ಮಕ್ಕಳ ಸಂಗಾತಿ
ಎಸ್ ಎಸ್ ಜಿ ಕೊಪ್ಪಳ
ಪರಿಸರ ಪಾಠ
ಸುಂದರ, ಸುಂದರ ಎಂಥ.
ಅದ್ಭುತ ಈ ಪರಿಸರ.
ನಾಳೆಗಳ ಕನಸು
ಹಂಚುವ ಈ ಪರಿಸರ.
ನಮಗೆನೆಮ್ಮದಿನೀಡುವ
ಈ ಜಗವೇ ಸುಂದರ.
ಕಾಡು ಮೇಡು ಗುಡ್ಡ
ಬೆಟ್ಟ ಎಲ್ಲೆಲ್ಲೂ ಹಸಿರು
ಗಿಡ ಮರ ಬಳ್ಳಿಗಳು
ಪಡೆದಿವೆಹೊಸಚಿಗುರು
ಹೊಲ ಗದ್ದೆಪಚ್ಚೆ ಪೈರು
ಹೊಂದಿವೆಹೊಸಉಸಿರು.
ಮರಳಿಬಂದಿದೆಜಗಕೆ
ನವ ಚಕ್ರದ ಆದಿ.
ಮತ್ತೆ ಆರಂಭವಾಗಿದೆ
ನಿಸರ್ಗ ರಮಣೀಯದಿ.
ಹೇಮನುಜ ನೋಡು
ಪ್ರಕೃತಿಯನುಉನ್ಮೇಷದಿ.
ನಾವಾಗಬೇಕಿದೆ
ಕಾಣದ ಕೈಗೆ ಆಭಾರಿಗಳು.
ಪವಾಡವೇ ಇಲ್ಲದಿರೆ.
ನಾವೆಲ್ಲ ನಿರಾಧಾರಿಗಳು
ಆದರೂ ಬಿಟ್ಟಿಲ್ಲ
ನಮ್ಮನ್ನು ಕೊಂಕು ನಡೆಗಳು.
ತಿಳಿದು ಬಾಳಿದರೆ ನಮ್ಮ.
ಬಾಳೆಲ್ಲ ತುಂಬು ಹೂರಣ.
ಇಲ್ಲದಿರೆ ನಾವೆಲ್ಲಾ ಇಲ್ಲಿ.
ಆಗುವೆವು ಶೀರ್ಣಚೂರ್ಣ.
ನಡೆ ಮನುಜ
ಸು -ಮನದಿ ನೀನಾಗಲು ಪೂರ್ಣ.
ಗಿಡ ಮರ ಬಳ್ಳಿಗಳ ತೆರದಿ.
ಮರೆ ನಿನ್ನೆಗಳ ನೋವು.
ಬಿಡುಚಿಂತೆನಾಳೆಯ
ಗಳಿಕೆ ಗಾಗಿಅದೇತಲೆನೋವು.
ಹೊಂದು ನೀ ಹೊಸ.
ಕಾಲಹೊಸ ಹುರುಪು
ಮೀರಿ ನಡೆಯದಿರು.
ಈಜಗದ ನಿಯಮ.
ನಿಯಮವಿದ್ದರೆ ನಿನಗೆ.
ಇರುವುದು ಸಂಯಮ
ನೀತಿ ತಪ್ಪಿ ನಡೆದರೆ ನೀ
ಆಗುವೆಎಲ್ಲರಿಗೂಯಮ.
ಹೆಜ್ಜೆಗೆ ಒಳ್ಳೆಯತನದ.
ಜೊತೆ ಸದಾ ಇರಲಿ.
ಗೆಜ್ಜೆಗೆನಿನಾದಸುನಾದ
ಎಂದೆಂದೂಇರಲಿ.
ಜೀವನ ಚಕ್ರಕ್ಕೆ
ನೀತಿಯೇ ಅನವರತ ಕೀಲಾಗಿರಲಿ.
ಪ್ರೀತಿಯ ನಡೆ ನುಡಿ
ಸದಾಜೊತೆಗಿರಲಿ.
ನಿಸರ್ಗದ ಮಡಿಲಲ್ಲಿ
ಮಗುವಾಗಿಜಗಬೆಳಗಲಿ.
ಸತ್ಯಂ ಶಿವಂ,ಸುಂದರಂ
ನಿತ್ಯ ನಡೆಯಾಗಿರಲಿ.
ಪ್ರಕೃತಿಯು ಪಡೆದಂತೆ.
ಹಳತನ್ನು ಮರೆತು ,
ಹೊಸತರನಿರೀಕ್ಷೆಯಲ್ಲಿ
ಕಾಯಕ ಗೈಯುವಂತೆ,
ಸರ್ವರೊಳಗೊಂದಾಗಿ,
ಜಗದನಗುವಹಾರೈಸು.
ಎಸ್ ಎಸ್ ಜಿ ಕೊಪ್ಪಳ