ಅಖಿಲ ಕರ್ನಾಟಕ ಪ್ರಥಮ ಗಜಲ್ ಸಮ್ಮೇಳನದ ಅದ್ಯಕ್ಷರಾದ ಶ್ರೀಮತಿ ಪ್ರಭಾವತಿ ಎಸ್ ದೇಸಾಯಿಯವರು 

ಶ್ರೀಮತಿ ಪ್ರಭಾವತಿ ಎಸ್ ದೇಸಾಯಿ ಇವರುನಮ್ಮ ನಾಠಿನ ಖ್ಯಾತ ಗಜಲ್ಕಾರರಲ್ಲಿ ಒಬ್ಬರು. ಅವರ ಗಜಲ್ ಗಳು ಗಜಲ್ ಲೋಕಕ್ಕೆ ಮಾದರಿ ಪಾಠದಂತೆ. ಇವರುರಾಯಚೂರಿನಲ್ಲಿ ದಿ.2-7-1947 ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣ ರಾಯಚೂರಿನಲ್ಲಿ , ಪ್ರೌಢ ಶಿಕ್ಷಣ ಮತ್ತು ಕಾಲೇಜು ಶಿಕ್ಷಣ ಗುಲಬರ್ಗಾದಲ್ಲಿ ಮುಗಿಸಿ , ಹುಬ್ಬಳ್ಳಿಯ ಸರಕಾರಿ ಮಹಿಳಾ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಫ್ಯಾಶನ್ ಡಿಜಾಯ್ನಿಂಗ್ ದಲ್ಲಿ ಡಿಪ್ಲೋಮಾ ಮುಗಿಸಿದ್ದಾರೆ. ನಂತರ ವಿಜಯಪುರದಲ್ಲಿ  ಸರಕಾರಿ ಮಹಿಳಾ ವೃತ್ತಿ ತರಬೇತಿ ಕೇಂದ್ರದಲ್ಲಿ ಹೊಲಿಗೆಯ ಮುಖ್ಯ ಬೋಧಕರೆಂದು ಕಾರ್ಯ ನಿರ್ವಹಿಸುತ್ತ ಎರಡು ಡಿಗ್ರಿಗಳನ್ನ ಹೊಂದಿದ್ದಾರೆ. ನಿವೃತ್ತಿ ಹೊಂದಿದ ಮೇಲೆ  ಎಂ.ಎ. ಪದವಿ ಹೊಂದಿದ್ದಾರೆ.ಅಲ್ಲಿಂದ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಅವರ ಒಟ್ಟು 20 ಕೃತಿಗಳು  ಪ್ರಕಟವಾಗಿವೆ. ಕವಿತೆ , ಹನಿಗವನ , ವಚನ , ಪ್ರಬಂಧ ,ಕಥೆ ,ಪ್ರವಾಸ ಕಥನ , ಗಜಲ್..ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃಷಿ ಮಾಡಿದ ಹೆಗ್ಗಳಿಕೆ ಅವರದು. ಅದರಲ್ಲೂ ಗಜಲ್ ಪ್ರಕಾರ ಅವರ ಮೆಚ್ಚಿನದು .! ಕನ್ನಡ ಗಜಲ್ ದಲ್ಲಿ ಏಳು ಪುಸ್ತಕಗಳು ಪ್ರಕಟವಾಗಿವೆ ಎಂಬುದು ಅತ್ತ ಹೆಮ್ಮೆಯ ಸಂಗತಿ..!
  ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಾದ ಸಂಯುಕ್ತ ಕರ್ನಾಟಕ ,ವಿಜಯವಾಣಿ ,ಹೊಸತು,ತರಂಗ, ಮಲ್ಲಿಗೆ, ಪ್ರಜಾವಾಣಿ, ಅಗ್ನಿ, ಕರ್ಮವೀರ ..ಗಳಲ್ಲಿ ಇವರ ಎಲ್ಲ ಬಗೆಯ ಸಾಹಿತ್ಯ ಪ್ರಕಟವಾಗಿವೆ. ಇವರು  ಒಳ್ಳೆಯ ವಿಮರ್ಶಕರೂ ಹೌದು.ಅನೇಕ  ಕೃತಿ- ವಿಮರ್ಶೆಗಳನ್ನೂ ಮಾಡಿದ್ಧಾರೆ.ಅನೇಕ ಕೃತಿ- ಪರಿಚಯಗಳನ್ನೂ ಮಾಡಿದ್ದು  ಪತ್ರಿಕೆಗಳಲ್ಲಿ ಪ್ರಕಟವಾಗಿವೆ.ಅಷ್ಟೇ ಅಲ್ಲದೆ ಆಕಾಶವಾಣಿ ಗುಲಬರ್ಗಾ ಕೇಂದ್ರದಿಂದ ಪುಸ್ತಕ ಪರಿಚಯ ಪ್ರಸಾರವಾಗಿವೆ.
 ವಿಜಯಪುರದಲ್ಲಿ ಪ್ರತಿ ವರ್ಷ ನಡೆಯುವ ನವರಸ ಉತ್ಸವದಲ್ಲಿ  ಕವನ ವಾಚನ ಮಾಡಿದಹಿರಿಮೆ ಇವರದು. ನಾಡಿನ ಎಲ್ಲ ಪ್ರಮುಖ ಸಾಹಿತ್ಯ ಸಮ್ಮೇಳನ,  ವಿಶ್ವ ಕನ್ನಡ ಸಮ್ಮೇಳನ ,ಅಖಿಲ ಭಾರತ ಕವಯಿತ್ರಿಯರ ಸಮ್ಮೇಳನ ಪೂನಾ,ಗುಜರಾತದ ವಡೋದರಾ ,ಮಧ್ಯಪ್ರದೇಶದ ಜಬಲಪುರ ಗಳಲ್ಲಿ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಸರಳ ಸಜ್ಜನಿಕೆಯ ಮೂರ್ತಿ , ಜ್ಞಾನದ ಗಣಿ , ಮಮತಾಮಯಿ ಅಕ್ಕನವರಿಗೆ ಅನೇಕ ಪ್ರಶಸ್ತಿಗಳುಲಭಿಸಿವೆ.ಅವುಗಳಲ್ಲಿ ಮುಖ್ಯವಾಗಿ ಹೀಗಿವೆ..


1- ಕರ್ನಾಟಕ ಸರಕಾರ ಕೊಡುವ ಕಿಥ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿ
2- ಜಿಲ್ಲಾ ರಾಜ್ಯೌತ್ಸವ ಪ್ರಶಸ್ತಿ
3- ರಾಷ್ಟ್ರ ಮಟ್ಟದ ಪರವೀನ್ ಬಾನು ಪ್ರಶಸ್ತಿ
4- ರಾಷ್ಟ್ರಮಟ್ಟದ ಮಾ ಶಾರದಾ ಪ್ರಶಸ್ತಿ
5- ಡಾ.ಶೈಲಜಾ ಹಾಸನ ದತ್ತಿ ಪ್ರಶಸ್ತಿ
6- ದಲಿತ ಸಾಹಿತ್ಯ ಪ್ರಶಸ್ತಿ ( ರಿ ) ಗದಗ. ಇವರುಬೆಳ್ಳಿ ಸಂಭ್ರಮ ನಿಮಿತ್ತ ಅಖಿಲ ಭಾರತ ಗಜಲ್ ಕಾವ್ಯ ಪ್ರಶಸ್ತಿ  ( 2022 ) ನೀಡಿ ಸನ್ಮಾನಿಸಿದ್ದಾರೆ.
7- ಮಹಾತ್ವಾಕಾಂಕ್ಷಿ ಸಾಮಾಜಿಕ ಸೇವಾ ಸಂಸ್ಥೆ ಮತ್ತು ಬಿಸಿಲು ನಾಡು ಪ್ರಕಾಶನ ಕಲಬುರಗಿ ಅವರು ಸಾಹಿತ್ಯ ಕ್ಷೇತ್ರದಲ್ಲಿ  ಸಾಧಕ ಶ್ರೀ ಪ್ರಶಸ್ತಿ – 2023 ನೀಡಿ ಗೌರವಿಸಿದ್ದಾರೆ.


ಶ್ರೀಮತಿ ಪ್ರಭಾವತಿ ದೇಸಾಯಿಯವರ ಪ್ರಕಟಿತ ಕನ್ನಡ ಗಜಲ್ ಕೃತಿಗಳು :

1- ಮೌನ ಇಂಚರ
2- ಮಿಡಿತ
3- ನಿನಾದ
4- ಭಾವಗಂಧಿ
5- ನಿನ್ನಹೆಜ್ಜೆಗೆ ನನ್ನ ಗೆಜ್ಜೆ ( ತರಹೀ ಗಜಲ್ )
6- ಒಲವ ಹಾಯಿ ದೋಣಿ
7- ಜೀವಭಾವದ  ಉಸಿರು ( ಜುಗಲ್ ಬಂದಿ ಗಜಲ್ ಗಳು )
8- ಒಳನೋಟ  (  ಗಜಲ್ ಕೃತಿಗಳ  ವಿಶ್ಲೇಷಣೆ )
9- ಸೆರಗಿಗಂಟಿದ ಕಂಪು


   ಯಾವ ಹಮ್ಮು- ಬಿಮ್ಮು ಇಲ್ಲದ ಶರಣೆಯಂಥ ಅಕ್ಕ ಪ್ರಭಾವತಿಯವರು  ಗಜಲನ್ನೇ ಉಸಿರಾಡುತ್ತಿರುವ, ಬತ್ತದ ಉತ್ಸಾಹಿಗಳು..! ಇಂದು ಅವರ ಮುಡಿಗೆ  ಅಖಿಲ ಕರ್ನಾಟಕ ಪ್ರಥಮ ಸಮ್ಮೇಳನದ ಪ್ರಥಮ ಮಹಿಳಾ ಸರ್ವಾಧ್ಯಕ್ಷೆಯ ಮಣಿ ಮುಕುಟ ಏರಿರುವುದು ನಮ್ಮ ನಾಡಿಗೆ , ಮಹಿಳಾಕುಲಕ್ಕೆ  ಹೆಮ್ಮೆಯೇ ಸರಿ.! ಅವರ ಅಧ್ಯಕ್ಷತೆಯಲ್ಲಿ ಗುಲ್ಮೋಹರ್ ಗುಲಬರ್ಗ ಅಂಗಳದಲ್ಲಿ ಗಜಲ್ ಘಮಲು  ಪಸರಿಸಲಿ. ಗಜಲ್ ನಾದ ರಿಂಗಣಿಸಲಿ..ಕನ್ನಡ ಗಜಲ್ ಲೋಕ ವಿಜೃಂಭಿಸಲಿ..

ಗಜಲ್ ಬಳಗಕ್ಕೆ ಮನದುಂಬಿದ  ಅಭಿನಂದನೆಗಳೊಂದಿಗೆ ಹಾರ್ದಿಕ ಶುಭಾಶಯಗಳು


Leave a Reply

Back To Top