಯಿಂದಲೇ ತಿಳಿಸೋಣ, ತೊಡುವ ಉಡುಗೆಗಳು ಕಾಮುಕರಿಗೆ ಅನುಕೂಲವಾಗುವಂತಹ  ಮನೋಭಾವ ಬಾರದಂತೆ ಹೇಳಿ ಕೊಡೋಣ. ಯಾವ ಹೆಣ್ಣು ಮಕ್ಕಳಾದರೇನು? ನಮ್ಮ ಹೆಣ್ಣು ಮಕ್ಕಳೆಂದು ಭಾವಿಸೋಣ. ಹೆಣ್ಣು ಮಕ್ಕಳು ತಮ್ಮ  ಬ್ಯಾಗ್ ಗಳಲ್ಲಿ  ಕಾಮುಕರಿಂದ, ಅತ್ಯಾಚಾರಿಗಳಿಂದ  ತಪ್ಪಿಸಿಕೊಳ್ಳಬೇಕಾದಂತಹ  ವಸ್ತುಗಳನ್ನು ದೈನಂದಿನ ವಸ್ತುವಾಗಿ ಇಟ್ಟುಕೊಳ್ಳುವುದು  ಅನುಕೂಲ. ರಾತ್ರಿಯ ವೇಳೆಗೆ  ಹೆಚ್ಚಾಗಿ ಹೊರಗೆ ಇರದೆ  ಸುರಕ್ಷಿತವಾಗಿರಲು ಪ್ರಯತ್ನಿಸುವುದು  ಇಂತಹ ಘಟನೆಗಳಿಗೆ ಕಡಿವಾಣವಾಕಬಹುದು. ಸರ್ಕಾರದಿಂದ  ಸುರಕ್ಷಿತವಾದಂತಹ ಎಷ್ಟು ಆಪ್ಗಳಿದ್ದರೂ ಸಹ ತಮಗೆ ತಾವು ಸುರಕ್ಷಿತವಾಗಿರಲು  ಬೇಕಾದ ಸಜ್ಜುಗಾರಿಕೆಯು ಅವಶ್ಯಕ. ಒಟ್ಟಾರೆ  ಪ್ರತಿಯೊಬ್ಬರು  ತಮ್ಮ ತಮ್ಮ ಸುರಕ್ಷತೆಯನ್ನು ತಾವೇ ಮಾಡಿಕೊಳ್ಳುವುದು ಒಳ್ಳೆಯ ಫಲಿತಾಂಶಕ್ಕೆ ಅವಕಾಶ ಮಾಡಿಕೊಡುತ್ತದೆ. ಹೆಣ್ಣು ಮಕ್ಕಳು ಕರಾಟೆ ಮತ್ತು  ಶಕ್ತಿಯುತವಾಗುವುದರಿಂದ  ಯುಕ್ತಿಯನ್ನು ಬಳಸಿ  ಜೀವಿಸುವುದನ್ನು ಕಲಿಯಬೇಕಾಗಿದೆ. ಅತಿಯಾದ ನಂಬಿಕೆ ಯಾರ ಮೇಲೂ ಮಾಡದಂತೆ ಜಾಣ್ಮೆಯಿಂದ ಬದುಕಬೇಕಾಗಿದೆ. ವಿದೇಶಿಗರ  ಆಚರಣೆಯ ವ್ಯಾಮೋಹಗಳನ್ನು ತೊರೆಯಬೇಕಿದೆ. ಅದು ವಿವಾಹ ಪದ್ಧತಿ ಆಗಿರಬಹುದು, ಉಡುಗೆಯ ಪದ್ಧತಿ ಆಗಿರಬಹುದು, ಸಂಬಂಧಗಳಲ್ಲಿರುವ ವಿಭಿನ್ನತೆ ಇರಬಹುದು. ಹೀಗೆ ಹೆಣ್ಣುಮಕ್ಕಳಿಗೆ ಹೆಣ್ಣು ಮಕ್ಕಳೇ ಸ್ಟ್ರಾಂಗ್ ಆಗಿ ಬದುಕಬೇಕಾಗಿದೆ. ತಪ್ಪು ಸರಿಗಳ ತುಲನೆ ಮಾಡುವ ಶಕ್ತಿಯನ್ನು ಅವರೇ ತೀರ್ಮಾನಿಸುವಂತಹ  ಜ್ಞಾನ ಹೊಂದಬೇಕಾಗಿದೆ. ಒಟ್ಟಾರೆ ಎಷ್ಟೇ ನಾವು ಹೇಳಿದರು . ಕಾಮುಕರು ಮತ್ತು ಅತ್ಯಾಚಾರಿಗಳಿಂದ  ಹೆಣ್ಣಿನ ರಕ್ಷೆ ಹೇಗೆ ಎಂಬುದನ್ನು  ಯೋಚಿಸುವ ಪರಿಸ್ಥಿತಿ ಪ್ರಸ್ತುತ ದಿನಮಾನಗಳಲ್ಲಿ  ಬಹಳಷ್ಟು ಇದೆ. ಇಷ್ಟು ಹೇಳುತ್ತಾ  ಈ ಲೇಖನಕ್ಕೆ ಮುಕ್ತಾಯವನ್ನು ಹೇಳುತ್ತಿದ್ದೇನೆ .


Leave a Reply

Back To Top