‘ಅಕ್ಷರ ಲೋಕದ ಭವಿಷ್ಯ ಬರಹ’ ಒಂದು ಚಿಂತನೆ-ರಾಜು ನಾಯ್ಕ’

ಅಕ್ಷರ ಲೋಕದ ಅವೈಜ್ಞಾನಿಕ ಸಿದ್ದಾಂತಗಳು ಅಕ್ಷರಶಃ ನಿರಾಶೆ ತಂದಿದೆ ಎಲ್ಲಿ ನೋಡಿದರು ಸಾಹಿತ್ಯ ಬರಹದ ಜಾತ್ರೆ. ಖುಷಿಯಿಂದ ಅಲ್ಲಿ ಇಳಿದರೆ ಅದೇ ಕೆರೆಯ ನೀರನ್ನು ಅಲ್ಲೇ ಚೆಲ್ಲಿದ್ದು ಕಾಣುತ್ತದೆ.ಪ್ರಾಕೃತಿಕ ಅಥವಾ ವೈಜ್ಞಾನಿಕ ಬದಲಾವಣೆಗೆ ತಕ್ಕಂತೆ ಮಾನಸಿಕ ಬದಲಾವಣೆಯನ್ನು ನಾವು ಕಂಡುಕೊಳ್ಳುತ್ತಿಲ್ಲ.. ಆಗೆಲ್ಲ ಟಿ.ಪಿ.ಕೈಲಾಸಂರವರ ಟೊಳ್ಳು ಗಟ್ಟಿ ನಾಟಕ ನೆನಪಾಗುತ್ತದೆ. ನಾವೆಲ್ಲ ಟೊಳ್ಳನ್ನೇ ಗಟ್ಟಿಯೆಂದು ನಂಬಿ ಕುಳಿತವರು..ಭಾಷಣದಲ್ಲಿ ಭೀಷಣವಾದ ವಾಗ್ಝರಿ ಹರಿಸುವ ನಾವು ಆಚರಣೆಯಲ್ಲಿ ಝೀರೋ ಸಾಧಕರು..ಉಳಿಸಬೇಕು?ಏನನ್ನು ಉಳಿಸಬೇಕು?ಎಂಬ ಚಿಂತನೆ ತಲೆಗೆ ಬಂದಾಗ ಬಹುತೇಕರಿಗೆ ನನ್ನ ಹೆಸರನ್ನು ಉಳಿಸಬೇಕು. ಏನಾದರು ಬರೆದು ಒಂದೆರಡು ಪುಸ್ತಕ ಮಾಡಿ ಗ್ರಂಥಾಲಯದಲ್ಲಿ ಕೊಟ್ಟು ನನ್ನ ಅಳಿವಿನ ನಂತರ ನನ್ನ ಉಳುವಿಕೆಯ ಗುರುತಿನ ಕುರುಹು ಇದಾದರೂ ಸಾಕು, ಅಲ್ಲಿಗೆ ನನ್ನ ಹೆಜ್ಜೆ ಗುರುತು ಸಮಾಜದ ಪಥದಲ್ಲಿ ಮೂಡಿಸಿದಂತಾಯಿತು ಎಂಬ ಹೆಮ್ಮೆಗೋ ಹಪಾಹಪಿಗೋ ಒಳಗಾಗಿ ಬಿಡುತ್ತೇವೆ ಜೀವನ ಸಾರ್ಥಕವಾಯಿತೆಂಬ ಉಸಿರನ್ನು ಎಳೆದುಕೊಂಡು ಪಕ್ಕಾ ಬುದ್ಧನಂತೆ ಮೌನದ ಕೌದಿ ಹೊದ್ದು ಕುಳಿತರಾಯಿತು.ಅಲ್ಲಿಗೆ ಜನ್ಮ ಪಾವನ!!.

ಈ ಬದಲಾಗುವ ವೈಜ್ಞಾನಿಕ ಆವಿಷ್ಕಾರದ ಯಾಂತ್ರಿಕ ಯುಗದಲ್ಲಿ ಉದಯಿಸಿ ಬರುವ ಮುಂದಿನ ತಲೆಮಾರಿನ ಪೀಳಿಗೆ, ಇಂದು ನಾವು ಬರೆದ ಸಾಹಿತ್ಯವನ್ನು ಮೆಚ್ಚಬಹುದೇ? ಈ ಪ್ರಶ್ನೆ ನಮ್ಮನ್ನು ಕಾಡುತ್ತಿಲ್ಲವೇಕೆ?ಯಾವ ಸಂದೇಶವನ್ನು,ಯಾವ ಬೋಧನೆಯನ್ನು ಅವರಿಗಾಗಿ ಉಳಿಸಲು ಸಾಧ್ಯ ನಮ್ಮಿಂದ? ಯಾಕೆಂದರೆ ತಮ್ಮ ತಾಂತ್ರಿಕಜ್ಞಾನ ಬೆಳವಣಿಗೆ,ನ್ಯಾನೋ ವಿಕಲೆಗಳಲ್ಲಿ( ಸೆಂಕೆಂದು) ಬೆಳವಣಿಗೆಯಾಗುತ್ತಿದೆ.. ಈಗಾಗಲೇ ಅಂಗೈಯಲ್ಲಿ ಜಗತ್ತು ಬಂದು ಕೂತಿದೆ.. ಮುಂದೇ ವಿಶ್ವ ಬ್ರಹ್ಮಾಂಡದ ವಿಚಾರಗಳೆಲ್ಲ ಕೈಗೆ ಬರಬಹುದು.ಚಂದ್ರಗ್ರಹದಲ್ಲಿ ಮನೆ ಮಾಡಿ ಮಂಗಳ ಗ್ರಹದಲ್ಲಿ ತೋಟ ಮಾಡಿ ಟೈಟಾನ್ ಉಪಗ್ರಹದ ಮೇಲೆ ಗಾಳಿಪಟ ಹಾರಿಸುವ ಕನಸಿನ ಮುಂದಿನ ತಲೆಮಾರಿನವರಿಗೆ ಇಂದಿನ ಸಾಹಿತ್ಯ ಖಂಡಿತ ರುಚಿಸಲಾರದು ..

ಸಂಕೀರ್ಣಗೊಳ್ಳುತ್ತಿರುವ ಬದುಕಿನ ವೇಳೆಯಲ್ಲಿ ಅವರಿಗೆ ಓದುವ ಪುರುಸೊತ್ತು ಇರಲಾರದೇನೋ? ಅವರ ದೃಷ್ಟಿ ಸಾಹಿತ್ಯದ ಪುಸ್ತಕಗಳ ಕಡೆ ಖಂಡಿತ ನೆಟ್ಟಿರಲಾರದು!? ಅವರದೇನೀದ್ದರೂ ವೈಜ್ಞಾನಿಕ ಆವಿಷ್ಕಾರಗಳ ಕಡೆ ದೃಷ್ಟಿ ಇರುತ್ತದೆ..ಆಗ ಅವರ ಕೈಗೆ ನಮ್ಮ ಸಾಹಿತ್ಯ ಪುಸ್ತಕ ಸಿಕ್ಕಿದರೆ ಅವರೇನೆಂದು ಕೊಂಡಾರು? ಓಹೋ! ಫನ್ನಿ!! ಬುಲ್ಶೀಟ್ ಯಾರ್!! *ಎಂಬ ಉದ್ಗಾರ!! ಎಲಿಯನ್ ( ಅನ್ಯಗ್ರಹ ಜೀವಿ) ಳನ್ನು ತಂದು ಬಂಧಿಸಿ ಪಂಜರದಲ್ಲಿಟ್ಟು ಅಥವಾ ಸ್ನೇಹ ಸಂಪಾದಿಸಿ ಅವರಿಂದ ಅನ್ಯಗ್ರಹಗಳ ವೈಜ್ಞಾನಿಕ ಸಂಶೋಧನೆಯನ್ನು ಕಲಿತು ಬೇರೆ ಬೇರೆ ಸೌರವ್ಯೂಹದ ಭೂಮಿಯಲ್ಲಿಯ ಜೀವಿಗಳ ಜೀವನಕ್ರಮ,ಆಚರಣೆ, ಸಂಸ್ಕೃತಿ,ಧರ್ಮ,ಭಾಷೆ ( ಇವೆಲ್ಲ ಅವರಿಗೂ ಇದ್ದರೆ) ಕಲಿತು ತಾವು ಅವರೊಂದಿಗೆ ಸಂವಾದಿಸಿ,ಸಂಬಂಧ ಬೆಳೆಸಿ, ಒಡಂಬಡಿಕೆಯ ಜೀವನದ ಕನಸು ಅಸಾಧ್ಯವೇ?ಅಥವಾ ಮಾನವರು ಅಲ್ಲೂ ಹೋಗಿ,ಸ್ವೇಚ್ಛೆಯ ಹುತ್ತ ಕಟ್ಟಿಕೊಂಡು ತಮ್ಮ ತಮ್ಮ ಲೋಕದ ಸಂಸ್ಕೃತಿಯ ಹಿರಿಮೆ ಬಗ್ಗೆ ಕಾದಾಡಿ ಅಲ್ಲೂ ಕಲಹ ಭೂಮಿ ಸೃಷ್ಟಿಸಬಹುದಾ?

ಸೂರ್ಯ ಕಿರಣಗಳೇ ಸ್ಪರ್ಶಿಸಿದ ತಂತ್ರಜ್ಞಾನದ ಪ್ರಗತಿ ಸಾಧಿಸಿ ಸೂರ್ಯನ ಮೇಲೊಂದು ಹಿಮದ ಮನೆ ಕಟ್ಟಬಹುದಾ? ಇಡಿ ಚಂದ್ರ ಗ್ರಹಕ್ಕೆ ಒಂದು ಮನೆಯ (Lunar house) ಕಟ್ಟಿ ಅಲ್ಲಿಯ ಗುರುತ್ವಾಕರ್ಷಣಾ ಶಕ್ತಿಯನ್ನೇ ಬದಲಾಯಿಸಿ ಸಂಸಾರ ಹೂಡಬಹುದಾ? ತಮ್ಮ ತಂತ್ರಜ್ಞಾನ ಬಲದಿಂದ ಸ್ವರ್ಗ ನರಕಗಳಿಗೆ ಸೇತುವೆ ಕಟ್ಟಬಹುದಾ? ಮುಂದಿನ ಪೀಳಿಗೆಯವರ ಕನಸು,ಮತ್ತು ಸಾಧನೆ ಒಂದೇ ಆಗುವ ರೀತಿಯಲ್ಲಿ ವಿಜ್ಞಾನದ ಆವಿಷ್ಕಾರಗಳು ಬರುತ್ತಿವೆ..ಆ ಆವಿಷ್ಕಾರದ ವೇಗಕ್ಕೆ ತಕ್ಕಂತೆ ನಮ್ಮ ಮನಸು ಬೆಳೆದು ಆ ರೀತಿಯ ಸಾಹಿತ್ಯ ರಚನೆ ನಮ್ಮಿಂದ ಸಾಧ್ಯವೆ? ಹೀಗೆ ಅಕ್ಷರ ಲೋಕದ ಆವಿಷ್ಕಾರದ ಚಿಂತನೆಯ ಭವಿಷ್ಯದ ಬರಹಗಳನ್ನು ಹುಡುಕುತ್ತಿದ್ದೇನೆ..


Leave a Reply

Back To Top