ಶರಣ ಸಂಗಾತಿ
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಸಾವಿಲ್ಲದ ಶರಣರು ಮಾಲಿಕೆ
ಹಂಡೆ ಕುಲ ತಿಲಕ ಹಣಮಪ್ಪ ನಾಯಕ
ರಾಜವೀರ ಹಂಡೆ ಹನುಮಪ್ಪ ನಾಯಕನು ಈಗಿನ ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮದ ನಾಡಗೌಡ ಮನೆತನದ ಹಂಡೆ ಲಿಂಗಾಯತ ಜನಾಂಗದ ಲಕ್ಷ್ಮಿಗೌಡ (ಲಕ್ಷ್ಮಣಗೌಡ) ರಾಮಮ್ಮ ಗೌಡತಿಯ ದಂಪತಿಗಳ ಮಗನಾಗಿ ಕ್ರಿ.ಶ.1482 ರಲ್ಲಿ ಜನಿಸಿದನು. ಮುಂದೆ ಬಿಜಾಪುರದ ಸುಲ್ತಾನ ಅಲಿ (ಎರಡನೇ ಇಬ್ರಾಹಿಂ) ಆದಿಲ್ ಶಾಹನ ಆಸ್ಥಾನದಲ್ಲಿ ಸರದಾರನಾಗಿದ್ದು,(ದಂಡನಾಯಕ)ಇವನ ಶೌರ್ಯ,ಪರಾಕ್ರಮ, ಧೀರತನ ಹಾಗೂ ರಾಜಕೀಯ ಕಾರ್ಯದಲ್ಲಿ ಯಾವ ಕಾರ್ಯ ಹೇಗೆ ಮಾಡಬೇಕೆಂಬ, ಚತುರಮತಿಯಾಗಿದ್ದ ಪ್ರಯುಕ್ತ ಸುಲ್ತಾನನ ಪ್ರೀತಿಗೆ ಪಾತ್ರನಾಗಿದ್ದ. ಸುಲ್ತಾನ ತನ್ನ ದಕ್ಷಿಣಕ್ಕಿದ್ದ ಪ್ರದೇಶಗಳು ಅರಾಜಕತೆಯಿಂದ ಹಾಳಾಗಿರಲೂ, ಈ ಪ್ರದೇಶಗಳನ್ನು ಸರಿಪಡಿಸಲು, ಈ ಹಂಡೆ ಹನುಮಪ್ಪನಾಯಕ ಸೂಕ್ತ ವ್ಯಕ್ತಿ ಎಂದು ತಿಳಿದು ಬಳ್ಳಾರಿ,ತೆಕ್ಕಲಕೊಟೆ,ಕುರುಗೊಡು,ಬಂಕಾಪುರ, ಪರಗಣಗಳಿಗೆ (ಒಂದು ಪರಗಣಿಗೆ 42 ರಿಂದ48 ಹಳ್ಳಿಗಳು) ಸನ್ನದು ಬರೆದು ಕೊಟ್ಟು ಕಳಿಸುತ್ತಾನೆ.
ಹನುಮಪ್ಪನಾಯಕ ಕ್ರಿ.ಶ. 1510 ರಲ್ಲಿ ಈ ಪ್ರದೇಶಗಳಿಗೆ ಬಂದು ಅಲ್ಲಲ್ಲಿ ತಲೆ ಎತ್ತಿದ ಅರಾಜಕತೆಯನ್ನು(ದಂಗೆ,ಅಶಾಂತಿ,ಲೂಟಿ) ಹೊಗಲಾಡಿಸಿ, ಅನೇಕ ಸಾಮಾಜಿಕ,ಮತ್ತು ಜನಪರ ಕಲ್ಯಾಣ ಕಾರ್ಯಗಳನ್ನು ಮಾಡಿ ..ಶಾಂತಿ ಸುವ್ಯವಸ್ಥೆ ಕಾಪಾಡಿ,ಅಲ್ಲಿಯ ಪ್ರಜೆಗಳಿಂದ ಅಪಾರ ಕೀರ್ತಿಗೆ ಭಾಜನರಾಗಿ..ದಕ್ಷದಿಂದ ಅಚ್ಚುಕಟ್ಟಾಗಿ ಈ ಪ್ರದೇಶಗಳನ್ನು ರಾಜ್ಯವಾಳುತ್ತಿರಲೂ,ಇದನ್ನು ನೋಡಿದ ಸುಲ್ತಾನ *ಹಂಡೆ ಕುಲ ತಿಲಕ ಹನುಮಪ್ಪನಾಯಕನಿಗೆ ಬಾದುಷಾಹ ವಜೀರ್ ಎಂಬ ಪದವಿ ನಿಡಿ ಸನ್ಮಾನಿಸಿ ಗೌರವಿಸುತ್ತಾನೆ……
(ಬಳ್ಳಾರಿ ಹಾಗೂ ಕುರುಗೋಡ ಕೈಪಿಯತ್ತಿನಲ್ಲಿ ದಾಖಲಾಗಿದ್ದು ಒಮ್ಮೆ ಹಂಡೆ ಹನುಮಪ್ಪನಾಯಕ ತನ್ನ ಐದು ಜನ ಮಕ್ಕಳೊಡಣೆ ಸುಲ್ತಾನನಿಗೆ ಭೇಟಿಯಾಗಲೂ ಹೋದಾಗ, ತುಂಬಿದ ಆ ಸ್ಥಾನದೊಳಗೆ ಈ ಐದು ಜನ ಮಕ್ಕಳ ಬಲಾಡ್ಯವಾದ ಮೈಕಟ್ಟು,ಹಾಗೂ ಸುಂದರವಾದ ರೂಪ ಕಂಡು ಸುಲ್ತಾನ ..ಹನುಮಪ್ಪನಾಯಕನಿಗೆ ಕೇಳುತ್ತಾನೆ .ನಿನ್ನ ಈ ಐದು ಜನ ಮಕ್ಕಳೊಳಗೆ ಒಬ್ಬ ಮಗನನ್ನು ನನಗೆ ಕೊಡು ಮುಸ್ಲಿಂ ಜನಾಂಗಕ್ಕೆ ಮತಾಂತರಿಸಿ ಮುಂದೆ ಈ ನನ್ನ ಸ್ಥಾನಕ್ಕೆ ಬಾದುಷಾಹನನ್ನಾಗಿ (ರಾಜ) ಮಾಡುತ್ತೆನೆ ಎಂದ ತಕ್ಷಣ. ಹನುಮಪ್ಪನಾಯಕ ಸಿಟ್ಟಿನಿಂದ ಅತ್ಯಂತ ಕ್ರೊಧಿತನಾಗಿ ಧೀರೊತ್ತರ ನೀಡುತ್ತಾನೆ .ಸುಲ್ತಾನರೆ ನಿಮಗೆ ನನ್ನಿಂದಲೆ ಈಂತಹ ಮಕ್ಕಳು ಬೇಕಾದರೆ ನಿಮ್ಮ ಜನಾನ ಬಿಬಿಯೊಳಗೆ(ನಿನ್ನ ರಾಣಿಯರೊಳಗೆ) ಒಬ್ಬಳನ್ನು ಕಳುಹಿಸಿಕೊಡು ಇಂತಹ ಮಕ್ಕಳನ್ನು ಹುಟ್ಟಿಸಿಕೊಡುತ್ತೆನೆಂದು ಪ್ರತ್ಯತ್ತುರ ಕೊಟ್ಟಾಗ ತಕ್ಷಣ ಸುಲ್ತಾನನು ಹನುಮಪ್ಬ ನಾಯಕನನ್ನು ಬಂಧಿಸಲು ಆದೇಶಿಸಿದಾಗ ಅಲ್ಲಿದ್ದ ಸೈನ್ಯವನ್ನು ಸದೆಬಡೆದು ಹನುಮಪ್ಪನಾಯಕ ಕ್ರಷ್ಣಾ ನದಿಯನ್ನು ದಾಟಿ ಬಳ್ಳಾರಿ ಪ್ರಾಂತ್ಯಕ್ಕೆ ಬಂದು ನೆಲೆಸುತ್ತಾನೆ.).
ಇಡಿ ವಿಶ್ವಕ್ಕೆ ಮಾದರಿಯಾಗಿ ಸಕಲ ಸಂಪತ್ತಿನಿಂದ ಮೆರದ ವೀಜಯನಗರ ಸಾಮ್ರಾಜ್ಯವನ್ನು ಮಹಾ ಮಂತ್ರಿಯಾಗಿದ್ದ ಸಲಕದ ತಿಮ್ಮರಸ ,ಅಳಿಯ ರಾಮರಾಯನ ಪ್ರತಿಸ್ಪರ್ಧಿಯಾಗಿ ಬಹುಮನಿ ಸುಲ್ತಾನ ಅರಸರಾದ ವಿಜಾಪುರ ,ಕಲಬುರ್ಗಿ ,ಗೋಲ್ಕಂಡ,ಬೀದರ್,ಆಹ್ಮದನಗರ, ಅರಸರಿಗೆ ಒಳಗಿಂದೊಳಗೆ ಪಿತೂರಿ ನಡೆಸಿ ತಿಮ್ಮರಸ ವಿಜಯನಗರ ಸಾಮ್ರಾಜ್ಯವನ್ನು ಧಾರೆ ಎರೆದು ಕೊಡಲೂ ಮುಂದಾದಾಗ ಇದೆ ಸಮಯದಲ್ಲಿ ಅಳಿಯ ರಾಮರಾಯನ ಆಸೆಯಂತೆ,ನೀಡುಮಾಮಿಡಿ ಶ್ರೀಗಳ ಆದೇಶದ ಮೆರೆಗೆ ಹನುಮಪ್ಪನಾಯಕನು ಬಹುಮನಿ ಸುಲ್ತಾನರ ಹಾಗೂ ವಿಜಯನಗರ ಚಕ್ರವರ್ತಿಗಳ ಯುದ್ದದಲ್ಲಿ ಈ ಐದು ಜನ ಸುಲ್ತಾನ ಅರಸರಲ್ಲಿ ನಿಜಾಮಷಾಹ ಎಂಬ ಸುಲ್ತಾನ ಅರಸನನ್ನು,ಸೊಲಿಸಿ ಹಾಗೂ ಬಂಧಿಸಿ ಅಳಿಯ ರಾಮರಾಯನಿಗೆ ಕಾಣಿಕೆಯಾಗಿ ಕೊಟ್ಟ ಹನುಮಪ್ಪನಾಯಕನಿಗೆ ಇದರ ಪ್ರತಿಫಲವಾಗಿ ಪೂರ್ವ ದಿಕ್ಕಿಗೆ ಬರುವ ಪ್ರದೇಶಗಳು ಆಂದ್ರಪ್ರದೇಶದ ,ನಂದ್ಯಾಳ ,ಕಣಿಕಲ್ಲು,ಧರ್ಮಾವರ, ಬುಕ್ಕರಾಯ ಸಮುದ್ರ,ಕುಂದರ್ಪಿ,ಅನಂತಪೂರಂ,ದೊಡ್ಡ ದೊಡ್ಡ ಪಟ್ಟಣಗಳು
ಹಾಗೂ ಪಶ್ಚಿಮಕ್ಕಿರುವ ಪ್ರದೇಶಗಳು ,ಬಳ್ಳಾರಿ,ತೆಕ್ಕಲಕೊಟ,ಕುರುಗೊಡು,ಬಂಕಾಪುರ ಸಿಂಧನೂರು, ಸಿರಗುಪ್ಪ..(ಪರಗಣಿಗಳು)
ಇಷ್ಟೆಲ್ಲಾ ಪ್ರದೇಶಗಳಿಗೆ ಅಧಿಕ್ರತವಾಗಿ ಹಂಡೆ ಹನುಮಪ್ಪನು ಸಾಮಂತ ಅರಸನಾಗಿ ಸನ್ಮಾನಿತಗೊಂಡು ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿಗಳಿಗೆ ಶ್ರೇಷ್ಠ ನಾಯಕನಾಗಿ ಹೊರಹೊಮ್ಮಿ.ಶ 1565 ರಲ್ಲಿ ಬಳ್ಳಾರಿ ಗುಡ್ಡದ ಮೆಲೆ ಬಲಿಷ್ಠವಾದ ಐತಿಹಾಸಿಕ ಕೊಟೆ ನಿರ್ಮಾಣ ಮಾಡಿ ಅನೇಕ ಜನಮನ ಮೆಚ್ಚುವಂತಹ ಕಲ್ಯಾಣ ಕಾರ್ಯಗಳನ್ನು ಕೈಗೊಂಡು ಕ್ರಿ.ಶ.1583 ರಲ್ಲಿ ಮರಣ ಹೊಂದುತ್ತಾನೆ.ಈ ಅರಸನ ಸಮಾಧಿಯೂ ಅನಂತಪೂರದ ನಿಡುಮಾಮಿಡಿ ಮಠದಲ್ಲಿ ಮಾಡುತ್ತಾರೆ.
ಸ್ವತಂತ್ರ ಸಾಮ್ರಾಜ್ಯದ ರಕ್ಷಕರು ಎಂಬ ಬಿರುದು ಹೊತ್ತು ..ದುಷ್ಟ ನಿಗ್ರಹ ಶಿಷ್ಟ ಪರಿಪಾಲನೆಯಲ್ಲಿ ತಮ್ಮ ಪ್ರಮುಖ ಕರ್ತವ್ಯವನ್ನು ಪಾಲಿಸಿ ಕೀರ್ತಿ ಶ್ರೇಷ್ಠರಾದ ಹಂಡೆ ಹನುಮಪ್ಪನಾಯಕ ಹಾಗೂ ಇವನ ವಂಶಸ್ತರು,
ಹನುಮಪ್ಪನಾಯಕನ ಐದು ಜನ ಮಕ್ಕಳು ರಾಜ್ಯವನ್ನು ಈ ರೀತಿ ಹಂಚಿಕೊಳ್ಳುತ್ತಾರೆ .
1.ಅಂಕುಶನಾಯಕ
—————————————-
ನಂದ್ಯಾಳ , ಕಣೆಕಲ್ಲು,ಸಿರಿವಾಳ ಪ್ರದೇಶಗಳಿಗೆ ಒಡೆಯನಾಗುತ್ತಾನೆ.
2. ಹೀರೆ ಮಲಕಪ್ಪನಾಯಕ
ಬುಕ್ಕರಾಯಸಮುದ್ರಂ,ಅನಂತಪೂರ, ಧರ್ಮಾವರ ಪ್ರದೇಶಗಳಿಗೆ ಒಡೆಯ
3.ರಾಮಪ್ಪ ನಾಯಕ
——————————-
ರಾಯದುರ್ಗ,ಕುಂದರ್ಪಿ4 ಪ್ರದೇಶಗಳನ್ನು ಆಳುತ್ತಿರುವಾಗ ಇವನಿಗೆ ಯುದ್ಧದಲ್ಲಿ ಗುಂಡು ತಗಲಿ ಮೃತ ಪಡುತ್ತಾನೆ.4
4.ದ್ಯಾವಪ್ಪನಾಯಕ
_______4
ರಾಯದುರ್ಗ,ಕುಂದರ್ಪಿ ಪ್ರದೇಶಗಳನ್ನು ಅಣ್ಣರಾಮಪ್ಪನಾಯಕ ಆಳುತ್ತಿರುವಾಗ ಇವನಿಗೆ ಯುದ್ಧದಲ್ಲಿ ಗುಂಡು ತಗಲಿ ಮೃತ ಪಡುತ್ತಾನೆ.ಹಾಗೂ ಇದೇ ಪ್ರದೇಶಗಳು ಮುಂದೆ ದ್ಯಾವಪ್ಪನಾಯಕನ ಆಳ್ವಿಕೆಗೆ ಒಳಪಡುತ್ತವೆ.
5 -ಚಿಕ್ಕ ಮಲಕಪ್ಪನಾಯಕ
——————————————
ಬಳ್ಳಾರಿ ,ತೆಕ್ಕಲಕೊಟೆ,ಕುರುಗೊಡು,ಬಂಕಾಪುರ,ಕೆಂಚನಗುಡ್ಡ,ಸಿರಗುಪ್ಪ,ಪ್ರದೇಶಗಳಿಗೆ ಒಡೆಯನಾಗಿ ದಕ್ಷದಿಂದ ರಾಜ್ಯವಾಳುತ್ತಾನೆ.
ಆಂಧ್ರ ಪ್ರದೇಶದ ಬುಕ್ಕರಾಯ ಸಮುದ್ರದೊಳಗೆ ಬಲವಾದ ಕೊಟೆಯನ್ನು ಕಟ್ಟಿಸಿದ ಹನುಮಪ್ಪನಾಯಕ ಅಲ್ಲಿದ್ದ ಅತ್ಯಂತ ದೊಡ್ಡ ಕೆರೆ ಸುಮಾರು 5511 ಎಕರೆ ಬಹುವಿಸ್ತಾರವಾದ ಕೆರೆಯನ್ನು ದುರಸ್ತಿ ಮಾಡುವಲ್ಲಿ ಹಾಗೂ ನೂರಾರು ಸುತ್ತಮುತ್ತಲೂ ಹಳ್ಳಿಗಳಿಗೆ ನೀರಾವರಿ ವ್ಯವಸ್ಥೆ ಕಲ್ಪಸಿದ ಈ ಹಂಡೆ ಪಾಳೆಗಾರರು .
ಹಂಡೆ ಮಲಕಪ್ಪನಾಯಕ,
ವಿಜಯನಗರ ಸಾಮ್ರಾಟರ ಜೊತೆ ರಕ್ಕಸ ತಂಗಡಗಿ ಎಂಬ ಯುದ್ದದಲ್ಲಿ ಪಾಲ್ಗೊಂಡು ಅನಂತಪೂರವನ್ನು(ಜಿಲ್ಲೆ) ರಾಜಾಧಾನಿ ಮಾಡಿಕೊಂಡು ಅಲ್ಲಿಯೆ ಅರಮನೆ ಕಟ್ಟಿಸಿ ಐತಿಹಾಸಿಕವಾಗಿ ರಾಜ್ಯವಾಳಿದ ಪ್ರಯುಕ್ತ ಹಂಡೆ ಅನಂತಪೂರ ಎಂದು ನಾಮಧೇಯವಾಗಿ ವೀಶೆಷ ಪ್ರಸಿದ್ದಿಯನ್ನು ಪಡೆದ. ಮುಂದೆ ಇವನ ವಂಶಸ್ಥ ಕ್ರಿ.ಶ.1720ರಲ್ಲಿ ಪವಾಡಪ್ಪನಾಯಕ ರಾಜ್ಯಪರಿಪಾಲನೆ ಮಾಡುವ ವೇಳೆಯಲ್ಲಿ , ಕಂಡಣಿ ಕೇಳುವ ನೆಪದಲ್ಲಿ ಬಂದ ಕಡಪಾ ನವಾಬರು ಬುಕ್ಕರಾಯ ಸಮುದ್ರಕ್ಕೆ ಹಂಡೆ ಪವಾಡಪ್ಪನಾಯಕನನ್ನು ಮೊಸದಿಂದ ಬಂಧಿಸಿದಾಗ ಈ ರಾಜ್ಯದ ರಾಜಗುರುಗಳಾದಂತಹ ಶ್ರೀ ಇಮ್ಮಡಿ ಕರಿಬಸವ ದೇಶಿಕೇಂದ್ರ ಮಹಾಸ್ವಾಮಿಗಳು ಸ್ವತಹ ಸೈನಿಕರೊಡಣೆ,ಹಾಗೂ ರೈತರನ್ನು ಒಕ್ಕಲೆಬ್ಬಿಸಿ ಎಲ್ಲರೂ ಜೊತೆಗೂಡಿ ಪವಾಡಪ್ಪನಾಯಕನನ್ನು ರಕ್ಷಿಸಿ ಕಾಪಾಡಿದಾಗ ಶ್ರೀ ಮಠಕ್ಕೆ ಧನಕನಕಗಳನ್ನು,ಹಾಗೂ ನೂರಾರು ಎಕರೆ ಭೂದಾನಗೈದು ಗುರು ಶಿಷ್ಯ ಪರಂಪರೆಗೆ ಸಾಕ್ಷಿ ಅನ್ನುವ ಹಾಗೆ ಹೊಸಕೆರೆಯ ನಿಡುಮಾಮಿಡಿ ಮಠದಲ್ಲಿ ಶ್ರೀಗಳ ಗದ್ದುಗೆಯ ಪಕ್ಕದಲ್ಲಿ ಕ್ರಿ.ಶ.1737 ರಲ್ಲಿ ಹಂಡೆ ಪವಾಡಪ್ಪನಾಯಕ ನ ಸಮಾಧಿ ನೊಡಬಹುದು.
ಹಾಗೂ ಬಳ್ಳಾರಿ ನಾಡನ್ನು ಆಳುವ ವೆಳೆಯಲ್ಲಿ ಹನುಮಪ್ಪನಾಯಕ ತನ್ನ ರಾಜ್ಯಕ್ಕೆ ಕೊಟ್ಟುರು ಪೀಠದ ಶ್ರೀ ಕಪ್ಪಿನ ಚೆನ್ನಬಸವ ಮಹಾಸ್ವಾಮಿಗಳನ್ನು ರಾಜಗುರುಗಳಾಗಿ ಸ್ವೀಕರಸಿ ಕ್ರಿ.ಶ.1517 ರಲ್ಲಿ ನಾಲ್ಕು ಬಾರಿ ಹಾಗೂ ಕ್ರಿ.ಶ.1519ರಲ್ಲಿ ಎರಡು ಬಾರಿ ಕೊಟ್ಟುರು ಪೀಠಕ್ಕೆ ಸುಮಾರು 1100 ಎಕರೆ ಭೂಮಿಯನ್ನು ದಾನಗೈದು ಮುಂದೆ ಇವನ ವಂಶಸ್ಥರಾದ ಹಂಡೆ ಹೀರೆ ರಾಮಪ್ಪನಾಯಕ. ಕ್ರಿಶ 1726ರಲ್ಲಿ ಕೊಟ್ಟುರು ಮಠಕ್ಕೆ ದಾಸೊಹ ನಿಮಿತ್ತ್ಯ ಹಾಗೆ ಹಂಡೆ ರಾಣಿ ನೀಲಮ್ಮ ಸುಮಾರು ಒಟ್ಟು1600 ಎಕರೆ ಜಮೀನಗಳನ್ನು ದಾನದತ್ತಿಯಾಗಿ ಕೊಟ್ಟ ದಾಖಲೆಗಳು ಇಂದಿಗೂ ಸಹ ಶ್ರೀಮಠದಲ್ಲಿವೆ….
ಬಳ್ಳಾರಿಯನ್ನಾಳಿದ ಪ್ರಪ್ರಥಮ ಮಹಿಳಾ ರಾಣಿ ಹಂಡೆ ನಿಲಮ್ಮ ಕ್ರಿಶ 1731ರಿಂದ 1734 ವರೆಗೆ ರಾಣಿ ನಿಲಮ್ಮ ಬಳ್ಳಾರಿಯನ್ನಾಳುತ್ತಾಳೆ.ಕ್ರಿ.ಶ.1730ರಲ್ಲಿ ಬಳ್ಳಾರಿಯ ಕೆಳಗಿನ ಕೊಟೆಯನ್ನು ಹಂಡೆ ಹೀರೆ ರಾಮಪ್ಪನಾಯಕ ಕಟ್ಟಿಸುತ್ತಾನೆ. ಹಾಗೂ ಹಂಡೆ ದ್ಯಾವಪ್ಪನಾಯಕನು ಸಹ ಪ್ರಬಲವಾಗಿ ಆಳ್ವಿಕೆ ಮಾಡುತ್ತಾನೆ. ಮುಂದೆ ಹಂಡೆ ರಾಮಪ್ಪನಾಯಕನೂ ಅತ್ಯಂತ ಪಬಲನಾಗಿ ಬಳ್ಳಾರಿ ಪ್ರಾಂತ್ಯದಲ್ಲಿ ಕ್ರಿ.ಶ.1735 ರಿಂದ 1764 ರ ವರೆಗೆ ಪ್ರಬಲವಾಗಿ ಆಳ್ವಿಕೆ ಮಾಡಿ ತಾವು ಲಿಂಗಾಯತ ಧರ್ಮಿಯರಾಗಿದ್ದರು ವೀರಶೈವ ಧರ್ಮದಲ್ಲಿರಿಸಿದ ಅಪಾರ ನಿಷ್ಠೆ ಹಾಗೂ ಇತರ ಧರ್ಮಗಳನ್ನು ಗೌರವಿಸುತ್ತಾ ಕ್ರಿ.ಶ.1764 ರಲ್ಲಿ ಹಂಡೆ ರಾಮಪ್ಪನಾಯಕ ಕೂಡ್ಲಿ ಶ್ರಂಗೇರಿ ಮಠಕ್ಕೆ ದಾನದತ್ತಿ ನಿಡುತ್ತಾನೆ.
ಲಿಂಗಾಯತ ಹಂಡೆ ವಜೀರ ಅರಸರ ಬಗೆಗಿನ ಸಾಹಿತ್ಯಗಳು
ಶ್ರೀಶೈಲ ಪೀಠ ದರ್ಶನಂ ಹಾಗೂ ಕೊರಟೆ ಶ್ರೀನಿವಾಸರಾಯರು ರಚಿಸಿದ ನೀಡುಮಾಮಿಡಿ ಪೀಠದ ಹಂಡೆ ಪಾಳೆಗಾರರು ರಸಿಕ ಮನೊರಂಜನ ವಿಲಾಸ ಹಾಗೂ…
ಕ್ರಿ.ಶ.1946ರಲ್ಲಿ ದಿವಂಗತ ಶ್ರೀ .ಸದಾಶಿವಯ್ಯನವರು ನಿವ್ರತ್ತ ನ್ಯಾಯವಾಧಿಗಳು ಹರಪನಹಳ್ಳಿ (ದಾವಣಗೆರೆ) ರಚಿಸಿದ ಕರ್ನಾಟಕದ ಗಡಿಗೆರೆಗಳು ಎಂಬ ಕ್ರತಿಯಲ್ಲಿ ಹಾಗೂ ವಿದೇಶಿ ವಿದ್ವಾಂಸ ಸಿ ಪಿ ಬ್ರೌನ್ ಕ್ರಿ.ಶ.1750 ರಲ್ಲಿ ಬರೆದ ಈ The wars of the Rajas ಹಂಡೆ ಅರಸರ ಮತಾಚರಣೆಗಳನ್ನು ಕುರಿತು ಇವರು ಜಾತಿಯೊಳಗೆ ಶಿವಭಕ್ತರು,ಲಿಂಗವಂತರು,ಇವರಿಗೆ ಕುಲದೈವ ಕುಲದೈವ ಬಿಜಾಪುರ ಸೀಮೆಯೊಳಗೆ ಇದ್ದ ಸೊನ್ನಲಾಪುರದ ಸಿದ್ದರಾಮೇಶ್ವರನು,ವಿನಹ ಇತರ ದೇವತೆಗಳನ್ನು ಶಿವಪೂಜೆ ಮಾಡದೆ ಆಗಲಿ ಗಂಗಾಪಾನ ಸಹಾ ಮಾಡಲಾರರು.ಮಧುರ ಆಹಾರಗಳೇ ಹೊರತು ಮಧ್ಯ ಮಾಂಸಾದಿಗಳ ಭಕ್ಷಣೆ ಮಾಡಲಾರರು ಸತ್ತರೆ ಸಮಾಧಿ ಮಾಡುವರು ವಿನಹ ದಹನ ಮಾಡಲಾರರು
ಹಂಡೆ ವಂಶದ ಕೆಲವು ನಾಯಕರಿಗೆ ಸಂತಾನವಿಲ್ಲದಿರುವದರಿಂದ ,ಅಂತಃಕಲಹಗಳಿಂದಲೂ ಉಂಟಾದ ಅರಾಜಕತೆಯ ಸಂದರ್ಭದಲ್ಲಿ ಹೈದರಾಲಿಯ. ಸೈನ್ಯ ಸಮೇತ ಬಂದು ಬಳ್ಳಾರಿ ಕೊಟೆಗೆ ಮುತ್ತಿಗೆ ಹಾಕಿದಾಗ ಬಲಿಷ್ಠವಾದ ಕೊಟೆ ಹಂಡೆ ದೊಡ್ಡಪ್ಪನಾಯಕನ ಅವಧಿಯಲ್ಲಿ ಹೈದರಾಲಿ ವಶವಾಗುವುದಿಲ್ಲ.ನಂತರ ಆದೊನಿಯ ಮುಸಲ್ಮಾನ ಆಡಳಿತಗಾರರಿಂದಲೂ 3 ತಿಂಗಳ ಕಾಲ ಹೊರಾಡಿ ಸುಮಾರು 70’000 ಎಪ್ಪತ್ತುಸಾವಿರಕ್ಕಿಂತಲೂ ಹೆಚ್ಚಿನ ಸೈನ್ಯದೊಂದಿಗೆ ಬಂದ ಹೈದರಾಲಿ ಬಲಿಷ್ಟವಾದ ಬಳ್ಳಾರಿ ಕೊಟೆಯನ್ನು ಕ್ರಿ.ಶ.1775 ರಲ್ಲಿ ವಶಪಡಿಸಿಕೊಳ್ಳುತ್ತಾನೆ.ಮುಂದೆ ಟಿಪ್ಪು ಸುಲ್ತಾನನ ಅವಧಿಯಲ್ಲಿ ಅನಂತಪೂರದ ಹಂಡೆ ಪಾಳೆಗಾರರು ಇವನ ವಶವಾಗುತ್ತಾರೆ .ಮುಂದೆ ಬ್ರೀಟಿಷ್ ಈಸ್ಟ ಇಂಡಿಯಾ ಕಂಪನಿಗೆ ಕ್ರಿ.ಶ. 1800 ರಲ್ಲಿ ಅನಂತಪುರ ,ಕಡಪಾ,ಬಳ್ಳಾರಿ ಸರ್ ಥಾಮಸ್ ಮನ್ರೊ ಸಾಹೇಬರ ಮದ್ರಾಸ ಪ್ರಾಂತ್ಯಕ್ಕೆ ಒಳಪಡುತ್ತವೆ.
ಹೀಗೆ ಈ ರಿತಿಯಾಗಿ ಸುಮಾರು 318 ಮೂರುನೂರ ಹದಿನಾರು ವರ್ಷಗಳ ಕಾಲ ಆಳಿದ ಹಂಡೆ ಪಾಳೆಗಾರರು ತಮ್ಮ ಉದಾರ ನೀತಿ, ಪರೋಪಕಾರ ಕಾರ್ಯಗಳಿಂದ ಈ ಅರಸರು ಲಿಂಗಾಯತ ಧರ್ಮದ ಪ್ರಸಾರದಲ್ಲಿ ತೊಡಗಿಸಿಕೊಂಡಿದ್ದರು. ಜೊತೆಗೆ ಇತರ ಧರ್ಮಗಳನ್ನು ಗೌರವಿಸಿ ಕರ್ನಾಟಕದ ಪಾಳೆಗಾರರ ಪರಂಪರೆಯಲ್ಲಿ ಐತಿಹಾಸಿಕ,ಕೀರ್ತಿ,ಗೌರವಗಳನ್ನು ಗಳಿಸಿದ್ದಾರೆ.
ಈ ಲಿಂಗಾಯತ ಹಂಡೆ ವಜೀರ ಅರಸರ ವಂಶಸ್ಥರು ಈಗಲೂ ಬಸವನ ಬಾಗೇವಾಡಿ ಸಿಂದಗಿ ಕುರುಗೋಡು ,ಬಳ್ಳಾರಿ ಮುಂತಾದ ಕಡೆಗೆ ನೋಡಬಹುದಾಗಿದೆ.
ಲಿಂಗಾಯತ ಹಂಡೆ ವಜೀರ ಅವರ ವಂಶಸ್ಥರ ಬಗ್ಗೆ ಆಸಕ್ತಿ ವಹಿಸಿ ನಾನು ಬಸವನ ಬಾಗೇವಾಡಿ ಕರಬಂಟನಾಳ ಮುತ್ತಗಿ ಮುಂತಾದ ಪ್ರದೇಶಗಳಲ್ಲಿನ ಹಂಡೆ ವಜೀರ ಅವರ ಕುಟುಂಬವನ್ನು ಸಂದರ್ಶನ ಮಾಡ ಬೇಕೆನಿಸಿ ಮಾತೃಸ್ವರೂಪವಾದ ಪ್ರೊ ಶಾರದಾ ಪಾಟೀಲ ಬಾದಾಮಿ ಕರಬಂಟನಾಳ ಅವರನ್ನು ಸಂಪರ್ಕಿಸಿದೆನು. ಅವರು ಅಪ್ಪಟ ಲಿಂಗಾಯತ ಬಸವ ತತ್ವದಲ್ಲಿ ನಂಬಿಕೆ ಇಟ್ಟವರು ಲಿಂಗ ಯೋಗ ಹೊರತು ಪಡಿಸಿ ಅನ್ಯ ದೈವಂಗಳಿಗೆ ಕೈ ಮುಗಿದವರಲ್ಲ. ನಾನು ಕೂಡ ಲಿಂಗಾಯತ ಒಳ ಪಂಗಡಗಳ ಬಗ್ಗೆ ನಂಬಿಕೆ ಇಟ್ಟವನಲ್ಲ .ಅತ್ಯಂತ ಮುಜುಗರದಿಂದ ಅವರನ್ನು ಹಂಡೆ ವಜೀರ ಅವರ ಬಗ್ಗೆ ಮಾಹಿತಿ ಕಲೆ ಹಾಕಲು ಆರಂಭಿಸಿದೆನು. ಆಗ ಅವರು ನಗುತ್ತಾ ಏಕೆ ಇಂತಹ ಸಮೀಕ್ಷೆ ಎಂದು ಕೇಳಿದರು ಆಗ ನಾನು ಬಳ್ಳಾರಿಯನ್ನು ಆಳಿದ ಲಿಂಗಾಯತ ಹಂಡೆ ಅರಸು ಮನೆತನದವರ ಬಗ್ಗೆ ವಿವರವಾಗಿ ಹೇಳಿದೆನು. ಆಗ ಅತ್ಯಂತ ಆಶ್ಚರ್ಯಗೊಂಡ ಪ್ರೊ ಶಾರದಮ್ಮ ಪಾಟೀಲ ಅವರು ಏನ್ರಿ ಸರ್ ಎಲ್ಲಿಂದ ಇಂತಹ ವಿವರವನ್ನು ಸಂಗ್ರಹಿಸಿದ್ದೀರಿ ,ನಮ್ಮ ಲಿಂಗಾಯತ ಹಂಡೆ ವಜೀರ್ ಸಮುದಾಯದ ಇತಿಹಾಸ ನಮಗೆ ಗೊತ್ತಿಲ್ಲ ಎಂದು ಉದ್ಗಾರ ತೆಗೆದರು. ಸುಮಾರು ಹೊತ್ತು ಅವರೊಂದಿಗೆ ಚರ್ಚೆ ಮಾಡಿದಾಗ ಇವರೂ ಸಹಿತ ಲಿಂಗಾಯತ ಹಂಡೆ ವಜೀರ ಅರಸು ಮನೆತನಕ್ಕೆ ಸೇರಿದವರೆಂದು ಅರ್ಥವಾಯಿತು.
ತಮ್ಮ ಕೌಟುಂಬಿಕ ವಿವರವನ್ನು ಹೇಳುತ್ತಾ ಹೋದಾಗ ನಾನು ಅವುಗಳನ್ನು ದಾಖಲಿಸುವ ಕಾರ್ಯಕ್ಕೆ ಮುಂದಾದೆನು.
ಪ್ರೊ ಶಾರದಮ್ಮ ಪಾಟೀಲ (ಮೇಟಿ ) ಬಾದಾಮಿ ಇವರೂ ಅನೇಕ ವಿಷಯಗಳನ್ನು ಹಂಚಿಕೊಂಡರು.
ತಂದೆಯ ಹೆಸರು : ಲಿಂಗೈಕ್ಯ ಶಂಕರಗೌಡ ಭೀಮನಗೌಡ ಪಾಟೀಲ ನಿವೃತ್ತ ಅಸಿಸ್ಟೆಂಟ್ ಕಮಿಷನರ್ ಕಂದಾಯ
ತಾಯಿಯ ಹೆಸರು: ಲಿಂಗೈಕ್ಯ ಗಂಗಾಬಾಯಿ ಶಂಕರಗೌಡ ಪಾಟೀಲ.
ಅಜ್ಜನ ಹೆಸರು: ಲಿಂಗೈಕ್ಯ ಭೀಮನಗೌಡ ಪಾಟೀಲ.ಕರಿ ಬಂಟನಾಳ ಗೌಡರು ಮತ್ತು ಲಿಂಗಾಯತ ಹಂಡೆ ವಜೀರ್ ಅರಸೊತ್ತಿಗೆಯ ವಾರಸುದಾರರು.
ಅಜ್ಜಿಯ ಹೆಸರು ಪಾರ್ವತಿ ಭೀಮನಗೌಡ ಪಾಟೀಲ – ತಂದೆ ತಾಯಿ
(ಕರಿ ಬಂಟನಾಳ) ಅಪಾತ ಲಿಂಗಾಯತ ಆಚರಣೆ ಮಾಡುವ ಇಷ್ಟಲಿಂಗ ನಿಷ್ಠರು.
ಪ್ರೊ ಶಾರದಮ್ಮ ಪಾಟೀಲ ಅವರ ತಾಯಿ ಲಿಂಗೈಕ್ಯ ಗಂಗಾಬಾಯಿ ಶಂಕರಗೌಡ ಪಾಟೀಲ ಅವರ ಮನೆಯ ಕಡೆಯಿಂದಲೂ ಇದೆ ಲಿಂಗಾಯತ ಹಂಡೆ ವಜೀರ್ ಸಮುದಾಯಕ್ಕೆ ಸೇರಿದವರೆಂದು ತಿಳಿದು ಬರುತ್ತದೆ .
ಹೆಣ್ಣಜನ ಹೆಸರು :ನೀಲನಗೌಡ ಸಿದ್ದನಗೌಡ ಪಾಟೀಲ.
ಹೆಣ್ಣಜ್ಜಿಯ ಹೆಸರು: ಲಕ್ಷ್ಮೀಬಾಯಿ ನೀಲನಗೌಡ ಪಾಟೀಲ (ಮುತ್ತಗಿ)
ಇಂತಹ ಕೃಷಿ ಕುಟುಂಬದ ಲಿಂಗಾಯತ ರಾಜಮನೆತನಗಳು ಹಂಡೆ ವಜೀರ , ನೊಳಂಬ (ನೊಣಬ ),ಲಾಲಗೊಂಡರು ಮುಂತಾದವರು ಲಿಂಗಾಯತ ಧರ್ಮವನ್ನು ಪಾಲಿಸುವದರ ಜೊತೆಗೆ ಅನ್ಯ ಧರ್ಮಿಯರನ್ನು ಗೌರವಿಸಿ ಲೋಕೋಪಕಾರ ಜನಪರ ಕಾಳಜಿ ಹೊಂದಿದವರಾಗಿದ್ದು ಇಂತಹ ಲಿಂಗಾಯತ ಅರಸು ಮನೆತನಗಳ ಬಗ್ಗೆ ಇನ್ನು ಹೆಚ್ಚಿನ ಶಾಸ್ತ್ರೀಯ ಅಧ್ಯಯನ ಮಾಡಬೇಕಾಗಿರುವುದು ಅತ್ಯವಶ್ಯವಾಗಿದೆ.
ಬಿಜ್ಜಳನು ಕಳಚೂರಿ ಮನೆತನಕ್ಕೆ ಸೇರಿದವನಾಗಿದ್ದನು ಅಂದಿನ ಮಡಿವಾಳ ಮಾಚಿದೇವ ಅಂಬಿಗರ ಚೌಡಯ್ಯನವರು ಆಯಾ ಪ್ರಾಂತ್ಯದ ರಾಜರ ದಂಡನಾಯಕರಾಗಿದ್ದರು ಎಂದು ತಿಳಿದು ಬರುತ್ತದೆ. ಕೃಷಿ ಪಶು ಸಂಗೋಪನೆ ವಾಣಿಜ್ಯ ಜೊತೆಗೆ ಸದೃಢ ಮೈ ಕಟ್ಟು ಹೊಂದಿದ ಲಿಂಗಾಯತ ಹಂಡೆ ವಜೀರ್ ಅವರು ಒಂದು ಅರ್ಥದಲ್ಲಿ ಲಿಂಗಾಯತ ಕ್ಷತ್ರಿಯಯರಾದರು ಆದರೆ ಲಿಂಗಾಯತ ಧರ್ಮವನ್ನು ತಮ್ಮ ಉಸಿರನ್ನಾಗಿಸಿಕೊಂಡರು. ಕಳಚಿ ನೋಡು ಕಣ್ಣಿನ ಪೊರೆ ಹಂಡೆ ವಜೀರರು ಈ ನಾಡಿನ ದೊರೆ ಎಂಬ ಆಡು ಮಾತಿನಂತೆ ನೆಲಮೂಲದ ಸಂಸ್ಕೃತಿಯ ದಿಟ್ಟ ಲಿಂಗಾಯತ ಹಂಡೆ ವಜೀರರು ದೇಶಕ್ಕೆ ಮತ್ತು ಲಿಂಗಾಯತ ಧರ್ಮಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ.
ಆಕರಗಳು
ಕರ್ನಾಟಕ ರಾಣಿಯರು ಒಂದು ಅಧ್ಯಯನ – ಡಾ ಸುಮಂಗಲಾ ಎಸ ಮೇಟಿ
ಹಂಡೆ ಸಂಸ್ಕೃತಿ ಪಥ – ಡಾ ಕೊಟ್ರು ಸ್ವಾಮೀ ಏ ಎಂ ಎಂ
ಹಂಡೆ ಪಾಳೆಯಗಾರ ಇತಿಹಾಸ ಮತ್ತು ಪರಂಪರೆ ಪ್ರೊ ಎಸ ಸಿ ಪಾಟೀಲ
ರಾಜ ಬಲದ ಹಣಮಪ್ಪ ನಾಯಕ ಎಲ್ ಬಿ ಕೆ ಅಲ್ದಾಳ
ಶಾಸನೋಕ್ತ ಹಂಡೆ ಅರಸು ಮನೆತನಗಳು – ಪ್ರೊ ಎಸ ಸಿ ಪಾಟೀಲ ವಿಶೇಷ ಅಧಿಕಾರಿಗಳು
ಕರ್ನಾಟಕ ಲಲಿತ ವಿಶ್ವ ವಿದ್ಯಾಲಯ ಬೆಂಗಳೂರು
ಗುರುವಿನ ಗೆಲವು -ಡಾ ಜ ಚನಿ
—————————————————-
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ತುಂಬಾ ಶ್ರಮವಹಿಸಿ ಮಾಹಿತಿ ಸಂಗ್ರಹಿಸಿ ಲೇಖನ ಬರೆದಿದ್ದೀರಿ .ನಿಮಗಿರುವ ಇತಿಹಾಸ್ ಪ್ರಜ್ಞೆ, ನಮ್ಮ ಹಿರಿಯರ ಘನತೆ ಗೌರವ ಓದಿ ಹೆಮ್ಮೆಪಟ್ಟೆ.ಧನ್ಯವಾದಗಳು ಸರ್.
ಅದ್ಭುತವಾದ ಮತ್ತು ಸವಿಸ್ತಾರವಾದ ಲೇಖನ…ಯಾವ ಕನ್ನಡ ಮತ್ತು ಇತಿಹಾಸ ಪ್ರಾಧ್ಯಾಪಕರಿಗೆ ಕಡಿಮೆ ಇಲ್ಲದ ನಿಮ್ಮ ಜ್ಞಾನದಪರಿಧಿ, ಎಲ್ಲರಿಗೂ ಮಾಹಿತಿ ಹಂಚಿ.. ತಿಳುವಳಿಕೆ ಕೊಡಬೇಕೆನ್ನುವ ನಿಮ್ಮ ಇಚ್ಚಾಶಕ್ತಿ
ಮೆಚ್ಚುವಂತಹದು ಸರ್
ಸುತೇಜ
ಬೆಳಗಾವಿ
ವಿಜಯಪುರ ಭಾಗದಲ್ಲಿ ಆಡಳಿತ ಮಾಡಿದ ಗೌಡರ ಮನೆತನಗಳು ಹಂಡೆ ವಜೀರ್.
ಅವರ ಐತಿಹಾಸಿಕ ಹಿನ್ನೆಲೆ ಇಷ್ಟೊಂದು ರೋಚಕವಾದುದೆಂದು ತಿಳಿದಿರಲಿಲ್ಲ. ಹಂಡೆ ವಜೀರರು ಲಿಂಗಾಯತ ಕ್ಷತ್ರೀಯರು ಒಪ್ಪುವಂತಹ ಹೇಳಿಕೆ
ಮಾಹಿತಿ ಪೂರ್ಣ ಲೇಖನ
ಡಾ. ನಿರ್ಮಲ ಬಟ್ಟಲ
ನನಗೆ ಗೊತ್ತಿರದ ಅನೇಕ ಹೊಸ ವಿಷಯಗಳು ತಮ್ಮ ಸುಧೀರ್ಘ ಲೇಖನದಲ್ಲಿ ಪ್ರಕಟವಾಗಿವೆ.
ಅಂತಹ ಕುಟುಂಬದಲ್ಲಿ ನಾನೂ ಒಬ್ಬಳು ಎಂಬ
ಅಭಿಮಾನ ಹೆಮ್ಮೆ ಎನಿಸಿತು.
ಸರ್ ಇದನ್ನು ಒಂದು ಸುಂದರ ಪುಸ್ತಕ ಮಾಡಲು ಕೋರಿಕೆ.
ಲೇಖನ ಓದಿ ಹಂಡೆ ಹಾಲು ಕುಡಿದಷ್ಟು ಖುಷಿ ಆಯ್ತು
ತಮ್ಮ ಲೇಖನ ಓದಿ,ನಮ್ಮ ಗಂಧದ ನಾಡಿನ ಸಾಧಕರ ಸಾಧನೆ ನಮಗೆಲ್ಲ ಸ್ಪೂರ್ತಿ,ನಾಡಿನ ಮೇಲಿನ ಅಕ್ಕರೆ ಇಮ್ಮಡಿ ಆಯ್ತು..
ಡಾ ಶಾರದಾಮಣಿ ಹುನಶಾಳ
ಗೆಳತಿ ಪ್ರೊ ಶಾರದಾ ಪಾಟೀಲ ಇವರ ಕುಟುಂಬದ ಇತಿಹಾಸವು ಇಷ್ಟು ದೊಡ್ಡದಾಗಿದೆ ಎಂದು ಓದಿ ಆನಂದವಾಯಿತು. ಡಾ ಶಶಿಕಾಂತ್ ಪಟ್ಟಣ ಅವರ ಲೇಖನ ಅದ್ಭುತವಾಗಿದ್ರೆ