ಕಾವ್ಯ ಸುಧೆ(ರೇಖಾ) ಅವರ ಕವಿತೆ-ನೆನಪುಗಳು

ಕಾಡುವವು
ಸದಾನಿನ್ನದೇ ನೆನಪುಗಳು
ಸೂರ್ಯೋದಯದ ಹೊಂಗಿರಣದಿಂದ
ಅಸ್ತಮದ ಕೊನೆಕಿರಣದವರೆಗು
ಹುಡುಕುವೆಮುಂಜಾನೆಯ ಮೌನದಲಿ
ಕಾಲದ ಓಟದಲಿ
ನೆರಳಲಿ ಕಲಸಿ ಹೋಗಿರಬಹುದಾದ
ನಿನ್ನ ಮೊಗವ

.

ತಂಪಾಗಿದೆ ಭೂಮಿ
ಮದ್ಯಾಹ್ನದ ಹಗಲಿನಲೂ
ಸೇರಿದ ಕ್ಷಣಗಳ
ಸ್ಪರ್ಶದ ಬಿಸಿ ಆರಿಹೋಗಿ
ಹಳೆಯದಾಗಿದೆ
ನಿನ್ನ ನಗು ತೇಲಿ ಹೋಗಿದೆ
ಬೀಸಿದ ತಂಗಾಳಿಯಲಿ
ಆ ಕ್ಷಣದ ಪಿಸುಮಾತುಗಳೀಗ
ಅಶಾಂತಿಯ ಸೃಷ್ಠಿಸಿವೆ
ಹೃದಯದೊಳಗೆ

ಹಚ್ಚುತಿದ್ದಂತೆ ಹಣತೆಗಳ
ಮುಗಿದ ಹಗಲಿಗೆ
ಕಪ್ಪು ಮೆತ್ತಿಕೊಂಡ ಭೂಮಿ
ಮೌನಿಯಾಗಿದೆ
ಉರುಳಿಹೋಗುವುದು ಮತ್ತೊಂದು
ಇರುಳುನೀನಿರದೆಯೇ
ಮತ್ತೆ  ರಾತ್ರಿಯಿಡಿ  ಅರಸುತ್ತೇನೆ
ನಕ್ತ್ರತ್ರಗಳಲಿರಬಹುದಾದ ನಿನ್ನ
ಬೆಳಕಿರದ ಬಿಳಿಚಿಕೊಂಡ ಆಕಾಶವೋ
ಖಾಲಿಖಾಲಿ

ಹಂಬಲಿಸುವುದುಂಟು ಹೃದಯ
ಪ್ರತಿ ಚಣವೂ ನಿನಗಾಗಿ
ಬೇಡವಾದರೂ ನಿನಗೆ ನಾನು
ಅತ್ಯಾಪ್ತ ನೀನೆನಗೆ
ನೀ ಬಿಟ್ಟುಹೋದ
ಮೌನ,ಪಿಸುಮಾತು
ಕಣ್ಣೀರ ಹನಿಗಳಲಿ
ಕಾದಿರುವೆ ನೀ ಹಿಂದಿರುಗುವ‌
ನಿರೀಕ್ಷೆ ಹೊತ್ತು

————————-

Leave a Reply

Back To Top