ಭಾರತಿ ಅಶೋಕ್ ಅವರ ಕವಿತೆ-ಕವಿಯೆಂದುಕರೆದರೆ

 ನನಗೆ ಇರುಸುಮುರುಸಾಗುತ್ತೆ
ಯಾರಾದರು ನನ್ನನ್ನು ಕವಿ ಎಂದಾಗ

ಅವರು ಹಾಗೆ ಹೇಳುವಾಗ
ನನ್ನಿಂದ ಒಂದೇ ಒಂದು ಸಾಲು, ಹೋಗಲಿ ಒಂದು ಪದವನ್ನಾದರೂ  ಬರೆಯಲಾಗದು ಹಾಗಾದಾಗಲೆಲ್ಲ
ನಾನು ಮುಜುಗರಕ್ಕೊಳಗಾಗುತ್ತೇನೆ.

ಮತ್ತೆ ಯೋಚಿಸುತ್ತೇನೆ ಯಾರಾದರು ಯಾಕೆ ನನ್ನನ್ನು ಹಾಗೆ ಕರೆಯುತ್ತಾರೆಂದು
ಅದ್ಬುತವಲ್ಲದಿದ್ದರೂ ತಕ್ಕ ಮಟ್ಟಿಗೆ ಏನೋ ಬರೆಯುತ್ತೇನೆ ಅ ಕಾರಣ
ಇದು ಎಂದು ಅನ್ನಿಸುತ್ತದೆ

ಆದರೆ….
ಆದರೆ ಕೊನೆ ಪಕ್ಷ ಕವಿ ಎಂದು ಖಾತರಿಪಡಿಸಿಕೊಳ್ಳಲಾದರೂ
ಎನೋ ಬರೆಯಲು ತೊಡಗುತ್ತೇನೆ. ಊಹುಂ ಏನೆಂದರೆ ಎನೂ ತೋಚುವುದಿಲ್ಲ. ಮತ್ತೆ ನಾನು ಏನೊ ಬರೆದಿದ್ದೇನೆ ಈ ಹಿಂದೆ ಅವನ್ನು ಬರೆದವಳು ನಾನೆ

ಒಹೋ…
ಹೀಗಿರಬಹುದು
ನಾನು ಫುಲ್ ಟೈಮ್ ಕವಿ ಆಗಿರಲಿಕ್ಕಿಲ್ಲ. ಹಾಗೆಂದರೇನೋ ಗೊತ್ತಿಲ್ಲ

ಹೊತ್ತಲ್ಲದ ಹೊತ್ತಿನಲ್ಲಿ ಅದೇನನ್ನೋ ಬರೆಯುತ್ತೇನೆ ಯೋಚಿಸಿಯೇ ಇರುವುದಿಲ್ಲ.
ಬರೆದು ಮುಗಿಸಿದ‌ ಮೇಲೆ ಯಾವೊಂದು ಶಬುದವು ನೆನಪಿರುವುದಿಲ್ಲ.

ಈಗ ಹೇಳಿ ನೀವು ನನ್ನ ಕವಿ ಎನ್ನುವಿರೋ
ಖಂಡಿತ ಇಲ್ಲ ಬಿಡಿ
ಯಾಕೆಂದರೆ ನನ್ನೊಳಗೆ ಅಂತಹ ಯಾವ ಕುರುಹುಗಳು ಸ್ವತಃ ನನಗೆ ತೋಚುತ್ತಿಲ್ಲ.

ಅದಕೆ ನನಗೆ
ಯಾರಾದರು ಕವಿ ಎಂದರೆ ನನಗೆ ಇರುಸು ಮುರುಸಾಗುತ್ತದೆ.


One thought on “ಭಾರತಿ ಅಶೋಕ್ ಅವರ ಕವಿತೆ-ಕವಿಯೆಂದುಕರೆದರೆ

  1. ಸುಪರ್ಬ್,ಕವಿಯಲ್ಲದ ಕವಿಗಳ ಕಾತುರತೆಯ ಕಿವಿಮಾತು ಕುಚುಗಳಿ ಕೂತೂಹಲದ ಕವಿತೆ,

    ಮಸ್ತ್ ಮಸ್ತ್ ಮೇಡಂ

Leave a Reply

Back To Top