ಫಾಲ್ಗುಣ ಗೌಡ ಅಚವೆ
ಸುತ್ತಲೂ ಹರಡಿರುವ ತಂಪು ಬೆಳಕನು ಕಂಡು
ಸಣ್ಣ ಅಲೆ ಅಲೆಯುತಿದೆ ಇಳಿ ಸಂಜೆಯಲ್ಲಿ
ನದಿದಡದ ಮೌನಕ್ಕೆ ಶರಣಾಗಿದೆ ಜಗವು
ತಂಬೆಲರು ಕೇಳುತಿದೆ ಹಿರಿ ಜೀವವೆಲ್ಲಿ?
ಎಲ್ಲಿ ಹೋದನೋ ಅವನು? ದಾರಿ ಯಾವುದೋ ಎನೋ?
ಕಾಣದೂರಿನ ಕಾಡು ಇನ್ನೂ ಕಂಡೆ ಇಲ್ಲ
ದಿನದಿನವೂ ಬಂದಿಲ್ಲಿ ಕೂತು ಹರಟುವ ಜೀವ
ಕತ್ತಲಾದರೂ ಇನ್ನೂ ಬಂದೇ ಇಲ್ಲ.
ಹೊರಟ ದಾರಿಯ ದಿಕ್ಕು ಅವನ ಮನಸಿಗೆ ಗೊತ್ತು
ನಡೆದಷ್ಟು ದೂರದ ದಾರಿ ಅವನ ಜಗತ್ತು
ಸಂಸಾರ ಸಾಗರ ದಾಟಿ ಸಪ್ತ ಸಾಗರ ತಲುಪಿ
ಖುರ್ಚಿ ಖಾಲಿ ಮಾಡುವ ವೇಳೆ ಅವಗೂ ಗೊತ್ತು.
ಎಷ್ಟೆಲ್ಲಾ ದಿನದಿಂದ ಅಲೆಯ ಜೊತೆ ಸಂವಾದ
ನಡೆಸಿದ್ದ ಅನುದಿನವು ಖುರ್ಚಿಯಲ್ಲಿ
ಮನೆ ಮಂದಿ ಜನಕೆಲ್ಲ ಬೇಡವಾಗುವುದಕಿಂತ
ಸುಮ್ಮನೆ ಹೊರಡುವುದು ಯೋಗ್ಯವೆಂದು.
**********
ಚನ್ನಾಗಿದೆ ಸರ್
ಥ್ಯಾಂಕ್ ಯು ಮೇಡಮ್..
ತುಂಬಾ ಚೆನ್ನಾಗಿದೆ ಸರ್