ಗಜಲ್ ಸಂಗಾತಿ
ಅಖಿಲ ಕರ್ನಾಟಕ ಪ್ರಥಮ ಗಜಲ್ ಸಮ್ಮೇಳನದ ಅದ್ಯಕ್ಷರಾದ ಶ್ರೀಮತಿ ಪ್ರಭಾವತಿ ಎಸ್ ದೇಸಾಯಿಯವರಿಗೆ ಸಂಗಾತಿ ಬ್ಲಾಗ್ ಪತ್ರಿಕೆಯ ಸಂಪಾದಕೀಯ ಮಂಡಳಿಯ ಪರವಾಗಿ ಅಭಿನಂದನೆಗಳು
ಶ್ರೀಮತಿ ಪ್ರಭಾವತಿ ಎಸ್ ದೇಸಾಯಿ
ಶ್ರೀಮತಿ ಪ್ರಭಾವತಿ ಎಸ್ ದೇಸಾಯಿ ಅವರು ದಿನಾಂಕ ೨-೭-೧೯೪೭ರಂದು ರಾಯಚೂರಿನಲ್ಲಿ ಜನಿಸಿದರು.ಮಾಧ್ಯಮೀಕ ಶಿಕ್ಷಣ ರಾಯಚೂರಿನಲ್ಲಿ,ಪ್ರೌಢ ಶಿಕ್ಷಣ ಹಾಗೂ ಕಾಲೇಜ ಶಿಕ್ಷಣ ವನ್ನು ಗುಲಬರ್ಗಾ ದಲ್ಲಿ ಮುಗಿಸಿ ಹುಬ್ಬಳ್ಳಿ ಯ ಸರಕಾರಿ ಮಹಿಳಾ ತಾಂತ್ರೀಕ ಶಿಕ್ಷಣ ಸಂಸ್ಥೆಯಲ್ಲಿ ಫ್ಯಾಶನ್ ಡಿಜೈನಿಂಗ್ ದಲ್ಲಿ ಡಿಪ್ಲೊಮಾ ಮಾಡಿ ವಿಜಯಪುರ ದ ಸರಕಾರಿ ಮಹಿಳಾ ವೃತ್ತಿ ತರಬೇತಿ ಕೇಂದ್ರದಲ್ಲಿ ಹೊಲಿಗೆಯ ಮುಖ್ಯ ಭೋದಕರೆಂದು ಕಾರ್ಯ ನಿರ್ವಹಿಸುತ್ತಾ ಎರಡು ಪದವಿ(ಡಿಗ್ರಿ) ಮಾಡಿದ್ದಾರೆ.ನಿವೃತ್ತಿ ಹೊಂದಿದ ಮೇಲೆ ಎಮ್ ಎ ಪಾಸು ಮಾಡಿದ್ದಾರೆ.ಸೇವೆ ಯಿಂದ ನಿವೃತ್ತಿ ಹೊಂದಿದ ಮೇಲೆ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಒಟ್ಟು ೨೩ಕೃತಿಗಳು ಪ್ರಕಟವಾಗಿವೆ.ಕವಿತೆ,ಹನಿಗವನ,ಪ್ರಬಂಧ,ಆಧುನಿಕ ವಚನಗಳು,ಕಥೆ, ಪ್ರವಾಸ ಕಥನ,ಗಜಲ್ (ಕನ್ನಡ) ,ವಿಮಶೆ೯,ಹೀಗೆ ಎಲ್ಲಾ ಸಾಹಿತ್ಯ ಪ್ರಕಾರದಲ್ಲಿ ಕೃತಿಗಳು ಪ್ರಕಟವಾಗಿವೆ.ಕನ್ನಡ ಗಜಲ್ ದಲ್ಲಿ ಒಂಬತ್ತು ಕೃತಿಗಳು ಪ್ರಕಟವಾಗಿವೆ .
ಮಯೂರ,ಸಂಯುಕ್ತಕನಾ೯ಟಕ,ವಿಜಯವಾಣಿ,ಹೊಸತು,ಪ್ರಿಯಾಂಕ,ಮಲ್ಲಿಗೆ, ತರಂಗ, ಸಂದರ್ಶನ,ಜನಮಿಡಿತ,ಮುಂತಾದ ಪತ್ರಿಕೆಯಲ್ಲಿ ಇವರ ಕವಿತೆ,ಹನಿಗವನ,ಪ್ರಬಂಧ, ಕತೆ,ಗಜಲ್ ಗಳು ಪ್ರಕಟವಾಗಿವೆ.ಪ್ರಜಾವಾಣಿ,ಅಗ್ನಿ,ಕರ್ಮವೀರ,ಪತ್ರಿಕೆಯಲ್ಲಿ ಇವರ ಪುಸ್ತಕ ಗಳ ವಿಮಶೆ೯ ಪ್ರಕಟವಾಗಿವೆ.ಆಕಾಶವಾಣಿ ಗುಲಬರ್ಗಾ ನಿಲಯದಿಂದ ಇವರ ಪುಸ್ತಕ ಗಳ ಪರಿಚಯ ಪ್ರಸಾರವಾಗಿವೆ.ಆನ್ ಲೈನ್ ಪತ್ರಿಕೆಗಳಾದ ಸಂಗಾತಿ,ವಿಶ್ವಧ್ವನಿ,ಇ-ಸುದ್ದಿ,ಶ್ರಾವಣ,ಜನದನಿ,ಮುಂತಾದವುಗಳಲ್ಲಿ ಇವರ ಗಜಲ್ ಗಳು,ಹಾಗೂ ಪುಸ್ತಕಗಳ ವಿಮಶೆ೯ಗಳು ಪ್ರಕಟವಾಗಿವೆ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದ ಕವಿ ಗೋಷ್ಠಿಗಳಲ್ಲಿ ಕವನ,ಗಜಲ್ ಗಳನ್ನು ವಾಚನಮಾಡಿದ್ದಾರೆ.ವಿಜಯಪುರ ದಲ್ಲಿ ನಡೆಯುವ ನವರಸಪುರ ಉತ್ಸವದಲ್ಲಿ ಭಾಗವಹಿಸಿ ಗಜಲ್ ಕವಿತೆ ಗಳನ್ನು ವಾಚನ ಮಾಡಿದ್ದಾರೆ.ವಿಜಯಪುರ ದಲ್ಲಿ ಜರುಗಿದ ಅಖಿಲ ಭಾರತ ಕವಿಯತ್ರಿಯರ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವಿತೆ ವಾಚನ ಮಾಡಿದ್ದಾರೆ. ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ನಡೆದ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಸ್ವರಚಿತ ವಚನಗಳನ್ನು ವಾಚನ ಮಾಡಿದ್ದಾರೆ . ಕನಾ೯ಟಕ ಸಾಹಿತ್ಯ ಅಕಾಡೆಮಿ ಬೆಂಗಳೂರ ಇವರು ನಡೆಸಿದ “ಕನ್ನಡ ಗಜಲ್ ಸಂಜೆ” ಕಾರ್ಯಕ್ರಮ ದಲ್ಲಿ ಭಾಗ ವಹಿಸಿ ಗಜಲ್ ವಾಚನ ಮಾಡಿದ್ದಾರೆ. ಮೈಸೂರು ದಸರಾ ವಿಶ್ವ ವಿಖ್ಯಾತ ಕವಿ ಗೋಷ್ಠಿಯಲ್ಲಿ,ಕವನ ವಾಚನ ಮಾಡಿದ್ದಾರೆ.ಜಿಲ್ಲಾ ಸಾಹಿತ್ಯ ಸಮ್ಮೇಳನ ಗಳಲ್ಲಿ ಭಾಗವಹಿಸಿದ್ದಾರೆ.ಮಹಾರಾಷ್ಟ್ರ ದ ಪುನಾದಲ್ಲಿ,ಗುಜರಾತದ ವಡೋಧರ ಹಾಗೂ ಮಧ್ಯಪ್ರದೇಶದ ಜಬಲಪುರ ಗಳಲ್ಲಿ ನಡೆದ ಅಖಿಲ ಭಾರತ ಕವಯತ್ರಿಯರ ಸಮ್ಮೇಳನಗಳಲ್ಲಿ ಭಾಗ ವಹಿತಸಿ ಕವಿತೆ, ಗಜಲ್ ಗಳನ್ನು ವಾಚನಮಾಡಿದ್ದಾರೆ.
೧.ಕನಾ೯ಟಕ ಸರಕಾರ ಕೊಡುವ ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿ,೨.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ೩.ರಾಷ್ಟ್ರಮಟ್ಟದ ಮಾ.ಶಾರದಾ ಪ್ರಶಸ್ತಿ, ೪.ರಾಷ್ಟ್ರಮಟ್ಟದ ಪರವಿನ್ ಭಾನು ಪ್ರಶಸ್ತಿ.೫., ಡಾ ಶೈಲಜಾ ಹಾಸನ ಇವರ ದತ್ತಿ ಪ್ರಶಸ್ತಿ, ೬.ದಲಿತ ಸಾಹಿತ್ಯ ಪರಿಷತ್ತು (ರಿ) ,ಗದಗ ಇವರು ಬೆಳ್ಳಿ ಸಂಭ್ರಮ ನಿಮಿತ್ಯ “ಅಖಿಲ ಭಾರತ ಗಜಲ್ ಕಾವ್ಯ ಪ್ರಶಸ್ತಿ” ನೀಡಿ ೨೦೨೨ ರಲ್ಲಿ ಸನ್ಮಾಸಿದ್ದಾರೆ. ೭.ಮಹತ್ವಾಕಾಂಕ್ಷಿ ಸಾಮಾಜಿಕ ಸೇವಾ ಸಂಸ್ಥೆ ಹಾಗೂ ಬಿಸಿಲುನಾಡು ಪ್ರಕಾಶನ ಕಲಬುರಗಿ ಅವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದಕ್ಕೆ ಸಾಧಕ ಶ್ರೀ ಪ್ರಶಸ್ತಿ-೨೦೨೩ ನೀಡಿ ಗೌರವಿಸಿದ್ದಾರೆ. ಹೀಗೆ ಅನೇಕ ಪ್ರಶಸ್ತಿ ಗಳನ್ನು ಪಡೆದಿದ್ದಾರೆ. ೮ . ಅನೇಕ ಸಾಹಿತ್ಯ ಸ್ಪದೆ೯ ಗಳಲ್ಲಿ ಬಹುಮಾನಗಳನ್ನು ಪಡೆದಿದ್ದಾರೆ.
ಇವರ ಪ್ರಕಟಿತ ಕನ್ನಡ ಗಜಲ್ ಗಳ ಕೃತಿಗಳು
೧. ಮೌನ ಇಂಚರ…..೨೦೦೭
೨.ಮಿಡಿತ…..೨೦೧೪
೩.ನಿನಾದ….೨೦೧೮
೪.ಭಾವಗಂಧಿ….೨೦೨೦
೫ .ನಿನ್ನ ಹೆಜ್ಜೆಗೆ ನನ್ನ ಗೆಜ್ಜೆ(ತರಹೀ ಗಜಲ್)೨೦೨೧
೬. ಒಲವ ಹಾಯಿದೋಣಿ….೨೦೨೨
೭.ಜೀವ ಭಾವದ ಉಸಿರು(ಜುಗಲ್ ಬಂದಿ ಗಜಲ್ ಗಳು, )೨೦೨೩
೮.ಒಳನೋಟ(ಗಜಲ್ ಕೃತಿಗಳ ವಿಶ್ಲೇಷಣೆ) ….೨೦೨೩
೯.ಸೆರಗಿಗಂಟಿದ ಕಂಪು(ಗಜಲ್ ಸಂಕಲನ)………೨೦೨೪
೧೦.ಬೆಸೆದ ಭಾವಕೆ ಒಲವ ನಾದ(ಜುಗಲ್ ಬಂದಿ ಗಜಲ್)…..೨೦೨೪
೧೧. ಪಿಸುಮಾತು(ದ್ವಿಪದಿಗಳು). (ಅಚ್ಚಿನಲ್ಲಿದೆ)
ಪ್ರಕಟಿತ ಇತರ ಸಂಕಲನಗಳು
೧. ಮೌನಇಂಚರ(ಕವನ ಸಂಕಲನ)…..೨೦೦೨
೨.ಮುಂಗಾರು ಹನಿಗಳು(ಹನಿಗವನ ಸಂಕಲನ)…೨೦೦೫
೩.ರಂಗಸ್ಪಂದನ………ಸಂಪಾದಿದ ಕೃತಿ …….೨೦೦೬
೪.ಮೊಬೈಲ್ ಪಯಣ ಹಾಗೂ ಇತರ ಪ್ರಬಂಧಗಳು …೨೦೦೯
೫.ಶಾಂತಪ್ರಭೆಯ ನವವಚನಗಳು…ಆಧುನಿಕ ವಚನಗಳು ೨೦೧೧
೬.ಮಧುಸಾರ(ಹನಿಗವನಗಳು)……೨೦೧೨
೭.ಮುಸ್ಸಂಜೆ ( ಕಥಾಸಂಕಲನ) ..೨೦೧೨
೮.ವಚನ ಪ್ರಭೆ (ಆಧುನಿಕ ವಚನಗಳು)೨೦೧೩
೯.ಪಕ್ಷಿನೋಟ. (ಲಂಡನ್ ಪ್ರವಾಸ ಕಥನ). ೨೦೧೪
೧೦.ಸ್ವಚ್ಛಭಾರತ ಹಾಗೂ ಇತರ ಪ್ರಬಂಧಗಳು ೨೦೧೫
೧೧.ಮಿಶ್ರ ಕಾವ್ಯ…(ಕವನ ಸಂಕಲನ). ೨೦೧೬
೧೨.ವಚನ ಮಿಂಚು (ಆಧುನಿಕ ವಚನಗಳು). ೨೦೧೭
೧೩.ಕಪ್ಪು ಹಣ ಹಾಗೂ ಇತರ ಪ್ರಬಂಧಗಳು…..೨೦೧೯
ಪ್ರಭಾವತಿ ದೇಸಾಯಿ ಮೇಡಮ್ ಅವರು ಇದೇ ಅಗಷ್ಟ 25 ರಂದು ಕಲಬುರ್ಗಿಯಲ್ಲಿ ಜರುಗುವ ಅಖಿಲ ಕರ್ನಾಟಕ ಪ್ರಥಮ ಗಜಲ್ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ನಮಗೆಲ್ಲರಿಗೂ ಖುಶಿ ಮತ್ತು ಹೆಮ್ಮೆಯ ವಿಷಯವಾಗಿದೆ.ಮೇಡಮ್ ಅವರಿಗೆ ಅಭಿನಂದನೆಗಳು.
ವಿಳಾಸ
ಪ್ರಭಾವತಿ ಎಸ್ ದೇಸಾಯಿ
ಗಿರಿತಾರೆ ಬಿಲ್ಡಿಂಗ್
ವಿವೇಕ ನಗರ (ಪಶ್ಚಿಮ)
ಬಸವನ ಬಾಗೇವಾಡಿ ರೋಡ
ವಿಜಯಪುರ ೫೮೬೧೦೯
ಮೊ. ೯೯೦೦೪೯೩೩೨೭
ಮೊ,೮೪೦೮೮೫೪೧೦೮
desaiprabhavati@gmail.
ಅನಸೂಯ ಜಹಗೀರದಾರ