ಕಾವ್ಯ ಸಂಗಾತಿ
ಸವಿತಾ ದೇಶಮುಖ ಅವರ ಕವಿತೆ-
ನಿನ್ನ ಇರುವಿಕೆಯ
ಜಗವೆಲ್ಲ ನಿನ್ನ ಇರುವಿಕೆಯ
ಧ್ಯಾಸದಲಿ , ಅವಿರತ ವರ್ಣಿಪರು
ಹಾಡಿ ಹೊಗಳಿಹರು ಭಕ್ತಿಯ
ಭಾವದಲಿ,ಜವನದ ಕತ್ತಲೆಯ
ಕಳೆಯುವೆಂಬ ನಂಬಿಕೆಯಲಿ.
ನಿನ್ನ ವಾಸಕೆ ಕಟ್ಟಿ ಭವ್ಯಗುಡಿ
ಗುಂಡರವ -ಮೆರೆಸುವರು
ಹೊತ್ತು ಪಲ್ಲಕ್ಕಿ ತೇರವ ಎಳೆದು
ಭಕ್ತಿ ಭಾವದಿ ಧ್ಯಾನಿಪರು,
ಯಾಗ -ಯಜ್ಞ, ತಪವಾಸ ಮಾಡಿಪರು
ಕೋಟಿ ಕೋಟಿ ಜನಜಂಗುಳಿಯ
ಹೃದಯವಿಂದರಾನೆ ನೀನು..,
ನಿನ್ನ ಹೆಸರಿನಲ್ಲಿ ನಡೆಯುತ್ತಿದೆ
ಬಲತ್ಕಾರ, ಕೊಲೆ- ಸುಲಿಗೆ
ದೈವ ದುರ್ವಿಲಾಸದಲಿ….
ಅಸಂಖ್ಯಾತರು ತೆತ್ತರು ಬಲಿದಾನ
ಅನಾಥ ದೀನ ಪ್ರಜ್ಞೆಯಲಿ
ಕಣಕಣದಲು ತುಂಬಿದೆ ನಿನಗೆ,
ಕಾಣದಾಯಿತೆ- ಕೇಳದಾಯಿತೆ
ಅಸಾಯಕ ಅಮಾಯಕರ ಆಕ್ರಂದನ
ಎಲ್ಲೆಲ್ಲೂ ನಿನ್ನ ವಾಸದ ಭಾಸ
ನಿನ್ನ ಇರುವಿಕೆವು ಸತ್ಯವೋ
ಮಿತ್ಯಯೋ ಒಂದು ಕಾಣದಾದೆ
ದೈವದ ದೈವ- ದೇವಾ ನೀನೇನಾ..
ದೈವ ಸತ್ಯವೋ ದೇವ ಸತ್ಯವೋ
ಎನಿತು ಅರೆಯಲಿ ದೇವನ ಮರ್ಮ…
ಸವಿತಾ ದೇಶಮುಖ
ಚೆಂದದ ಸಾಲುಗಳು ದೇವರ ಇರುವಿಕೆಯ ಪ್ರಶ್ನೆ
Sripad Algudkar ✍️
Thanku you