ಕಾವ್ಯ ಸಂಗಾತಿ
ಸುಜಾತಾ ರವೀಶ್
ಶಿಕ್ಷಕ

ಅಕ್ಷರದ ತಿಳಿವದನು
ಲಕ್ಷದಲಿ ಕಲಿಸುತಲಿ
ಕಕ್ಷೆಯಲಿ ಕಾಪಿಡುತ ನೋಡಿದವರು
ಚಕ್ಷುವಿನ ಮಣಿಯಂತೆ
ರಕ್ಷಿಸುವ ರೀತಿಯಲಿ
ಯಕ್ಷಿಣಿಯ ತೇಜವನು ನೀಡಿದವರು
ಅಕ್ಕರದ ಸವಿಯದನು
ಸಕ್ಕರೆಯ ಸಿಹಿಯವೊಲು
ಪಕ್ಕದಲಿ ಕುಳ್ಳಿರಿಸಿ ಕಲಿಸಿದವರು
ಮಿಕ್ಕವರು ಹೇಳಿದರು
ಲೆಕ್ಕಿಸದೆ ನೀತಿಯನು
ಚೊಕ್ಕದಲಿ ಮತಿಯೊಳಗೆ ತುಂಬಿದವರು
ಅರಿವಿರದಬೋಧರನು
ಗುರಿಯೆಡೆಗೆ ಕರೆದೊಯ್ದ
ಗುರುಗಳಿಗೆ ವಂದಿಸುವೆನಭಿಮಾನದಿ
ಅರಿವಿರದ ವೇಳೆಯಲಿ
ಕೊರತೆಯನು ತೋರದೆಲೆ
ಪರಿವಿಡಿದ ಬೋಧಕರಿಗಭಿವಂದನೆ.
ಸುಜಾತಾ ರವೀಶ್

Nice good
ಬಹಳ ಸುಂದರ
ತುಂಬಾ ಚೆನ್ನಾಗಿ ಬರೆದಿದ್ದೀರಿ
ಅನು ಸಕ್ರೋಜಿ ಪುಣೆ