ಭೋವಿ ರಾಮಚಂದ್ರ ಅವರ ಕವಿತೆ-ನನ್ನ ಬುದ್ಧ .

ನಾನು ಹಿಂದು
ಇನ್ನೊಬ್ಬ ಮುಸ್ಲಿಂ
ಮತ್ತೊಬ್ಬ ಕ್ರೈಸ್ತ ಜೈನ ಬೌದ್ಧ
ಅವನೊಬ್ಬ ಮನುಷ್ಯ ಸಂಘದ ಬುದ್ಧ.

ಶಾಂತಿಯ ಪುರಾಣ
ಸತ್ಯ ಧರ್ಮದ ರಾಮಾಯಣ
ಕಂಡಿದ್ದು ಸತ್ಯದ ಬಾಣ
ಎದೆಗೆ ಚುಚ್ಚಿ ರಕ್ತ ಚಿಮ್ಮಿದ್ದು ಅಧರ್ಮದ ಗುಣ
ಧರ್ಮ ಅರ್ಥ ಕಾಮ ಮೋಕ್ಷದಲ್ಲಿ ಕೊನೆಗೆ ಜಯಸಿದ್ದು
ವಿಶ್ವ ಕಂಡ ಬುದ್ಧಯಾನ .

ಆಧುನಿಕತೆಯ ಯಂತ್ರಗಳಾಗಿ
ಸುಖ ಶಾಂತಿ ಸಂಪತ್ತಿನ ಹಿಂಬಾಲಕರಾಗಿ
ಜಯಸಿದ್ದು ಅಪಾರ್ಥದ ಬಂಧ
ಕಳೆದುಕೊಂಡಿದ್ದು ಅಮೂಲ್ಯದ‌ ಅನುಬಂಧ
ಯೋಗ ಭೋಗ ಬಂಧ ಅನುಬಂಧವನ್ನು ತೊರೆದು, ಜ್ಞಾನ ಮಾನವನಾಗಿ ಜಯಸಿದ್ದು ನನ್ನ ಬುದ್ಧ ‌.

ರಕ್ತ ಮಾಂಸದಲ್ಲಿ ಮಣ್ಣು ಸೇರುವ ದೇಹಕ್ಕೆ
ಭವ್ಯ ಕಟ್ಟಡಗಳ ಎತ್ತರದ ಗೋಡೆಗಳು ,
ಅದೇ ರಕ್ತ ಮಾಂಸದಲ್ಲಿ ಮಣ್ಣು ಸೇರುವ ಮೂಕ ದೇಹಕ್ಕೆ ಕಾನನದ ಹಸಿರು ತೋರಣಗಳು.

ರಕ್ತ ಮಾಂಸದ ಭೋಗದ ದೇಹಕ್ಕೆ ಅರಮನೆಯ ಸಿದ್ಧಾರ್ಥ
ಕಾನನದ ಮೂಕ ಧ್ವನಿಗೆ ಬುದ್ಧನ ಅರ್ಥ
ಇವ ನನ್ನ ಬುದ್ಧ
ಜ್ಞಾನದ ಭೂಮಿಯನ್ನು ಸುತ್ತಿ ತನ್ನ ಅರ್ಥವ‌ ಗೆದ್ದ.


Leave a Reply

Back To Top