ಕಾವ್ಯ ಸಂಗಾತಿ
ರೇಷ್ಮಾ ಕಂದಕೂರ
ಮಳೆಗೆ ಕಾಯುತ್ತೇನೆ
ಕನಸು ಹೊತ್ತ ಕಂಗಳಲಿ
ಮನದ ಹದಕೆ
ನನಸಿಗಾಗಿ ಹಾತೊರೆದು
ಭರವಸೆಯ ಬೀಜ ಬಿತ್ತಿ.
ಬರಡು ನೆಲಕೆ
ಕೊರಡು ಮನಕೆ
ಬುರುಡೆ ಪುರಾಣ ಬಿಟ್ಟು
ವಾಸ್ತವದ ನೆಲೆಗಟ್ಟಿನಲಿ.
ಹಸಿರು ಬಳುವಳಿಗೆ
ಬಸಿರು ಚಳುವಳಿಗೆ
ಕೊಸರುವುದನು ಹಿಮ್ಮೆಟ್ಟಿ
ಭ್ರಮೆಯ ತೆರೆ ಸರಿಸಲು.
ಜಂಜಾಟಕೆ ತಿಲಾಂಜಲಿ ನೀಡುತ .
ಕೊಳೆಯ ಕೊಚ್ಚಿ ಹೋಗಲು
ಭೋರ್ಗರೆವ ವರ್ಷನಿಗಾಗಿ
ಮತ್ತೆ ಮತ್ತೆ ಕಾಯುತ್ತೇನೆ.
ನೆತ್ತಿ ಸುಡುವುದನು
ಮುತ್ತಿ ಕುಕ್ಕುವುದು
ಹತ್ತಿಕ್ಕಿ ಸಾವರಿಸಲು
ಧುಮ್ಮಿಕ್ಕುವ ತೊರೆಯ ಕಾಣಲು.
ಮೈ ಮನ ಅರಳಿಸಲು
ಕೊರಳು ತುಂಬಿ
ನರಳುವುದನು ಬದಿಗಿರಿಸಿ
ಪ್ರತಿ ಫಲದ ಅಪೇಕ್ಷೆಯಲಿ.
ಚೈತ್ರ ತುಂಬಿಸಿ
ಮೈತ್ರಿ ಬದುಕಿಗೆ
ಸನ್ಮಿತ್ರನಿಗಾಗಿ ಕಾಯುತ್ತೇನೆ.
ಹಚ್ಚ ಹಸಿರಿನ ಬಯಕೆ ಹೊತ್ತು
ಕಚ್ಚುವುದನು ಬಿಸಾಡಿ
ಬಿಚ್ಚುವ ಹ್ಯಾರೈಕೆಯಲಿ
ಬೆಳಕು ತುಂಬುವ ದೀಪ ಧಾರೆಗೆ.
ರೇಷ್ಮಾ ಕಂದಕೂರ
ಚೆಂದದ ಕವಿತೆ
Sripad Algudkar ✍️