ಪರಿಸರ ಸಂಗಾತಿ
ಐಗೂರು ಮೋಹನ್ ದಾಸ್ ಜಿ.
‘ಕಾವೇರಿ ಮಾತೆಯ
ಪುಣ್ಯಭೂಮಿ
ಮತ್ತೊಂದು ವಯನಾಡುವಾಗುವುದಿಲ್ಲ!’
ನಮ್ಮ ಜಿಲ್ಲೆಯಲ್ಲಿ ಒಂದು ತಿಂಗಳುಗಳಿಂದ ನಿರಂತರವಾಗಿ ಸುರಿಯುತ್ತಿದ್ದ ರಣಮಳೆಗೆ , ಶಾಲಾ ಕಾಲೇಜ್ ಗಳಿಗೆ ಹಲವು ದಿನಗಳಿಂದ ರಜೆ ಇದ್ದ ಕಾರಣ ಮಕ್ಕಳು ಮನೆಯಲ್ಲಿ ‘ಮೊಬೈಲ್’ ಹಿಡಿದುಕೊಂಡು ಬೆಚ್ಚಗೆ ಕಾಲ ಕಳೆಯುತ್ತಿದ್ದರು..! ಆದರೆ ಕಳೆದ ಶುಕ್ರವಾರದಂದು ಶಾಲೆಗಳು ಎಂದಿನಂತೆ ಪ್ರಾರಂಭವಾದಾಗ, ನನ್ನ ಮಗಳು ಅಮೂಲ್ಯ ಸಹ ತುಸು ಸಂಕಟದಿಂದ ಪುಸ್ತಕಗಳನ್ನು ಎತ್ತಿ ಹೊಂಡು, ಸ್ಕೂಲ್ ಬಸ್ ಗಾಗಿ ಕಾಯುತ್ತಾ ನಿಂತಿದ್ದಳು…! ಆಗ ಭಗವಂತನ ಕೃಪೆಗೆ ಸೂರ್ಯ ದೇವ ಮೋಡದ ನಡುವೆಯೂ ಭೂಮಾತೆಯನ್ನು ಇಣುಕಿ ನೋಡುತ್ತಿದ್ದ…!
ಈ ವೇಳೆ ಕೊಡಗಿನ ‘ಧ್ವನಿ’ಯಾಗಿರುವ ‘ಶಕ್ತಿ’ ದಿನಪತ್ರಿಕೆಯನ್ನು ಓದುತ್ತಿದ್ದ ನನ್ನ ಮಗಳು ಬಹಳ ಗಾಬರಿಯಿಂದ ನನ್ನನ್ನು ಕರೆದ್ದಳು.
” ನಮ್ಮ ಊರಿನಲ್ಲಿಯೂ ಮುಂದೆ ಭೂಕುಸಿತವಾಗುತ್ತದೆ..! ನಾವು ಎಲ್ಲಾರು ಮಣ್ಣಿನ ಒಳಗೆ ಸಿಲುಕಿಗೊಳ್ಳಬಹುದು…! ನನಗೆ ಭಯವಾಗುತ್ತಿದೆ …!” ಎಂದು ಹೇಳುತ್ತಾ, ಅಮೂಲ್ಯ ನನ್ನ ಕೈಗೆ ಪತ್ರಿಕೆಯನ್ನು ನೀಡಿದ್ದಳು.ಪತ್ರಿಕೆಯಲ್ಲಿ ಮುಂದೆ ಉಂಟಾಗುವ ‘ಭೂಕುಸಿತ’ ಸಂಭವನೀಯ ಪಟ್ಟಿಯಲ್ಲಿ ನಮ್ಮ ಊರು ಸಹ ಇತ್ತು…! ಜೊತೆಗೆ ನಮ್ಮ ಮನೆಯೂ ನದಿ ತೀರಾದ ಬಳಿಯೇ ಇರುವುದರಿಂದ ‘ವಯನಾಡು’ನ ದುರಂತ ಕಣ್ಣು ಮುಂದೆ ಸುಳಿಯಿತ್ತು.
ವಯನಾಡು ಮತ್ತು ಕೊಡಗು ಗುಡ್ಡಗಾಡು ಪ್ರದೇಶವಾಗಿದ್ದರೂ, ಕೊಡಗಿನ ಕೆಲ ಪ್ರದೇಶಗಳಲ್ಲಿ ಭೂಕುಸಿತ – ಭೂಮಿಯಲ್ಲಿ ಬಿರುಕು ಬಿಟ್ಟಿರುವುದನ್ನು ಕಣ್ಣಿಗೆ ಗೋಚರಿಸಿದ್ದರೂ, ಯಾವುದೇ ಕಾಲದಲ್ಲಿಯೂ ನಮ್ಮ ಕೊಡಗು ಜಿಲ್ಲೆ, ಮತ್ತೊಂದು ‘ವಯನಾಡು’ವಾಗುವುದಿಲ್ಲ…! ಈ ವಿಚಾರವನ್ನು ಬಹಳ ಗಟ್ಟಿ ಧ್ವನಿಯಲ್ಲಿ ‘ನಂಬಿಕೆ’ಯಿಂದ ಹೇಳಬಹುದು…! ಏಕೆಂದರೆ ನಮ್ಮ ಕೊಡಗು ಜಿಲ್ಲೆ ಕೇವಲ ‘ಕಾಫಿ’ನಾಡಿನ ಭೂಮಿಯಲ್ಲ…! ಕಾವೇರಿ ಮಾತೆಯ ಪುಣ್ಯಭೂಮಿ…. ಈ ಪುಣ್ಯಭೂಮಿಯಲ್ಲಿ ಭಗವಂತ ಯಾವುದೇ ಕಾಲದಲ್ಲಿಯೂ ಜನತೆಯನ್ನು ಕಣ್ಣೀರಿನಲ್ಲಿ ಕೈ ತೊಳೆಯುವಂತಹ ಪರಿಸ್ಥಿತಿಯನ್ನು ಸೃಷ್ಟಿ ಮಾಡುವುದಿಲ್ಲ.!.
ಈ ‘ನಗ್ನ ಸತ್ಯ’ವನ್ನು ಮಗಳ ಬಳಿ ಬಿಡಿಸಿ ಹೇಳಿದಾಗ, ಅವಳು ನಗು ಮುಖದಲ್ಲಿಯೇ ಎಂದಿನಂತೆ ಬಸ್ ಏರಿ, ಶಾಲೆಗೆ ಹೋದ್ದಳು…! ಆದರೆ ಅಂದು ಸುಮಾರು ಹನ್ನೊಂದು ಗಂಟೆಯಿಂದ ‘ಸಿಕ್ಸ್ – ಫೋರ್’ ಬಾರಿಸುತ್ತಾ, ಒಂದೇ ಸಮ್ಮನೆ ಮಳೆ ಸುರಿಯಲು ಪ್ರಾರಂಭಿಸಿದಾಗ, ಮನಸ್ಸಿನ ಒಂದು ಮೂಲೆಯಲ್ಲಿ ಭಯ ಶುರುವಾಯಿತ್ತು…!
ಈ ಹಿಂದೆ ಕೊಡಗಿನಲ್ಲಿ ಹೆಚ್ಖು ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದರೂ, ಯಾವುದೇ ಹೆಚ್ಚಿನ ಅನಾಹುತಗಳು ಉಂಟಾಗುತ್ತಿರಲಿಲ್ಲ…! ಮಳೆಗಾಲದಲ್ಲಿ ಗಾಳಿಗೆ ಮರಗಳು ಉರುಳಿ ಬಿದ್ದು, ಸಣ್ಣ-ಪುಟ್ಟ ಅನಾಹುತಗಳು ಸಂಭವಿಸುವುದು ಸಹಜ…! ಆದರೆ ಇಂದಿನ ರೀತಿ ದೇವರುಗಳಲ್ಲಿಯೇ ಇರುವ ಸರ್ವ
‘ನಂಬಿಕೆ’ಗಳನ್ನು ಕಳೆದುಕೊಳ್ಳುವ ರೀತಿಯಲ್ಲಿ ಯಾವುದೇ ದುರಂತಗಳು ಸೃಷ್ಟಿಯಾಗುತ್ತಿರಲಿಲ್ಲ !
ಆದರೆ ಈಗ ಮಳೆ ಸುರಿಯಲು ಪ್ರಾರಂಭಿಸುತ್ತಿದ್ದಂತೆ, ಮುಂದಿನ ಸಮಸ್ಯೆಗಳ ಸರಮಾಲೆಗಳನ್ನು ಯೋಚಿಸಿ ಮನಸ್ಸು ‘ಮೌನ’ವಾಗುತ್ತದೆ…! ಚಿಂತೆಗಳಿಗೆ ಬಿಡುವೇ ಇರುವುದಿಲ್ಲ..! ಮುಂದಿನ ಭವಿಷ್ಯ ‘ಕತ್ತಲೆ’ಯಲ್ಲಿ ಮುಳುಗಿ ಬಿಡುತ್ತದೆ…!
ಇತ್ತೀಚಿನ ವರ್ಷಗಳಿಂದ ಈ ಭೂಮಿಯಲ್ಲಿ ನಡೆಯುತ್ತಿರುವ ‘ದುರಂತ’ಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದರೇ, ಮನುಜ ಜನ್ಮಗಳಿಗೆ ಭೂಮಿಯಲ್ಲಿ ಇನ್ನೂ ಹೆಚ್ಚಿನ ಗ್ಯಾರಂಟಿಯೇ ಇಲ್ಲ…! ನೀರಿನ ಮೇಲೆ ಇರುವ ‘ಗುಳ್ಳೆ’ ರೀತಿ ಬದುಕು..!ಭವಿಷ್ಯದಲ್ಲಿ ‘ನಾಳೆ ‘ ಎಂಬ ದಿನವೇ ಇಲ್ಲ..!ರಾತ್ರಿ ನಿದ್ರಿಸಿದ ‘ಜೀವ’ ಬೆಳಿಗ್ಗೆ ಎದ್ದೇಳುವ ಖಚಿತವೇ ಇಲ್ಲ…!ಹಣ -ಸಂಪತ್ತು-ಸೌಂದರ್ಯ ಯಾವುದೇ ಕ್ಷಣ ಗಾಳಿ… ಬೆಳಕು… ನೀರುಗಳ ಕೆಟ್ಟ ದೃಷ್ಟಿಗೆ ಸಿಲುಕಿದ್ದರೇ, ಭೂಮಾತೆ ಎಲ್ಲಾವನ್ನು ನುಂಗಿ ನೀರು ಕುಡಿದು ಬಿಡುತ್ತದೆ…! ನಂತರ ಈ ಸುಂದರ ಭೂಮಿ ‘ ಮಸಣ’ವಾಗಿ ಬಿಡುತ್ತದೆ…!
ಈ ಸಮಯ ನಾವು ಎಲ್ಲಾರು ಒಂದು ಪ್ರಶ್ನೆಯನ್ನು ಮನದಲ್ಲಿ ಕೇಳಲೇ ಬೇಕು..! ಈ ದುರಂತಗಳಿಗೆ ಕಾರಣ ಯಾರು…? ಭಗವಂತನಾ…? ಅಥವಾ ಮನುಜ ಜನ್ಮಗಳಾ….?
ಆ ನಿಮಿಷ ಎರಡು ಉತ್ತರ ಮನಸ್ಸು ಹೇಳಬಹುದು…! ಆದರೂ ಭಗವಂತನ ನ್ಯಾಯದ ‘ತಕ್ಕಡಿ’ಯಲ್ಲಿ
ಪಾಪ-ಪುಣ್ಯದ ಲೆಕ್ಕಚಾರ ಮಾಡದೇ, ದುರಂತಗಳ ವೇಳೆ ಸರ್ವರಿಗೂ ಏಕರೀತಿಯ ಶಿಕ್ಷೆಗಳನ್ನು ನೀಡಿದ್ದರೂ, ಮುಂದಿನ ದಿನಗಳಲ್ಲಿ ನಾವು ಮೊದಲು ಬದಲಾಗೋಣ…! ನಮ್ಮ ತಪ್ಪುಗಳನ್ನು ಈ ದುರಂತ ಪಾಠಗಳಿಂದ ಅಥ೯ ಮಾಡಿಕೊಂಡು, ತಿದ್ದಿಕೊಳ್ಳಲೇಬೇಕು….!
ಈ ಭೂಮಿಯಲ್ಲಿ ‘ಮನುಜ ‘ಜನ್ಮದಲ್ಲಿ ಹುಟ್ಟಲು, ಹಲವು ಜನ್ಮಗಳ ಪುಣ್ಯ ಮಾಡಿರಬೇಕು…!ಆದರಿಂದ ಭೂಮಾತೆಗೆ ಯಾವುದೇ ರೀತಿಯಲ್ಲಿಯೂ ನೋವು ಮಾಡದೇ, ಮನದ ‘ದುರಾಸೆ’ಗಳಿಗೆ ಮಣ್ಣಿನ ಸಂಪತ್ತುಗಳನ್ನು ನಾಶ ಮಾಡದೇ, ಮನುಷ್ಯರು ಬದುಕಲು ಕಲಿಯಬೇಕು…! ಆಗ ಭೂಮಿಯೂ ಶಾಂತವಾಗಿರುತ್ತದೆ….! ಮನುಷ್ಯರು ಸುಖ-ಶಾಂತಿ – ನೆಮ್ಮದಿಯಿಂದ ಬದುಕುವ ದಿನಗಳು ಬರುತ್ತದೆ…!!
ಐಗೂರು ಮೋಹನ್ ದಾಸ್, ಜಿ.