ರತ್ನರಾಯಮಲ್ಲ ಅವರ ಹೊಸ ಗಜಲ್

ನೀ ನನ್ನ ಬಾಳಿನ ಮಹಾಲಕ್ಷ್ಮೀ ಪೂಜಿಸುವೆ ಅನುದಿನ
ನೀ ನನ್ನ ಮನ ಗೆದ್ದ ಮನದರಸಿ ಮುದ್ದಿಸುವೆ ಅನುದಿನ

ನಿನ್ನ ನೋಡುತಿರಲು ಬೇರೇನೂ ಕಾಣಿಸದು ಈ ಕಂಗಳಿಗೆ
ನೀ ನನ್ನ ಅಮಲಿನ ಮಧುಬಾಲೆ ಪ್ರೀತಿಸುವೆ ಅನುದಿನ

ನಿನ್ನ ಮೈಮಾಟದ ವಕ್ರ ರೇಖೆಗಳು ಹುಚ್ಚು ಹಿಡಿಸಿವೆ ನನ್ನನು
ನೀ ನನ್ನ ಮಿಥುನಂಗಳದ ಓಕುಳಿ ಚುಂಬಿಸುವೆ ಅನುದಿನ

ಹಗಲಿರುಳಿನ ಗಡಿರೇಖೆ ಅಳಿಸಿರುವೆ ನಮ್ಮಿಬ್ಬರ ಸಂಗಮಕೆ
ನೀ ನನ್ನ ನಾಕದ ರಹದಾರಿ ಪ್ರೀತಿ ಚಿಮ್ಮಿಸುವೆ ಅನುದಿನ

ಮಲ್ಲಿಗೆಯ ಸುಮವು ಅರಳಿದೆ ನಿನ್ನ ಬಿಸಿ ಆಲಿಂಗನದಲಿ
ನೀ ನನ್ನ ಜೀವ ಸಂಗಾತಿ ಉಸಿರನು ಸೇರಿಸುವೆ ಅನುದಿನ


Leave a Reply

Back To Top