ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾಣುವ ಕನಸುಗಳನ್ನ ಕಲ್ಪನೆಯೊಳಗೆ ಕಾಣಬೇಕು
ನೊಡುವ ನೋಟವನ್ನು ಕಣ್ಣಿನಿಂದಲೇ ನೊಡಬೇಕು
ಆಡುವ ಆಟವನ್ನು ಮೈದಾನದೊಳಗೆ ಆಡಬೇಕು
ಓದುವ ಪಾಠವನ್ನು ಶಾಲೆಯಲ್ಲೆ ಓದಬೇಕು..!!

ಕಲ್ಪನೆಯೊಳಗೆ ಸಾವಿರಾರು ಕನಸು ಕಾಣಬೇಕು
ಆ ಕನಸುಗಳು ನಮ್ಮ ಬದುಕಿಗೆ ಹಸಿರಾಗಬೇಕು
ಗುಲಾಬಿ ಹೂವನ್ನು ಪ್ರೀತಿಗಾಗಿಯೇ ಬಳಸಬೇಕು
ಆ ಪ್ರೀತಿಯು ನಮ್ಮ ಬದುಕಿನ ಸಂಕೇತವಾಗಬೇಕು..!!

ಬರೆಯುವ ಸಾಹಿತ್ಯದಲ್ಲಿ ಸಾವಿರ ಪದ ರಚಿಸಬೇಕು
ಆ ರಚನೆ ಬದುಕಿನ ಕನಸುಗಳಿಗೆ ಸ್ಪೂರ್ತಿಯಾಗಬೇಕು
ಹಾಡುವ ಗೀತೆಯನ್ನು ಉತ್ತಮ ಸ್ವರದಿಂದಲೆ ಹಾಡಬೇಕು
ಆ ಗೀತೆಯಿಂದ ಎಲ್ಲಾ ಮನಸುಗಳು ಅರಳಬೇಕು..!!

ಅಂದದ ಮಾತುಗಳನ್ನ ನಾಲಿಗೆಯಿಂದಲೇ ಆಡಬೇಕು
ಆ ನಾಲಿಗೆ ಸದಾಕಾಲವೂ ಶುದ್ದವಾಗಿ ಇಟ್ಟುಕೊಳ್ಳಬೇಕು
ಒಬ್ಬರ ಮನಸಿನ ಮಾತುಗಳಿಗೆ ಯಾವತ್ತು ಸ್ಪಂದಿಸಬೇಕು
ಅವರ ಆ ಮಾತು ನಮ್ಮ ಬದುಕಿನ ದಾರಿದೀಪವಾಗಬೇಕು..!


About The Author

Leave a Reply

You cannot copy content of this page

Scroll to Top