‘ಪುರುಷಪ್ರಧಾನ ವ್ಯವಸ್ಥೆಯಲ್ಲಿ ನಲುಗಿದ ಹೆಣ್ಣು’ ವಿಶೇಷ ಲೇಖನ ಡಾ.ಸುರೇಖಾ ರಾಠೋಡ

[7:44 pm, 22/08/2024] Surekharathod: ಇದು ಎಂಥಾ ಲೋಕ…. ಹೆಣ್ಣು ಎಲ್ಲಿ ಬದುಕಬೇಕು … ಈ ಲೋಕದಲ್ಲಿ ಹೆಣ್ಣು ಮಕ್ಕಳಿಗೆ ನೆಮ್ಮದಿಯಾಗಿ ಬದುಕಲು ಈ ಪುರುಷ ಪ್ರಧಾನ ವ್ಯವಸ್ಥೆ ಬಿಡದಂತೆ ಕಾಡುತ್ತಿದೆ. ಹೆಣ್ಣು ಮಕ್ಕಳು ಶಿಕ್ಷಣ ಪದೆದು, ಉದ್ಯೋಗ ಪಡೆದುಕೊಳ್ಳಿ ಆ ಮೂಲಕ ಸಶಕ್ತರಾಗಿ, ಎಂದು ಹೇಳುತ್ತಿರುವಾಗ, ಹೆಣ್ಣು ಮಕ್ಕಳು ಕಷ್ಟ ಪಟ್ಟು ಶಿಕ್ಷಣ ಪಡೆದು ಉದ್ಯೋಗದಲ್ಲಿ ಸೇರಿಕೊಂಡು ಆರ್ಥಿಕವಾಗಿ ಸಬಲಳಾಗಿದ್ದರು ಕೂಡ ಪಾಪಿಗಳ ಕಣ್ಣು ಮಾತ್ರ, ನೆಮ್ಮದಿಯಾಗಿ ಬದುಕಲು ಬಿಡುವುದಿಲ್ಲ. ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಎಷ್ಟೇ ಉನ್ನತ ಮಟ್ಟದ ಸ್ಥಾನ ಪಡೆದರೂ ಅವಳನ್ನು ನೋಡುವ ನೋಟ ಕೇವಲ ಭೋಗದ ವಸ್ತುವಾಗಿ. ಯಾವಾಗಬೇಕಾದರೂ, ಎಲ್ಲಿಬೇಕಾದರೂ, ಹೇಗಾದರೂಮಾಡಿ ಪಡೆದುಕೊಳ್ಳಬೇಕು, ಒಪ್ಪಿಸಿಯಾದರೂ, ಇಲ್ಲ ಮೋಸಮಾಡಿಯಾದರೂ, ಇಲ್ಲಾ ಆಸೆ ತೋರಿಸಿಯಾದರೂ, ಇವು ಯಾವುದೆಕ್ಕೆ ಬಗ್ಗದಿದ್ದರೆ ಅತ್ಯಾಚಾರ ಮಾಡಿ ಕೊಲೆ ಮಾಡುವ ಮನಸ್ಥಿತಿ ಈ ಕೆಟ್ಟ ಮನಸ್ಥಿಯ ಕಾಮೋಕರದ್ದಾಗಿದ್ದೆ. ಗೋಮುಖ ವ್ಯಾಘ್ರರು ಎಲ್ಲಿ ಯಾವ ರೂಪದಲ್ಲಿ ಬಂದು ಹೆಣ್ಣಿನ ಮೇಲೆ ಎರಗುವರು ಗೊತ್ತಿಲ್ಲ.
ಸಮಾಜ ಏನೇ ಆದರೂ ದೂರವುದು ಮಾತ್ರ ಹೆಣ್ಣಿಗೆ. ಅವಳದೆ ತಪ್ಪು. ಅವಳ ನಡತೆಯೇ ಸರಿಯಿಲ್ಲ, ಅವಳು ಹೀಗಿರಬಾರದು ಹೀಗಿರಬೇಕಿತ್ತು….. ಹಾಗೆಹೇಗೆ ಎಂದು ಹೆಣ್ಣನ್ನೆ ದೂರುತ್ತಾರೆ. ಯಾಕೆ ಹೀಗೆ? ಯಾವಾಗಲೂ ಹೆಣ್ಣೇ ಏಕೆ ಬಲಿಯಾಗಬೇಕು, ಮಾಡದ ತಪ್ಪಿಗೆ ಶಿಕ್ಷೆ ಯಾಕೆ ಅನುಭವಿಸಬೇಕು? ಇದು ಎಂಥಾ ನ್ಯಾಯ?..  ಆದರೆ ನಮ್ಮ ಸಮಾಜ ಗಂಡು ಮಕ್ಕಳಿಗೆ ಯಾಕೆ ಹೇಳುವುದಿಲ್ಲ, ಹೆಣ್ಣು ಕೂಡ ಸಮಾನಳು, ಗಂಡಿನಷ್ಟೆ ಹಕ್ಕನ್ನು ಪಡೆದಿರುವಳು, ಸ್ವತಂತ್ರಳು, ಏನುಬೇಕಾದರೂ ಮಾಡಬಲ್ಲಲು, ಅವಳ ಇಷ್ಟದಂತೆ ಬದುಕುವ ಹಕ್ಕನ್ನು ಹೊಂದಿರುವಳು, ಪುರಷನ ಅಧಿನದಲ್ಲಿ ಬದುಕಬೇಕೆಂಬ ನಿಯಮವಿಲ್ಲ, ಹಾಗೇಯೆ ಹೆಣ್ಣು ಬೋಗದ ವಸ್ತುವಲ್ಲವೆಂದು. ಹೆಣ್ಣನ್ನು ಇದೇ ನೋಟದಿಂದ ನೋಡಿದರೆ ಸಮಾಜ ಇನ್ನೂ ಸಾವಿರ ವರ್ಷಗಳು ದಾಟಿದರು ಹೆಣ್ಣು ಸ್ವಾತಂತ್ರ್ಯ ಪಡೆದುಕೊಳ್ಳಲು ಸಾಧ್ಯವಿಲ್ಲ. ಮತ್ತೆ ಗಾಂಧಿ ಕಂಡ ಕನಸು ಎಂದು ನನಸಾಗುವುದಿಲ್ಲ.


ದೇಶಕ್ಕೆ ಸ್ವಾತಂತ್ರ್ಯ  ಬಂದು ಎಪ್ಪತ್ತೇಳು ವರ್ಷಗಳು ಕೆಳೆದರು ಅಂದಿನ ಸ್ಥಿತಿಗೆ ಮತ್ತು ಇಂದಿನ ಸ್ಥಿತಿಗೆ ಹೆಚ್ಚೇನು ಬದಲಾವಣೆಗಳೇನು ಕಂಡು ಬರುವುದಿಲ್ಲ. ೧೯೭೮ರಲ್ಲಿ ಅಂದು ರಾತ್ರಿ ಮುಂಬಯಿ ಶಹರದ ಆಸ್ಪತ್ರೆಯ ಕೆಲಸಕ್ಕೆ ಹೋದ ನರ್ಸ್ ಅರುಣಾ ಶಾನಭಾಗ್   ಅಲ್ಲಿಯೇ ಕಸಗುಡಿಸುವ ಕೆಲಸಗಾರನಿಂದ ಅತ್ಯಾಚಾರಕ್ಕೆ ಒಳಗಾಗಿ, ಸುಮಾರು ೪೦ ವರ್ಷಗಳ ಕಾಲ ಮೆದುಳು ನಿಷ್ಕ್ರಿಯವಾಗಿ ಹಾಸಿಗೆಯಲ್ಲಿಯೇ ಇದ್ದು ಜೀವ ಕಳೆದುಕೊಂಡಳು.( ಅರುಣಾ ಶಾನಭಾಗ ಹೊನ್ನಾವರದ ಹಳದೀಪುರದ ಗ್ರಾಮದವರು. )
ಈಗ ಕೊಲ್ಕತ್ತಾದಲ್ಲಿ ವೈದ್ಯ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ರಾತ್ರಿಪಾಳೆಯ ಕೆಲಸದಲ್ಲಿದ್ದಾಗ ರಾಕ್ಷಸನಂತೆ ಎರಗಿ ಅತ್ಯಾಚಾರ ಮಾಡಿ ಭೀಕರವಾಗಿ ಕೊಲೆ ಮಾಡಿದ ಘಟನೆ ನೋಡಿದರೆ, ಹೆಣ್ಣು ಮಕ್ಕಳಿಗೆ ಅಂದು ಮತ್ತು ಇಂದು ಯಾವುದೇ ರಕ್ಷಣೆಯಿಲ್ಲದ್ದು ಸ್ಪಷ್ಟ್ಟವಾಗಿ ಗೋಚರಿಸುತ್ತೆ. ಇದು ಅಷ್ಟೇ ಅಲ್ಲದೇ ಮಹಾರಾಷ್ಟ್ರ ರಾಜ್ಯದ ಬಾದಲಾಪುರ ಶಾಲೆಯೊಂದರಲ್ಲಿ ೩ ಮತ್ತು ೪ ವರ್ಷದ ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿರುವುದನ್ನು ನೋಡಿದರೆ, ಮನೆಯಲ್ಲಿ, ಶಾಲೆಯಲ್ಲಿ, ಆಸ್ಪತ್ರೆಯಲ್ಲಿ, ದೇವಸ್ಥಾನದಲ್ಲಿ, ರಸ್ತೆಯಲ್ಲಿ, ಕಛೇರಿಗಳಲ್ಲಿ ಎಲ್ಲಿ ಇದ್ದರೆ ಹೆಣ್ಣು ಮಕ್ಕಳು ಸುರಕ್ಷಿತರು ಎಂಬ ಪ್ರಶ್ನೇ ಕಾಡುತ್ತದೆ. ೪೭ರ ಸ್ವಾತಂತ್ರ್ಯಕ್ಕೆ  ೭೭ ವರ್ಷ ಮುಗಿದರು ಹೆಣ್ಣು ಪ್ರತಿನಿತ್ಯ  ಒಂದು ಕಡೆ, ಒಂದಲ್ಲಾ ಒಂದು ರೀತಿಯಲ್ಲಿ ಶೋಷಣೆ, ದೌರ್ಜನ್ಯ, ಅತ್ಯಾಚಾರ ಅನುಭವಿಸುತ್ತಿರುವುದನ್ನು ನೋಡಿದರೇ ಇದು ಎಂಥಾ ಲೋಕ…. ಹೆಣ್ಣು ಎಲ್ಲಿ ಬದುಕಬೇಕು ?… ಎಂಬ  ಪ್ರಶ್ನೆ ಕಾಡುತ್ತಿದೆ.
.———————————

6 thoughts on “‘ಪುರುಷಪ್ರಧಾನ ವ್ಯವಸ್ಥೆಯಲ್ಲಿ ನಲುಗಿದ ಹೆಣ್ಣು’ ವಿಶೇಷ ಲೇಖನ ಡಾ.ಸುರೇಖಾ ರಾಠೋಡ

  1. ಹೆಣ್ಣುಮಕ್ಕಳ ಅಭದ್ರತೆಯ ಭಾವ ಎಲ್ಲರಲ್ಲಿ ಕಾಡುತ್ತಿದೆ ಮೇಡಂ ಮಾನವೀಯತೆ ಮರೆಯಾಗಿದೆ ಕಂದಮಗಳಿಂದ ಹಿಡಿದು ವೃದ್ಧೆಯರನ್ನು ರಾಕ್ಷಸರು ಬಿಡುತ್ತಿಲ್ಲ

  2. ಇಂಥಹ ಪ್ರಸಂಗಗಳು ಒಮ್ಮೊಮ್ಮೆ ತಲ್ಲಣಗೊಳಿಸುವುದಂತೂ ನಿಜ…ಆದರೂ ಇಂದಿನ ಹೆಣ್ಣುಮಕ್ಕಳಿಗೆ ಸ್ವಯಂ ರಕ್ಷಣೆಗೋಸ್ಕರ ಒಂದಷ್ಟು ಕಲೆಗಳನ್ನು ಕಲಿತುಕೊಳ್ಳಬೇಕು..ಎಲ್ಲೋ ಒಂದು ಕಡೆಗೆ ನಡೆದ ಕೃತ್ಯಕ್ಕೆ ಇಡೀ ಪುರುಷ ವರ್ಗಕ್ಕೆ ದೂರುವುದು ಎಷ್ಟು ಸರಿ…

    1. ಇಡೀ ಪುರುಷ ವರ್ಗಕ್ಕೆ ಅಲ್ಲ ಸರ್ ಹೆಣ್ಣು ಮಕ್ಕಳನ್ನು ಕಾಮೋಕ ದೃಷ್ಟಿಯಿಂದ ಮತ್ತು ಭೋಗದ ವಸ್ತು ಎಂದು ಭಾವಿಸುವವರಿಗೆ ಮಾತ್ರ. ಎಲ್ಲೋ ಒಂದು ಕಡೆ ಅಲ್ಲ ಸರ್ ಪ್ರತಿ ನಿತ್ಯ ಹೆಣ್ಣು ಮಕ್ಕಳು ಒಂದಲ್ಲ ಒಂದು ರೀತಿಯ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ.

  3. ಇನ್ನೆಷ್ಟು ದಿನ ಶೋಷಣೆ. ಇದಕ್ಕೆಲ್ಲ ಕೊನೆ ಎಂದು

Leave a Reply

Back To Top