ಕಾವ್ಯ ಸಂಗಾತಿ
ಭೋವಿ ರಾಮಚಂದ್ರ
ಛಿದ್ರಗೊಂಡ ಕಂದಮ್ಮ !
ಕಣ್ಣುಗಳು ಬಾಡಿವೆ
ನೆತ್ತರು ಚೆಲ್ಲಿದೆ
ಕತ್ತು ಉಸಿರಾಡುತ್ತಿದೆ
ನಾಲಿಗೆ ಬೆದರಿದೆ
ಮುಖ ಗಾಯಗೊಂಡಿದೆ
ಎರಡು ಮೂರು ಕಂದಮ್ಮರ ಆತ್ಮ ಹೋರಾಡುತ್ತಿವೆ
ಛಿದ್ರಗೊಂಡ ದೇಹ ಸೇರಲು.
ಚಿಗುರಿದ ಎಲೆಗಳು
ಹೆದರಿದ ಕಣ್ಣುಗಳು
ಹಾಡಿ ನಲಿಯುತ್ತಾ
ಕುಣಿದು ಕುಪ್ಪಳಿಸುತ್ತಾ
ಏಕತೆಯ ಸಾರಾಂಶ ಸಾರುತ್ತಾ
ಕುಳಿತ ಜೀವಗಳ ದೇಹ ಒಮ್ಮೆಲೆ ಛಿದ್ರವಾಯಿತು .
ಕಲಿಯುತ್ತಿರುವ ಮಕ್ಕಳು
ಯಾವುದೋ ಮಾಯದ ನಿದ್ದೆಗೆ ಜಾರಿದರು
ನಿದ್ದೆಯ ಮಬ್ಬಿನಲ್ಲಿ ಜೀವ ತ್ಯಜಿಸಿದರು ,
ಮುಗಿಲು ಆಕ್ರಂದನದ ಜೋಳಿಗೆಯಾಯಿತು ,
ಬಿದ್ದ ನಿಷ್ಕಲ್ಮಶ ದೇಹ
ಜೋಗುಳದ ಶೋಕಕ್ಕೆ
ಮರಳಿ ಎಚ್ಚರಗೊಳ್ಳಲಿಲ್ಲ .
ಬಸ್ಸಿನ ಒಳ ಆಸನ
ಹತ್ತಾರು ಜೀವಗಳಿಗೆ ತೋರಿಸಿತು ಮಸಣ
ಚಿಗರಬೇಕಿದ್ದ ಕಂದಮ್ಮ
ಕೈ ಕಾಲು ಕತ್ತರಿಸಿಕೊಂಡು
ಆಕಾರಕ್ಕಾಗಿ ಹುಡುಕುತ್ತಿದೆ .
ಶಾಲೆಯ ಪುಸ್ತಕ ಹೊತ್ತ ತಲೆ
ಬದುಕಿನ ಜಂಜಾಟದ ಚಕ್ರದಲ್ಲಿ ಸಿಲುಕಿತು ,
ಎರಡು ಕೈಯಿಗಳು
ಎರಡು ಕಣ್ಣುಗಳು
ಎರಡು ಕಾಲುಗಳು
ಊರನ್ನೇ ಮಸಣವಾಗಿಸಿ
ಸಾವಿರಾರು ಜೀವಗಳನ್ನು ನುಂಗಿದೆ.
ಭೋವಿ ರಾಮಚಂದ್ರ