ಕಾವ್ಯ ಸಂಗಾತಿ
ಪಿ.ವೆಂಕಟಾಚಲಯ್ಯ
ಸಾವಿನ ನಂತರ..
ಸಾವಿನ ನಂತರ, ಏನಿದೆ ಎಂಬುದ,
ಬಲ್ಲವರಾರು? ಹೇಳೊ ಸಖ.
ಹುಟ್ಟಿದ ನಂತರ, ಸಾವಿದೆ ಎಂಬುದ,
ಬಲ್ಲವರೆಲ್ಲ, ಕೇಳೊ ಸಖ.
ಆರು ಊರ್ಮಿಗಳ ,ಪಥದಲಿ ಸಾ ಗುವ,
ದೇಹ ನಮ್ಮದು, ಕೇಳೊ ಸಖ.
ಬಾಲ್ಯವು ಯೌವ್ವನ, ತಪ್ಪದು ಮು ದಿತನ,
ಕೊನೆಗಿದೆ ಮರಣ,- ಕೇಳೊ ಸಖ.
ಬೇಕು-ಬೇಡಗಳ, ಜೇಡರ ಬಲೆಯ ಲ್ಲಿ,
ಸಿಲುಕಿ ನಲುಗಿದೆ, ನೋಡೊ ಸಖ.
ಸುಖ- ದು:ಖಗಳ, ಜಂಜಡದಲ್ಲಿದ್ದ ರು ,
ಬದುಕುವಾಸೆಯ, ಬಿಡದು ಸಖ.
ಅವರವರರ್ಹತೆಯಿಂದವರೇಳಿಗೆ,
ಮತ್ಸರವೇಕೆ? ಹೇಳೊ ಸಖ.
ಭೌತಿಕ ಸಿರಿತನ, ಹಿರಿತನಕ್ಕಿಂತಲು,
ಆತ್ಮದೇಳಿಗೆ, ಮೇಲೋ ಸಖ.
ಪಿ.ವೆಂಕಟಾಚಲಯ್ಯ.
ಸಾವಿನ ಮುಖಗಳ ಸುಂದರ ಕವನ
Sripad Algudkar ✍️