ಹಮೀದಾಬೇಗಂದೇಸಾಯಿ ಅವರಕವಿತೆ,ಭಾಗ್ಯವಂತೆ

ಕರುಳಬಂಧ
ಈ ಕಂದನ ಸಂಬಂಧ..
ಅದೇನು ಮಮತೆ ನನಗೆ
ನಾನೇನೂ ಹೆತ್ತಿಲ್ಲ ಇವನನು..
ನನ್ನ ವಂಶದ ಕುಡಿಯ ಕುಡಿ ಇವನು
ನನ್ನ ಉಡಿಯಲಿಂದು ,
ಅದೇ ಕರುಳ ಬಳ್ಳಿಯ ಚಿಗುರು…

ಹೊತ್ತು ಹೆತ್ತು ,
ಮುಚ್ಚಿ ತುತ್ತು ಹಾಕಿ,
ಬೆಳೆಸಿದ ಮಗ ಇಂದು
ಪರಕೀಯನಾದ..
ಅವನ ಸಂಸಾರದಿ
ಅವನಿರಲಿ ಸುಖಿ ;
ನನಗದೇ ಸಮಾಧಾನ…

ಕಂದ ನೀ ಬಂದೆಯಲ್ಲ
ಖಾಲಿಯಾದ ನನ್ನ
ಮಡಿಲು ತುಂಬಲು..
ಮಗನಿಗೆ ತುತ್ತಿಟ್ಟ ಕೈ
ಮೊಮ್ಮಗನಿಗೆ ರವಾನೆ..!

ದೇವನ ಲೀಲೆ ಅಪಾರ ನೋಡು
ನನಗಾಗಿ ಅವನು ಕಳಿಸಿದ
ದೇವದೂತ ನೀನು ;
ನಿನಗೆ ತುತ್ತನಿಡುವ
ಭಾಗ್ಯವಂತೆ ನಾನು…


Leave a Reply

Back To Top