ಕಾವ್ಯ ಸಂಗಾತಿ
ಸವಿತಾ ದೇಶಮುಖ
ಹೂವು- ಹಸಿವು…
ಎಲ್ಲ ಮನ ಸೂರೆಗೊಳ್ಳುವ
ಗುಲಾಬಿ- ಮಲ್ಲಿಗೆ- ಸಂಪಿಗೆ
ಉದಯದಿ ಹೊರಹೊಮ್ಮಿ
ಇರುಳಲಿ ಮುದಡಿ ಹೋಗುವ
ಒಂದು ದಿನದ ಸಂತೆಯಲ್ಲಿ..
ನಗುತಲಿವೆ ಮೋಹಗೊಳಿಸುವ
ವಯ್ಯಾರದಲಿ , ಪ್ರಸ್ಪುರಿಸುವ
ಭರದಲಿ, ಸುಗಂಧ ಸೂಸುವ
ತವಕದಲ್ಲಿ ,ಸೌಂದರ್ಯದ
ಅಂತರಂಗದ ತಂತ್ರವು…..
ಕುಸುಮಗಳು ಎನಿತು ಬಲ್ಲವು
ತನ್ನೊಡತಿಯ ಹೋರಾಟವು
ಹಸುವಿನ ಕಾದಾಟವು ,
ಉದರದ ಪರದಾಟ
ಜೀವದ ಸಮರದ ಆಟವು .,..
ಚುರುಗುಟ್ಟಿಸುವ ಹೊಟ್ಟೆಯು
ಕಿತ್ತು ತಿನ್ನುವ ಮಕ್ಕಳ ಕಾಟವು
ಹೇಳತೀರದ ಅಳಲಿನ ಕದನವು
ಹಸಿವಿನ ರಣದ ಸುಳಿದಾಟವು
ಕುಸುಮಗಳ ಅಂದ ಚೆಂದಕೆ
ಅರ್ಧ ಬೆಲೆಯ ತೆತ್ತಿ ಕೊಳ್ಳುವರು ,
ಹೂವಿನೊಡತಿಯ ನೋಡಿ
ಕನಿಕರಿಸದೆ- ಕಡೆಗಣಿಸುವರು….
ಉಕ್ಕಿ ಕಣ್ಣೀರಿನ ಕೊಡೆಯು
ಮರಿ ಮಾಚಿದ ವೇದನೆಯು
ಬಾಳುತಿಹಳು ಅವಳು
ಎನಿತು ಬಲ್ಲವಳು ಪುಷ್ಪಗಳ
ಸೌಂದರ್ಯದ ಗುಟ್ಟಿನು
ಹಸುವಿನ ಆಟದ ಕೂಟದಲಿ……
ಸವಿತಾ ದೇಶಮುಖ
Very nice mam. congratulations
Thanku mam