ಸವಿತಾ ದೇಶಮುಖ ಅವರ ಕವಿತೆ-ಮರುಕಳಿಸುತ್ತಿರುವುದು ನೆನಪು

ಮತ್ತೆ ಮರಳಿ ಮರಳಿ
ಮರುಕಳಿಸುತ್ತಿಹುದು
ನಿನ್ನ ನೆನಹುಗಳು
ಸುತ್ತಿ ಸುಳಿದ ಸುಳಿಗೆ
ಸಿಲುಕಿ ಒದ್ದಾಡುತಿಹುದು
ಹೃದಯ ಅಂತರಾಳದ
ಮಿಗಿಲು ನಿನ್ನ ಮಾತುಗಳು

ಮುಗಿಲಿಗೆ ಅಟ್ಟವ ಕಟ್ಟಿ
ರನ್ನ ಚಿನ್ನ ಬೆಳ್ಳಿ ರತ್ನ,
ಮುಗಿಲ ಮಲ್ಲಿಗೆ
ಹೋಲಿಸಿ -ಮನ ರಮಿಸಿ ,
ಆಕಾಶದ ಚಂದ್ರ ತಾರೆಯ
ಸಜ್ಜನಿಕೆಯ ನಿಡಿ ಉಪಮೆಯ

ಬೆಟ್ಟಗಳ ಎತ್ತರಕ್ಕೆ ಹರಡಿ
ಕನಸುಗಳ ಹಂದರದ ಹಚ್ಚಡವ.,
ನೀ ತೋರಿದ ಪಥವು ಎನಾತ್ಮನ
ಒಡೆಯನ ಆಜ್ಞೆಯಂತೆ
ದಿಟವೆಂಬ ನಂಬಿದ ಘಳಿಗೆಗಳು
ಪ್ರೀತಿ ಪ್ರೇಮ ಸೌರಭದ ….

ನೆನಪುಗಳು ಮತ್ತೆ ಮತ್ತೆ
ಮರುಕಳಿಸುತ್ತಿಹವು….


One thought on “ಸವಿತಾ ದೇಶಮುಖ ಅವರ ಕವಿತೆ-ಮರುಕಳಿಸುತ್ತಿರುವುದು ನೆನಪು

Leave a Reply

Back To Top