ಹೆಚ್.ಎಸ್.ಪ್ರತಿಮಾ ಹಾಸನ್ ಅವರ ಕವಿತೆ-ಕಾಮುಕರ ಅಟ್ಟಹಾಸ ಮೀರುತಿರಲು

ತನ್ನ ಪಾಡಿಗೆ ತಾವು ಇರಲು ಬಿಡದವರು
 ನಾಟಕವಾಡುತ ಬಳಿಗೆ ಬರುವವರು
 ಬೇಕು ಬೇಡವ ಕೇಳುತ ನಿಲ್ಲುವರು  
 ಸನಿಹದಲ್ಲೇ ಇದ್ದೆ ಚೂರಿ ಹಾಕುವರು…..

 ಹೆಣ್ಣು ಮಕ್ಕಳಿಗೆ ಕಣ್ಣು ಎಂದು ಹೇಳುವರು
 ಅವರ ಅಕ್ಕತಂಗಿರಂತೆ  ನೆನೆಯದವರು
 ತಮ್ಮ ಮಗಳು ಹೆಣ್ಣು ಎಂಬುದ ಮರೆತವರು
 ತನ್ನ ಸ್ವಾರ್ಥಕ್ಕೆ ಹೆಣ್ಣ ಬಳಸಿಕೊಳ್ಳುವವರು…..

 ಕಾಮುಕರ ಅಟ್ಟಹಾಸ ಮೀರುತಿರಲು
 ಬದುಕುವುದು  ಯಾವಾಗ ಹೆಣ್ಣು ಮಗಳು
 ಸುಳ್ಳು ಆಣೆಗಳ ಭರವಸೆಯ ನೀಡುತಿಹರು
 ಚಂದದಲೇ ನಾಟಕವಾಡುವವರು….

 ಮರಳು ಮಾತಿನಲಿ  ಸೆಳೆಯುತಿಹರು
 ಸ್ವಾರ್ಥ ಮುಗಿದ ನಂತರ ಕೈ ಬಿಡುವವರು
 ಪಾಪಕರ್ಮಗಳ ನೆನೆಯದವರು
 ಕೊನೆಗಾಲದಲಿ  ನರಳುವವರು….

 ಅವರ ಹೆಣ್ಣು ಮಕ್ಕಳಿಗೆ ಆ ಪರಿಸ್ಥಿತಿ ಬರದಿರಲಿ
 ಮಾಡುವ ಪಾಪ ಮಾಡಿದವರೇ ಅನುಭವಿಸಲಿ
 ಕಂಡವರ ಹೆಣ್ಣು ಮಕ್ಕಳೆಂದು ಶಪಿಸದಿರಲಿ.
 ಎಲ್ಲಾ ಹೆಣ್ಣನ್ನು ನಮ್ಮ ಮಕ್ಕಳೆಂದು ನೆನೆಯುತಿರಲಿ ….

ಕೆಟ್ಟ ಆಸೆ ಪಡುತಲಿಹರು
 ದುರಾಸೆಯಲ್ಲಿ ನಡೆಯುತ್ತಿರಹರು
 ಮೀಸೆಯ ಮೇಲೆ ಕೈ ಇಡುತಲಿ
 ತಾ ಗಂಡು ಎಂದು ಕೆಲವರು ಮೆರೆಯುತಿಹರು ……

 ಹೆಣ್ಣಾಗಿ ಹುಟ್ಟಿದ್ದೆ  ತಪ್ಪೇನು ಹೇಳಿ?
 ಬದುಕಲು ಬಿಡದಂತೆ ಮಾಡುತಿಹರಿಲ್ಲಿ  
 ಅವರ ಪಾಡಿಗೆ ಅವರ ಇರಲು ಬಿಡದಲೇ
 ಕಾಮದ ಕಣ್ಣಲ್ಲಿ ನುಂಗುತಿಹರಿಲ್ಲಿ

 ಜಗದಲಿ  ಕಷ್ಟ ಸುಖವರಿತವರಿಲ್ಲವೇನು?
 ಮಾತಿಗಾಗಿ ಹೆಣ್ಣು ರಕ್ಷಣೆ ಮಾಡೆನುವರಿಲ್ಲಿ
 ಅರಿಯದೆ ಬಾಳಿದರೆ ಕೊನೆಗೊಂದು ಕಾಲ
 ಅವರ ಹೆಣ್ಣು ಮಕ್ಕಳೇ ಬಲಿಯಾಗುವರು
ಇದು ಕಲಿಗಾಲ …


Leave a Reply

Back To Top