ಕಾವ್ಯ ಸುಧೆ(ರೇಖಾ)ಅವರ ಕವಿತೆ-ನಿರೀಕ್ಷೆ

ನಿರೀಕ್ಷೆ ಎಂಬದೊಂದು ಶಬ್ದ ಮಾತ್ರವಲ್ಲ 
ಅದೊಂದು ಧ್ಯಾನಸ್ಥ ಪಯಣ

ರಿಂಗಣಿಸುವುದು ನಿನ್ನ ಹೆಸರು
ಮೌನವಾಗಿರುವಾಗಲು ನಾನು
ಅರಿವೆಲ್ಲಿದೆ ಅದರದು ನಿನಗಾದರು.

ಹಾತೊರೆಯುವವು ಕಂಗಳು
ನಿನ್ನ ಕಾಣಲು ಹಗಲಿರುಳು
ಇದೆಯೆ ನಿನಗದರ ಪರಿವೆ ಹೇಳು

ಕಾಯುತಿವೆ ಎನ್ನ ಕಿವಿಗಳು
ಸುಖದು:ಖದ ನಿನ್ನ ಮಾತುಗಳ ಕೇಳಲು
ಸೋತಿಹೆ ನೀನದ ಅರ್ಥ ಮಾಡಿಕೊಳ್ಳಲು

ಕಾಣುವಾತುರ ನಿನ್ನ ವಸಂತಕಾಲದಲಿ
ಸೇರುವಾಸೆಯಿ ಚಂಚಲ ಮನಸಿಗೆ
ನಿನ್ನ ಶರತ್ಕಾಲದಲಿ

ನನಸಲ್ಲಿ ಸಿಗದ ನಿನ್ನ ಹುಡುಕುತ್ತೇನೆನ್ನ ಕನಸಿನಲಿ
ಅಲ್ಲಿಯೂ ಸಿಗದ ನಿನಗಾಗಿ ಬಿಕ್ಕುತ್ತೇನೆ ನಿಶ್ಯಬ್ದದಲಿ

ಕಾಯುವುದು ನಿನಗಾಗಿ ದೇವರೆನಗಿತ್ತ ಶಾಪ
ಸೇರಿದಾಗಲಷ್ಟೆ ನಿನ್ನ ಕಳೆಯುವುದೆನ್ನ ತಾಪ

ಜೊತೆ ನೀನಿರಲು ಜೀವನ ಸಂತಸದ ಸುಖದ ಸರಕು
ನೀನಿಲ್ಲವಾದರೆ ಜೊತೆಗೆ ನರಕಸದೃಶವೀ ಬದುಕು


2 thoughts on “ಕಾವ್ಯ ಸುಧೆ(ರೇಖಾ)ಅವರ ಕವಿತೆ-ನಿರೀಕ್ಷೆ

  1. ನಿರೀಕ್ಷೆ ಯಾನ ಅತ್ಯದ್ಭುತವಾಗಿ ಮೂಡಿಬಂದಿದೆ

Leave a Reply

Back To Top